ಶಿವಮೊಗ್ಗ

ಅಪ್ಪಾಜಿ ಬೆಂಬಲಿಗರಿಂದ ದೌರ್ಜನ್ಯ: ಸಂಗಮೇಶ್ವರ್

Published On :

ಕ.ಪ್ರ. ವಾರ್ತೆ, ಭದ್ರಾವತಿ, ಏ.30
ಪಕ್ಷೇತರ ಅಭ್ಯರ್ಥಿ ಬಿ.ಕೆ. ಸಂಗಮೇಶ್ವರ್ ತಮ್ಮ ಕಾರ್ಯಕರ್ತರನ್ನು ಭೇಟಿ ಮಾಡಲು ಕೆಂಚೇನಹಳ್ಳಿಯ ನೀರುಗುಂಡಿ ಗ್ರಾಮಕ್ಕೆ ಭೇಟಿನೀಡಿದಾಗ ಹಲವರು ಅಡ್ಡಿಪಡಿಸಿದ್ದಾರೆಂದು ಅವರು ಪೊಲೀಸರಿಗೆ ದೂರಿ ನೀಡಿದ್ದಾರೆ.
ರಾಕೇಶ, ವಿನಯ, ಸಿದ್ದಲಿಂಗ, ಮಾವಿನಕೆರೆ ಗ್ರಾಪಂ ಸದಸ್ಯ ಸುರೇಶ್, ನೀರುಗುಂಡಿ ಗ್ರಾಮದ ಕೆಲವರು ಗುಂಪು ಕಟ್ಟಿಕೊಂಡು ತಮ್ಮನ್ನು ಗ್ರಾಮದೊಳಗೆ ಹೋಗದಂತೆ ಅಡ್ಡಗಟ್ಟಿ, ಅವಾಚ್ಯ ಶಬ್ದಗಳಿಂದ ಬೈಯುತ್ತಾ ಆಯುಧಗಳಿಂದ ಮಾರಣಾಂತಿಕ ಹಲ್ಲೆ ನಡೆಸಲು ಪ್ರಯತ್ನಿಸಿದರೆಂದೂ ಹೊಸಮನೆ ಶಿವಾಜಿ ವೃತ್ತ ಪೋಲಿಸ್ ಠಾಣೆಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.
ಹಲ್ಲೆ ಮಾಡಲು ಯತ್ನ: ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಮಾಜಿ ಶಾಸಕ ಎಂ.ಜೆ. ಅಪ್ಪಾಜಿ ಅವರ ಪಟಾಲಂ ಕೃತ್ಯ ಇದಾಗಿದೆ ಎಂದು ಆರೋಪಿಸಿದ್ದಾರೆ. ತಮ್ಮ ದಾರಿಗೆ ಎತ್ತಿನಗಾಡಿ ಅಡ್ಡವಾಗಿಟ್ಟು ತಡೆಯೊಡ್ಡಿ ತಮ್ಮ ಮೇಲೆ ಹಲ್ಲೆ ಮಾಡಲು ಯತ್ನಿಸಿದರೆಂದೂ ದೂರಿದ ಅವರು, ಜನಪ್ರತಿನಿಧಿಯಾದ ತಮಗೇ ಈ ಪರಿಸ್ಥಿತಿಯಾದರೆ ಜನಸಾಮಾನ್ಯರ ಗತಿ ಏನು ಎಂದು ಪ್ರಶ್ನಿಸಿದರು.
ಇವರ ಗೂಂಡಾ ಪ್ರವೃತ್ತಿಯನ್ನು ಸಹಿಸಲಾರದೆ ಜನರು ಅವರನ್ನು ತಿರಸ್ಕರಿಸಿದ್ದಾರೆ. ಗೊಂದಿಯಲ್ಲಿ ತಮ್ಮ ಕಾರ್ಯಕರ್ತರಾದ ಕೃಷ್ಣೇಗೌಡ ಎಂಬವರ ಮನೆಗೆ ನುಗ್ಗಿ ಮಂಜಾನಾಯ್ಕ ಎಂಬ ಅಪ್ಪಾಜಿ ಶಿಷ್ಯ ಅವರ ಮೇಲೆ ಸೋಮವಾರ ಹಲ್ಲೆ ನಡೆಸಿದ್ದಾರೆಂದು ಸಂಗಮೇಶ್ವರ್ ಆರೋಪಿಸಿ ಈ ಬಗ್ಗೆ ಭದ್ರಾವತಿ ಗ್ರಾಮಾಂತರ ಠಾಣೆಯಲ್ಲಿ ದೂರು ನೀಡಲಾಗಿದೆ ಎಂದು ತಿಳಿಸಿದರು.
ಪ್ರಚಾರಕ್ಕೆ ಅಡ್ಡಿ: ಅಖಿಲ ಭಾರತ ಅಣ್ಣಾ ಡಿಎಂಕೆ ಪಕ್ಷದ ಭದ್ರಾವತಿ ಘಟಕದ ಅಧ್ಯಕ್ಷ ಕೋದಂಡಪಾಣಿ, ತಮ್ಮ ಕಾರ್ಯಕರ್ತರು ಸಂಗಮೇಶ್ವರ್ ಅವರ ಪರ ಪ್ರಚಾರ ಮಾಡಲು ತಾಷ್ಕೆಂಟ್ನಗರ ಮತ್ತು ಕಾಳಿಂಗನಾಳ್ ಗ್ರಾಮಗಳಿಗೆ ಹೋದಾಗ ಅಪ್ಪಾಜಿಯವರ ಬೆಂಬಲಿಗರು ಪ್ರಚಾರಕ್ಕೆ ತಡೆಯೊಡ್ಡಿದ್ದಾರೆಂದು ಆರೋಪಿಸಿದರು.
ಅನ್ವರ್ ಕಾಲೋನಿಯಲ್ಲಿ ಪ್ರಚಾರದಲ್ಲಿ ತೊಡಗಿದ್ದಾಗ ಕಾಂಗ್ರೆಸ್ ಅಭ್ಯರ್ಥಿ ಇಬ್ರಾಹಿಂ ಅವರ ಸಹೋದರ ಸಾದಿಕ್ ತಮ್ಮನ್ನು ತಡೆದು ಪ್ರಚಾರಕ್ಕೆ ಅಡ್ಡಿಪಡಿಸಲು ಯತ್ನಿಸಿದರೆಂದು ಸಂಗಮೇಶ್ವರ್ ಆಪಾದಿಸಿದರು. ಗೋಷ್ಠಿಯಲ್ಲಿ ಮಣಿಶೇಖರ್, ರೇಣುಕಮ್ಮ, ಕಣ್ಣಪ್ಪ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.