ಶಾಲೆಗಳಲ್ಲಿ ಬಿಸಿ ಊಟ: ಅಧಿಕಾರಿಗಳ ಪರಿಶೀಲನೆ
ಕ.ಪ್ರ.ವಾರ್ತೆ, ಮೂಡಿಗೆರೆ, ಆ.8 ತಾಲೂಕಿನ ಸರ್ಕಾರಿ ಶಾಲೆಗಳಲ್ಲಿ ಬಿಸಿ ಊಟ ಪರಿಶೀಲನೆಗಾಗಿ ಬುಧವಾರ ತಾಪಂ ಅಧ್ಯಕ್ಷ ಎಂ.ಎ. ಶೇಷಗಿರಿ, ಸದಸ್ಯ ಸುಧಾ ಮತ್ತು ಹೂವಮ್ಮ ದಿಢೀರ್ ಭೇಟಿ ನೀಡಿ ಪರಿಶೀಲಿಸಿದರು.
ಪಟ್ಟಣದ ಸರ್ಕಾರಿ ಬಾಲಕರ ಪ್ರೌಢಶಾಲೆಗೆ ಭೇಟಿ ನೀಡಿದ ಅಧ್ಯಕ್ಷರು ಮತ್ತು ಸದಸ್ಯರು, ಬಡಿಸಲು ತಯಾರಿಯಾಗಿದ್ದ ಬಿಸಿ ಊಟವನ್ನು ಪರಿಶೀಲಿಸಿದಾಗ ಸಾರಿನಲ್ಲಿ ಖಾರ ಜಾಸ್ತಿ ಆಗಿದ್ದು. ಸಾಂಬಾರಿನಲ್ಲಿ ತರಕಾರಿಯ ಪ್ರಮಾಣ ಕಡಿಮೆಯಿದೆ ಎಂದು ಆರೋಪಿಸಿದರು.
ಗ್ರೈಂಡರ್ ವ್ಯವಸ್ಥೆ ಇಲ್ಲ: ಸಾಂಬರು ಮತ್ತು ಸಾರಿನ ಬಗ್ಗೆ ಅಡುಗೆಯವರನ್ನು ವಿಚಾರಿಸಿದಾಗ, ಶಾಳೆಯಲಲಿ ವಿದ್ಯಾರ್ಥ್ಥಿಗಳಿಗೆ ಅಡುಗೆ ಮಾಡುತ್ತಿದ್ದು, ಸಾಂಬರಿಗೆ ಖಾರ ಅರೆಯಲು ಗ್ರೈಂಡರ್ ವ್ಯವಸ್ಥೆ ಇಲ್ಲದಿರುವುದರಿಂದ ಖಾರದ ಪುಡಿ ಬಳಸಲಾಗುತ್ತಿದೆ ಎಂದರು. ಈ ಸಮಸ್ಯೆ ಬಗ್ಗೆ ಜಿಪಂ ಸಭೆಯಲ್ಲಿ ಚರ್ಚಿಸುವುದಾಗಿ ವಿದ್ಯಾರ್ಥಿಗಳಿಗೆ ಊಟ ತಯಾರಿ ಮಾಡುವಾಗ ಅದರ ರುಚಿಯನ್ನು ಪರಿಶಿಲಿಸಿ ಹಾಕುವಂತೆ ಸಲಹೆ ನೀಡಿದರು. ಇದೇ ಸಂದರ್ಭದಲ್ಲಿ ಶಿಕ್ಷಣ ಇಲಾಖೆಯ ಕಾಂತರಾಜು, ಇತರರು ಹಾಜರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

