ಶಿವಮೊಗ್ಗ

ಶ್ರೀನಿವಾಸ್ ಹೇಳಿಕೆ ಖಂಡಿಸಿ ಪ್ರತಿಭಟನೆ

Published On :

ಕ.ಪ್ರ.ವಾರ್ತೆ, ಸಾಗರ, ಆ.10
ಮಂಡ್ಯ ಲೋಕಸಭಾ ಅಭ್ಯರ್ಥಿ ರಮ್ಯ ಕುರಿತು ಮಾಜಿ ಶಾಸಕ ಜೆಡಿಎಸ್‌ನ ಶ್ರೀನಿವಾಸ್ ಅವಹೇಳನಕಾರಿಯಾಗಿ ಮಾತನಾಡಿರುವುದನ್ನು ಖಂಡಿಸಿ ತಾಲೂಕು ಮಹಿಳಾ ಕಾಂಗ್ರೆಸ್ ಘಟಕದ ವತಿಯಿಂದ ಶನಿವಾರ ಪ್ರತಿಭಟನೆ ನಡೆಸಲಾಯಿತು.
ಪ್ರತಿಭಟನಾ ಸಭೆಯಲ್ಲಿ ಕಾಂಗ್ರೆಸ್ ಮಹಿಳಾ ಘಟಕದ ಅಧ್ಯಕ್ಷೆ ಎನ್. ಲಲಿತಮ್ಮ ಮಾತನಾಡಿ, ಸೋಲಿನ ಭೀತಿಯಿಂದ ಶ್ರೀನಿವಾಸ್ ಅವರು ರಮ್ಯ ಕುರಿತು ಕೀಳುಮಟ್ಟದಲ್ಲಿ ಮಾತನಾಡಿದ್ದಾರೆ. ಭಾರತೀಯ ಸಂಸ್ಕೃತಿಯಲ್ಲಿ ಹೆಣ್ಣಿಗೆ ಪೂಜನೀಯ ಸ್ಥಾನವಿದೆ. ಹೆಣ್ಣನ್ನು ಗೌರವಯುತವಾಗಿ ನಡೆಸಿಕೊಂಡು ಬಂದಿರುವ ದೇಶ ನಮ್ಮದು. ಮಾಜಿ ಶಾಸಕ ಶ್ರೀನಿವಾಸ್ ಅಂಥವರು ಮಹಿಳಾ ವಿರೋಧಿ ವರ್ತನೆ ತೋರಿಸುತ್ತಿರುವುದು ಅವರು ಪ್ರತಿನಿಧಿಸುತ್ತಿರುವ ಪಕ್ಷದ ಕೀಳುಮಟ್ಟದ ರಾಜಕಾರಣ ತೋರಿಸುತ್ತದೆ ಎಂದರು.
ತಾಪಂ ಸದಸ್ಯೆ ಜ್ಯೋತಿ ಮುರಳಿಧರ್, ಚುನಾವಣೆ ಗೆಲುವಿಗಾಗಿ ಜೆಡಿ(ಎಸ್) ಅತ್ಯಂತ ಕೀಳುಮಟ್ಟದ ರಾಜಕೀಯಕ್ಕೆ ಇಳಿದಿದೆ. ಈಗಾಗಲೇ ಬಿಜೆಪಿ ಹಾಗೂ ಜೆಡಿಎಸ್ ಅಪವಿತ್ರ ಮೈತ್ರಿ ಮಾಡಿಕೊಂಡಿದ್ದರೂ ಸೋಲಿನ ಭೀತಿಯಿಂದ ಹೊರಬಂದಿಲ್ಲ. ರಮ್ಯ ವಿರುದ್ಧ ಇಲ್ಲಸಲ್ಲದ ಆರೋಪ ಹೊರಿಸುತ್ತಿದೆ. ಮಾಜಿ ಶಾಸಕ ಶ್ರೀನಿವಾಸ್ ತಮ್ಮ ಹೇಳಿಕೆಯನ್ನು ಹಿಂಪಡೆದು ಕ್ಷಮೆ ಯಾಚಿಸಬೇಕು ಎಂದು ಒತ್ತಾಯಿಸಿದರು.
ಜಿಲ್ಲಾ ಪಂಚಾಯ್ತಿ ಸದಸ್ಯೆ ಸುಮಂಗಲ ರಾಮಕೃಷ್ಣ, ನಗರಸಭೆ ಸದಸ್ಯರಾದ ಗ್ರೇಸಿ ಡಯಾಸ್, ಸಬಾನಾ, ಉಷಾ, ಪ್ರಮುಖರಾದ ಸೌಭಾಗ್ಯ, ಶ್ರೀಲತಾ, ಮಂಜುಳಾ, ತಾಲೂಕು ಪಂಚಾಯ್ತಿ ಅಧ್ಯಕ್ಷೆ ಮಹಾಬಲೇಶ್ವರ ಕುಗ್ವೆ, ಐ.ಎನ್. ಸುರೇಶಬಾಬು, ರವಿ ಜಂಬೂರು ಮನೆ, ಉಲ್ಲಾಸ ಶ್ಯಾನಭಾಗ್, ಡಿ. ದಿನೇಶ್ ಹಾಜರಿದ್ದರು.
   ಮಾಜಿ ಶಾಸಕ ಶ್ರೀನಿವಾಸ್ ಅಂಥವರು ಮಹಿಳಾ ವಿರೋಧಿ ವರ್ತನೆ ತೋರಿಸುತ್ತಿರುವುದು ಅವರು ಪ್ರತಿನಿಧಿಸುತ್ತಿರುವ ಪಕ್ಷದ ಕೀಳುಮಟ್ಟದ ರಾಜಕಾರಣ
  ಈಗಾಗಲೇ ಬಿಜೆಪಿ, ಜೆಡಿಎಸ್ ಅಪವಿತ್ರ ಮೈತ್ರಿ ಮಾಡಿಕೊಂಡಿದ್ದರೂ ಸೋಲಿನ ಭೀತಿಯಿಂದ ಹೊರಬಂದಿಲ್ಲ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.