ನಾಲ್ಕು ದಿನಗಳ ರೇಷ್ಮೆ ಉತ್ಸವಕ್ಕೆ ಚಾಲನೆ
ಶಿವಮೊಗ್ಗ: ನಗರದ ರಾಯಲ್ ಆರ್ಕೆಕೇಡ್ನಲ್ಲಿ ಗುರುವಾರದಿಂದ ನಾಲ್ಕು ದಿನಗಳ ಕಾಲ ರೇಷ್ಮೆ ಉತ್ಸವ ಆರಂಭಗೊಂಡಿದೆ.
ಜಿಲ್ಲಾ ಪರಿಷತ್ ಉಪಾಧ್ಯಕ್ಷರಾದ ಹೇಮಾ ಪವಾನಿ ಉತ್ಸವಕ್ಕೆ ಚಾಲನೆ ನೀಡಿ, ರೇಷ್ಮೆ ಸೀರೆಗಳ ಹಾಗೂ ಬಟ್ಟೆಗಳ ಉತ್ಪಾದಕರಿಂದ ನೇರವಾಗಿ ಮಾರಾಟಗೊಳ್ಳುತ್ತಿರುವುದು ರೇಷ್ಮೆ ಉತ್ಪನ್ನಕ್ಕೆ ಒಂದು ಉತ್ತೇಜನ ನೀಡಿದೆ ಎಂದರು.
ಈ ರೇಷ್ಮೆ ಉತ್ಸವಗಳಲ್ಲಿ ವಿವಿಧ ರಾಜ್ಯಗಳಿಂದ 30ಕ್ಕೂ ಹೆಚ್ಚು ರೇಷ್ಮೆ ಉತ್ಪಾದಕರು ಆಗಮಿಸಿರುವುದು ವಿಶೇಷ. ಕರ್ನಾಟಕ, ತಮಿಳುನಾಡು, ಆಂಧ್ರ ಪ್ರದೇಶ, ಓರಿಸ್ಸಾ, ಪಶ್ಚಿಮ ಬಂಗಾಳ ಹಾಗೂ ಜಾರ್ಖಂಡ್ನಿಂದ ಆಗಮಿಸಿ ತಾವು ತಯಾರಿಸಿದ ವಿಶೇಷ ಸೀರೆಗಳ ಬಟ್ಟೆಗಳ ಹಾಗೂ ರೇಷ್ಮೆ ಉತ್ಪನ್ನಗಳ ಪ್ರದರ್ಶನ ಹಾಗೂ ಮಾರಾಟ ಶಿವಮೊಗ್ಗ ನಗರದ ಜನರಿಗೆ ಸಂತಸ ತಂದಿದೆ ಎಂದರು.
ಇದೇ ಸಂದರ್ಭದಲ್ಲಿ ಜಿ.ವಿಜಯಕುಮಾರ್ ಮಾತನಾಡಿ, ಗ್ರಾಹಕರು ಹೊಸ ಹೊಸ ಬಗೆಯ ಉತ್ಪನ್ನಗಳನ್ನು ಖರೀದಿಸಿ ಉತ್ಪಾದಕರಿಗೆ ಸಹಕರಿಸಿದರೆ ರೇಷ್ಮೆ ಉತ್ಸವಕ್ಕೆ ಪ್ರೋತ್ಸಾಹಿಸಿದಂತಾಗುತ್ತದೆ ಎಂದರು.
ಜಿಲ್ಲಾ ಒಕ್ಕಲಿಗರ ಸಮಾಜದ ನಿರ್ದೇಶಕ ಎಚ್.ಬಿ. ಆದಿಮೂರ್ತಿ, ಮಂಜು ಸುರೇಶ, ಹಾಗೂ ವ್ಯವಸ್ಥಾಪಕ ಸತೀಶ್ ಪಾಲ್ಗೊಂಡಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

