ಸಾಂಸ್ಕೃತಿಕ ಶೋಧ: ಅರ್ಜಿ ಆಹ್ವಾನ
ಶಿವಮೊಗ್ಗ: ಸರ್.ಎಂ. ವಿಶ್ವೇಶ್ವರಯ್ಯ ಎಂಜಿನಿಯರಿಂಗ್ ಪ್ರತಿಷ್ಠಾನ ಟ್ರಸ್ಟ್ ಮತ್ತು ಸುರ್ವೆ ಕಲ್ಚರಲ್ ಅಕಾಡೆಮಿ ಆಶ್ರಯದಲ್ಲಿ ಸೆ.12ರಿಂದ 15ರವರೆಗೆ ಬೆಂಗಳೂರಿನ ಟೌನ್ ಹಾಲ್ನಲ್ಲಿ ಆಯೋಜಿಸಿರುವ ಸಾಂಸ್ಕೃತಿಕ ಶೋಧ-2013ಕ್ಕೆ ವಿವಿಧ ಸಾಂಸ್ಕೃತಿಕ ಕಲಾ ತಂಡಗಳಿಂದ ಅರ್ಜಿ ಆಹ್ವಾನಿಸಿದೆ.
150ಕ್ಕೂ ಹೆಚ್ಚು ಸಾಂಸ್ಕೃತಿಕ ಕಲೆಗಳ ಕಲಾ ಪ್ರದರ್ಶನಕ್ಕೆ ಅವಕಾಶವಿದ್ದು, 5 ವರ್ಷ ಮೇಲ್ಪಟ್ಟರು ಭಾಗವಹಿಸಬಹುದು. ನೃತ್ಯ (ಭರತನಾಟ್ಯ, ಜನಪದ ನೃತ್ಯ, ಚಲನಚಿತ್ರ ನೃತ್ಯ, ಯಕ್ಷಗಾನ), ಗಾಯನ ( ಜನಪದ, ಭಕ್ತಿಗೀತೆ, ರಂಗಗೀತೆ, ದೇಶಭಕ್ತಿಗೀತೆ, ತತ್ವಪದ, ಶೋಭಾನೆ, ವಚನ) ಸಂಗೀತ (ಹಾರ್ಮೋನಿಯಂ, ಕೊಳಲು, ಮೃದಂಗ, ವೀಣಾ ಸಿತಾರ, ಶಹನಾಯ್, ಕೀಬೋರ್ಡ್), ಜನರಲ್ ಮಿಮಿಕ್ರಿ, ಏಕಪಾತ್ರ ಅಭಿನಯ, ಗಮಕ, ಜಾದು, ಯೋಗ, ಚಿತ್ರಕಲಾ, ವೇಷಭೂಷಣ, ಕವನ ವಾಚನ ಹಾಗೂ ಕಿರುರೂಪಕಗಳು, ದೊಡ್ಡಾಟ, ಕಂಸಾಳೆ, ಬಯಲಾಟ, ಗೊರವರ ನೃತ್ಯ, ಕರಡಿ ಮಜಲು, ಚೆಂಡಮದ್ದಲೆ, ಡೊಳ್ಳುಕುಣಿತ, ಯಕ್ಷಗಾನ ಪ್ರಸಂಗ, ಪಾರಿಜಾತ ಪ್ರಸಂಗ, ತೊಗಲು ಬೊಂಬೆಯಾಟ, ಬುಟ್ಟುಕಟ್ಟು ನೃತ್ಯಗಳು, ಕಿರು ಹಾಸ್ಯನಾಟಕ, ನೃತ್ಯ ರೂಪಕ ಸೇರಿದಂತೆ ಎಲ್ಲಾ ರೀತಿಯ ಕಲಾ ಪ್ರಕಾರಗಳಿಗೆ ಅವಕಾಶವಿದ್ದು, ಆಸಕ್ತರು ನಿಗದಿತ ನಮೂನೆಯ ಅರ್ಜಿ ಪಡೆದು ಸಲ್ಲಿಸಬಹುದು. 9035030534.
ಆರ್ಟಿಒ ಕಚೇರಿಯಲ್ಲಿ ಅವ್ಯವಸ್ಥೆ ಆರೋಪ
ಶಿವಮೊಗ್ಗ: ಆರ್ಟಿಒ ಕಚೇರಿ ಅವ್ಯವಸ್ಥೆಯಿಂದ ಕೂಡಿದೆ ಎಂದು ಕರ್ನಾಟಕ ರಕ್ಷಣಾ ವೇದಿಕೆ ಆರೋಪಿಸಿದೆ. ನಗರದ ಆರ್ಟಿಒ ಕಚೇರಿ ಅವ್ಯವಸ್ಥೆಗಳ ಆಗಾರವಾಗಿದ್ದು, ಇಲ್ಲಿ ಆರ್ಟಿಓ ಅಧಿಕಾರಿಗಳು ವಾರಗಟ್ಟಲೇ ಇರುವುದಿಲ್ಲ ಹಾಗೂ ಆರ್ಟಿಓ ಕಚೇರಿಯಲ್ಲಿ ಬ್ರೋಕರ್ಗಳ ಹಾವಳಿ ಮಿತಿಮೀರಿದ್ದು, ಆರ್ಟಿಓ ಬ್ರೋಕರ್ಗಳೇ ಅನಧಿಕೃತವಾಗಿ ಆರ್ಟಿಓ ಅಧಿಕಾರಿಗಳಾಗಿದ್ದಾರೆ, ಬ್ರೋಕರ್ಗಳ ತಾಳಕ್ಕೆ ಆರ್ಟಿಓ ಅಧಿಕಾರಿಗಳು, ನೌಕರರು ಕುಣಿಯುತ್ತಿದ್ದಾರೆ ಎಂದು ವೇದಿಕೆ ಆರೋಪಿಸಿದೆ.
ಕೂಡಲೇ ಅಧಿಕಾರಿಗಳು ಬೈಕ್ ಮಾಲೀಕನಿಗೆ ಸ್ಪಂದಿಸಬೇಕು. ಇಲ್ಲವಾದಲ್ಲಿ ಆ.13ರಂದು ಆರ್ಟಿಒ ಕಚೇರಿಗೆ ಮುತ್ತಿಗೆ ಹಾಕುವುದಾಗಿ ಸಮಿತಿಯ ಕಾರ್ಯದರ್ಶಿ ರಾಘವೇಂದ್ರ ಎಚ್ಚರಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

