ಶಿವಮೊಗ್ಗ

ಶುಚಿತ್ವಕ್ಕೆ ಮಹತ್ವ ನೀಡಿ: ಸುಂದರೇಶ್

Published On :

ತೀರ್ಥಹಳ್ಳಿ: ಕ್ಷೀರಭಾಗ್ಯ ಯೋಜನೆಗೆ ಕುವೆಂಪು ಶಾಲೆಯಲ್ಲಿ ಚಾಲನೆ ನೀಡಲಾಯಿತು. ತಾಪಂ ಅಧ್ಯಕ್ಷೆ ಜೀನಾ ವಿಕ್ಟರ್ ಅಧ್ಯಕ್ಷತೆಯಲ್ಲಿ ನೆಡೆದ ಸಮಾರಂಭದಲ್ಲಿ ಶಾಲಾ ಮಕ್ಕಳಿಗೆ ಹಾಲು ನೀಡಲಾಯಿತು.
ಜಿಪಂ ಸದಸ್ಯ ಡಾ.ಟಿ.ಎಲ್. ಸುಂದರೇಶ್ ಮಾತನಾಡಿ, ಆರೋಗ್ಯವಂತ ಮನಸ್ಸಿಗೆ ಹಾಲು ಉತ್ತಮ ಆಹಾರ. ಈಗಾಗಲೇ ಯಶಸ್ವಿಯಾಗಿರುವ ಬಿಸಿಯೂಟ ಯೋಜನೆಯಂತೆ ಕ್ಷೀರ ಭಾಗ್ಯ ಯೋಜನೆ ಒಂದಾಗಲಿದೆ ಎಂದರು.
ತಾಪಂ ಸದಸ್ಯ ಕೆಸ್ತೂರು ಮಂಜುನಾಥ ಮಾತನಾಡಿ, ಮಕ್ಕಳು ದೇಶದ ಆಸ್ತಿ. ಸ್ಥಿರತೆ ಮತ್ತು ದೃಢತೆಗಾಗಿ ಹಾಲು ಉತ್ತಮ ಪೌಷ್ಠಿಕ ಆಹಾರ. 15ದಿನಕ್ಕೊಮ್ಮೆ ಶಾಲಾ ಉಸ್ತುವಾರಿ ವಿಭಾಗ  ಹಾಲು ತಯಾರಿಕಾ ವ್ಯವಸ್ಥೆಯ ಶುಚಿತ್ವದ ಕಡೆ ಗಮನ ಹರಿಸಬೇಕು ಎಂದು ಹೇಳಿದರು. ಕ್ಷೀರಭಾಗ್ಯ ಯೋಜನೆಯ  ಕಿರುಪರಿಚಯ ಮಾಡಿದ ಕ್ಷೇತ್ರ ಶಿಕ್ಷಣಾಧಿಕಾರಿ ಕೃಷ್ಣಮೂರ್ತಿ, ರಕ್ತಹೀನತೆ ಮತ್ತು ಅಪೌಷ್ಠಿಕತೆಯ  ಕೊರತೆ ನೀಗಿಸುವ ನಿಟ್ಟಿನಲ್ಲಿ ಈ ಯೋಜನೆ ಸಹಕಾರಿಯಾಗಿದೆ ಎಂದರು.
ಕಾರ್ಯನಿರ್ವಣಾಧಿಕಾರಿ ಪುಟ್ಟಸ್ವಾಮಿ, ಅಕ್ಷರ ದಾಸೋಹದ ಅಧಿಕಾರಿ ಗಿರಿರಾಜ್, ತಹಸೀಲ್ದಾರ್ ಲಿಂಗಯ್ಯ, ತಾಪಂ ಸದಸ್ಯ ಬಾಳೇಹಳ್ಳಿ ಪ್ರಭಾಕರ್, ಜಿಪಂ ಸದಸ್ಯ ಹಾರೊಗೊಳಿಗೆ ಪದ್ಮನಾಭ, ಡಿ.ಎಸ್. ವಿಶ್ವನಾಥ ಶೆಟ್ಟಿ, ಸುರೇಶ್ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.