'ನಿಂದಕರಿದ್ದರೆ ಇನ್ನೂ ಹೆಚ್ಚಿನ ಕೆಲಸ ಸಾಧ್ಯ'
ಕ.ಪ್ರ.ವಾರ್ತೆ ಭದ್ರಾವತಿ ಆ.8
ಚುನಾವಣೆಗೆ ತಮ್ಮಲ್ಲಿ ಹಣವಿಲ್ಲದಿದ್ದರೂ ಜನರೇ ತಮಗೆ ಧನಸಹಾಯವನ್ನೂ ಮಾಡಿ ಚುನಾವಣೆಯಲ್ಲಿ ತಾವು ನಿರೀಕ್ಷಿಸಿದ 25,000 ಮತಗಳಿಗೆ ಮೀರಿದ 44,099 ಮತಗಳ ಅಂತರದಿಂದ ತಮ್ಮನ್ನು ಜಯಶಾಲಿಯನ್ನಾಗಿಸಿದ್ದಾರೆ. ಜನರ ಮತದ ಸುರಿಮಳೆಯಂತೆಯೇ ಈ ಬಾರಿ ಮಳೆರಾಯನೂ ತಮ್ಮನ್ನು ಹರಸಿ ಭದ್ರಾ ಅಣೆಕಟ್ಟು ತುಂಬುವಂತೆ ಮಾಡಿದ್ದಾನೆ. ಇದಕ್ಕಾಗಿ ತಾವು ಜನರಿಗೆ ಮತ್ತು ಪ್ರಕೃತಿಗೆ ಕೃತಜ್ಞತೆ ಅರ್ಪಿಸುವುದಾಗಿ ಶಾಸಕ ಅಪ್ಪಾಜಿ ಹೇಳಿದರು.
ಗುರುವಾರ ಭದ್ರಾ ಅಣೆಕಟ್ಟಿನಲ್ಲಿ ಭದ್ರಾನದಿಗೆ ಬಾಗಿನ ಅರ್ಪಿಸಿದ ನಂತರ ನಡೆದ ಸಾರ್ವಜನಿಕ ಸಭೆಯಲ್ಲಿ ಅವರು ಮಾತನಾಡಿದರು.
ಅಪ್ಪಾಜಿ ನಾಪತ್ತೆಯಾಗಿದ್ದಾರೆ ಮತ್ತು ಏನೂ ಕೆಲಸ ಮಾಡುತ್ತಿಲ್ಲ ಎಂದು ಹೇಳಿಕೆ ನೀಡಿರುವ ಮಾಜಿ ಶಾಸಕ ಬಿ.ಕೆ. ಸಂಗಮೇಶ್ವರ ನನ್ನ ನಿಜವಾದ ಸ್ನೇಹಿತ. ನಿಂದಕರಿದ್ದರೆ ನಾವು ಮತ್ತೂ ಹೆಚ್ಚು ಕೆಲಸಗಳನ್ನು ಮಾಡುತ್ತೇವೆ. ತಾವು ಮಾಡುವ ಕೆಲಸ ಜನತೆಗೆ ತಿಳಿದರೆ ಸಾಕು. ಸಂಗಮೇಶ್ವರ ಅವರಿಗೆ ಅದನ್ನು ತಿಳಿಸಿ ಪ್ರಚಾರ ಗಿಟ್ಟಿಸುವ ಗೀಳು ತಮಗಿಲ್ಲವೆಂದು ಅವರು ಪ್ರತಿಕ್ರಿಯಿಸದರು.
ರಸ್ತೆ ಹಾಳು, ಕಟ್ಟಡ ಶಿಥಿಲ: ಭದ್ರಾವತಿ ತಾಲೂಕಿನಲ್ಲಿ ಕಳೆದ 10 ವರ್ಷಗಳಲ್ಲಿ ರಸ್ತೆಗಳು ಹಾಳಾಗಿವೆ ಮತ್ತು ಶಾಲಾ ಕೊಠಡಿಗಲು ಶಿಥಿಲವಾಗಿವೆ.
ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಸರ್ಕಾರಿ ಶಾಲೆಗಳನ್ನು ತ್ಯಜಿಸಿ ಖಾಸಗಿ ವಿದ್ಯಾ ಸಂಸ್ಥೆಗಳತ್ತ ವಾಲುತ್ತಿದ್ದಾರೆ. ಕಳೆದ 10 ವರ್ಷಗಳಲ್ಲಿ ಬಂದ ಸರ್ಕಾರದ ಅನುದಾನ ಸಮರ್ಪಕವಾಗಿ ಬಳಕೆಯಾಗಿಲ್ಲವೆಂದು ಅವರು ಭದ್ರಾ ಅಣೆಕಟ್ಟಿನಲ್ಲಿ ಸುಂದರ ಉದ್ಯಾನವನ ಮತ್ತು ವರ್ಣರಂಜಿತ ಕಾರಂಜಿ ನಿರ್ಮಾಣ ಕಾರ್ಯಕ್ಕೆ ಪ್ರಾಮಾಣಿಕವಾಗಿ ಯತ್ನಿಸುವ ಆಶ್ವಾಸನೆ ನೀಡಿದರು.
ಜೆಡಿಎಸ್ ತಾಲೂಕು ಘಟಕದ ಅಧ್ಯಕ್ಷ ಆರ್. ಕರುಣಾಮೂರ್ತಿ, ಕರಿಯಪ್ಪ, ಗೋಪಾಲಗಿರಿ, ಕಲ್ಲಳ್ಳಿ ಶೇಖರಪ್ಪ, ವಿಐಎಸ್ಎಲ್ ಕಾರ್ಮಿಕ ಸಂಘದ ಅಧ್ಯಕ್ಷ ಜೆ.ಎನ್. ಚಂದ್ರಹಾಸ, ಎಂ.ಪಿ.ಎಂ ಉದ್ಯೋಗಿಗಳ ಸಂಘದ ಅಧ್ಯಕ್ಷ ಎಸ್. ಚಂದ್ರಶೇಖರ್, ವಕೀಲ ಟಿ. ಚಂದ್ರೇಗೌಡ ಮೊದಲಾದವರು ಮಾತನಾಡಿದರು.
ಎಪಿಎಂಸಿ ಮಾಜಿ ಅಧ್ಯಕ್ಷ ಶಿವಾಜಿರಾವ್ ಗಾಯಕ್ವಾಡ್, ರಾಜ್ಯ ಸರ್ಕಾರಿ ನೌಕರರ ಸಂಘದ ಭದ್ರಾವತಿ ಘಟಕದ ಅಧ್ಯಕ್ಷ ಎನ್. ಕೃಷ್ಣಪ್ಪ, ತಾಪಂ ಮಾಜಿ ಅಧ್ಯಕ್ಷ ರಘುನಾಥ ರಾವ್ ಗಡ್ಡೆ, ಮುನಿರತ್ನ ನಾಯ್ಡು, ಡಿ.ಕೆ. ರಾಮಕೃಷ್ಣ, ಜಿಪಂ ಸದಸ್ಯ ಎಸ್. ಕುಮಾರ್, ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕಿನ ನಿರ್ದೇಶಕ ಜೆ.ಪಿ. ಯೋಗೇಶ್, ಪರಮೇಶ್ವರಪ್ಪ, ನಗರಸಭಾ ಸದಸ್ಯ ಬದರಿನಾರಾಯಣ ಮತ್ತು ಮೆಹಬೂಬ್ ಸಾಬ್, ಸಿಂಗನಮನೆ ಗ್ರಾಪಂ ಅಧ್ಯಕ್ಷ ಮಂಜುನಾಥ್, ಕ.ಸಾ.ಪ ತಾಲೂಕು ಘಟಕದ ಅಧ್ಯಕ್ಷ ಕೋಗಲೂರು ತಿಪ್ಪೇಸ್ವಾಮಿ, ರವಿನಾಯ್ಡು ಮೊದಲಾದವರು ಇದ್ದರು. ಡಿ.ಟಿ. ಶ್ರೀಧರ ಸ್ವಾಗತಿಸಿದರು. ಎನ್. ಗಿರೀಶ್ ನಿರೂಪಿಸಿದರು. ಕಾರ್ಯಕ್ರದಲ್ಲಿ ಹಲವರು ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

