ಶಿವಮೊಗ್ಗ

ಹೊಲಿಗೆ ತರಬೇತಿ ಕೇಂದ್ರ ಸ್ಥಾಪನೆ

Published On :

ಕ.ಪ್ರ.ವಾರ್ತೆ  ಭದ್ರಾವತಿ   ಆ.11
ಭಾರತೀಯ ಉಕ್ಕು ಪ್ರಾಧಿಕಾರದ ಒಂದು ಸಂಸ್ಥೆಯಾದ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕು ಸ್ಥಾವರವು ತನ್ನ ಸಾಂಸ್ಥಿಕ ಸಾಮಾಜಿಕ ಹೊಣೆಗಾರಿಕೆ ಉಪಕ್ರಮಗಳಡಿ ಸಾದರ ಪಡಿಸಿದ ಚಟುವಟಿಕೆಗಳಡಿ ಪಟ್ಟಣದ ಇಸ್ಪಾತ್ ಮಹಿಳಾ ಸಮಾಜದಲ್ಲಿ ಇತ್ತೀಚೆಗೆ ಹೊಲಿಗೆ ತರಬೇತಿ ಕೇಂದ್ರವನ್ನು ಸ್ಥಾಪಿಸಲಾಯಿತು.
ತರಬೇತಿ ಕೇಂದ್ರ ಉದ್ಘಾಟಿಸಿದ ಇಸ್ಪಾತ್ ಮಹಿಳಾ ಸಮಾಜದ ಅಧ್ಯಕ್ಷೆ ಸಾಧನಾ ವರ್ಮ ಕೇಂದ್ರವು ನಾಲ್ಕು ಸರಳ ಹೊಲಿಗೆ ಯಂತ್ರಗಳು ಮತ್ತು ಎರಡು ಯಾಂತ್ರೀಕೃತ ಹೊಲಿಗೆ ಯಂತ್ರಗಳನ್ನು ಹೊಂದಿದ್ದು ನುರಿತ ತರಬೇತುದಾರರಿಂದ ತರಬೇತಿಯನ್ನು ನೀಡಲು ವ್ಯವಸ್ಥೆ ಮಾಡಿರುವುದರಿಂದ ಅರ್ಥಿಕವಾಗಿ ಹಿಂದುಳಿದ ಕುಟುಂಬಗಳ ಮಹಿಳೆಯರು ಇದರ ಸದುಪಯೋಗಪಡಿಸಿಕೊಂಡು ತಮ್ಮ ಜೀವನವನ್ನು ಹಸನಾಗಿಸಿಕೊಳ್ಳಬೇಕೆಂದು ಕರೆ ನೀಡಿದರು.
ಉಚಿತ ಆರೋಗ್ಯ ಸೇವಾ ಕೇಂದ್ರ: ಮಹಿಳೆಯರಿಗಾಗಿ ಸ್ವಉದ್ಯೋಗ ನಿರ್ಮಿಸಲು ಈ ವ್ಯವಸ್ಥೆಯನ್ನು ಉಕ್ಕು ಸ್ಥಾವರವು ತನ್ನ ಸಾಂಸ್ಥಿಕ ಸಾಮಾಜಿಕ ಹೊಣೆಗಾರಿಕೆ ಉಪಕ್ರಮಗಳಡಿ ಮಾಡಿದ್ದು ಮಹಿಳೆಯರಿಗೆ ಸ್ವಉದ್ಯೋಗ ಕಲ್ಪಿಸುವ ನಿಟ್ಟಿನಲ್ಲಿ ಹೊಲಿಗೆ ತರಬೇತಿ ಕೇಂದ್ರವನ್ನು ಸ್ಥಾಪಿಸಿದೆ. ಇಸ್ಪಾತ್ ಮಹಿಳಾ ಸಮಾಜವು ಅರ್ಥಿಕವಾಗಿ ದುರ್ಬಲರಾಗಿರುವ ವರ್ಗಗಳ ಏಳಿಗೆಗಾಗಿ ಶ್ರಮಿಸುವ ಸಾಮಾಜಿಕ ಸೇವಾ ಸಂಸ್ಥೆಯಾಗಿದ್ದು ತನ್ನ ಸಮಾಜಸೇವಾ ಕಾರ್ಯಗಳೊಡನೆ ಬಡವರಿಗಾಗಿ ಒಂದು ಉಚಿತ ಆರೋಗ್ಯ ಸೇವಾ ಕೇಂದ್ರವನ್ನೂ ನಡೆಸುತ್ತಿದೆ.
ಮೂಲಭೂತ ಸೌಕರ್ಯಕ್ಕೆ ಒತ್ತು: ಸಮಾಜವು ಮೂಲಭೂತ ಸೌಕರ್ಯಗಳನ್ನು ಒದಗಿಸಲು ಮುಂದೆ ಬಂದಿದ್ದು ಸಮಾಜದ ಅಧ್ಯಕ್ಷೆ ಸಾಧನಾ ವರ್ಮಾರವರ ಮಾರ್ಗದರ್ಶನದಲ್ಲಿ ಈ ಹೊಸ ಉಪಕ್ರಮಕ್ಕೆ ಉತ್ಸಾಹವನ್ನು ಸಮಾಜವು ತೋರಿದ್ದು ಇದನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಲು ಯೋಜನೆಗಳನ್ನು ಸಹ ಸಮಾಜ ಹಾಕಿಕೊಂಡಿದೆ ಎಂದು ವಿಐಎಸ್‌ಪಿ ಪತ್ರಿಕಾ ಪ್ರಕಟಣೆ ತಿಳಿಸಿದೆ.
ಯೋಗ್ಯ ಹಾಗೂ ನುರಿತ ತರಬೇತುದಾರರು ಹೊಲಿಗೆ ತರಬೇತಿಯನ್ನು ನೀಡಲಿದ್ದು ಮಹಿಳೆಯರ ಮತ್ತು ಮಕ್ಕಳ ಬಟ್ಟೆಗಳನ್ನು ತಯಾರಿಸುವ ತರಬೇತಿಯನ್ನು ಕೇಂದ್ರದಲ್ಲಿ ನೀಡಲಾಗುತ್ತದೆ. ಈ ಪ್ರಕ್ರಿಯೆಯು ಭರವಸೆಯನ್ನು ಮೂಡಿಸಿ ಸಮಾಜವನ್ನು ಎದುರಿಸಲು ಅವರನ್ನು ಶಕ್ತರನ್ನಾಗಿಸುತ್ತದೆ ಎಂದು ಸಹ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.