ಶಿವಮೊಗ್ಗ

ಡಿಎಆರ್ ಮೈದಾನದಲ್ಲಿ ಸ್ವಾತಂತ್ರ್ಯೋತ್ಸವ

Published On :

ಶಿವಮೊಗ್ಗ: ಪ್ರತಿ ವರ್ಷ ನೆಹರು ಕ್ರೀಡಾಂಗಣದಲ್ಲಿ ಆಯೋಜಿಸುತ್ತಿದ್ದ ಸ್ವಾತಂತ್ರೋತ್ಸವನ್ನು ಈ ಬಾರಿ ನಗರದ ಡಿಎಆರ್ ಮೈದಾನದಲ್ಲಿ ಏರ್ಪಡಿಸಿದ್ದರಿಂದ ಕೆಲವು ಅವ್ಯವಸ್ಥೆ ಕಂಡು ಬಂದವು.
 ನೆಹರು ಕ್ರೀಡಾಂಗಣದಲ್ಲಿ ನಡೆಯುತ್ತಿದ್ದ ಜಿಲ್ಲಾ ಮಟ್ಟದ ಸ್ವಾತಂತ್ರ್ಯೋತ್ಸವ ಸಿಂಥೆಟಿಕ್ ಟ್ರ್ಯಾಕ್ ನಿರ್ವಹಣೆಗೆ ಅಡ್ಡಿಯಾಗುತ್ತದೆ ಎನ್ನುವ ಕಾರಣದಿಂದ ಡಿಎಆರ್ ಮೈದಾನದಲ್ಲಿ ಆಯೋಜಿಸಿದ್ದರಿಂದ ಸಮಾರಂಭ ಸಪ್ಪೆಯಾಗಿತ್ತು.
ಕುಳಿತುಕೊಳ್ಳಲು ವ್ಯವಸ್ಥೆ ಇಲ್ಲ: ಪ್ರತಿ ಬಾರಿ ನೆಹರು ಕ್ರೀಡಾಂಗಣದಲ್ಲಿ ಆಯೋಜಿಸುತ್ತಿದ್ದ ಕಾರ್ಯಕ್ರಮ ಡಿಎಆರ್ ಮೈದಾನದಲ್ಲಿ ಆಯೋಜಿಸಿದ್ದರಿಂದ ಸಾರ್ವಜನಿಕರೆಲ್ಲರೂ ನಿಂತುಕೊಂಡೆ ಕಾರ್ಯಕ್ರಮ ವೀಕ್ಷಣೆ ಮಾಡಬೇಕಾಯಿತು. ಮೈದಾನದಲ್ಲಿ ಸ್ಥಳಾವಕಾಶವಿಲ್ಲದೆ, ಆಸನಗಳ ವ್ಯವಸ್ಥೆ ಕೊರತೆ, ಪಥ ಸಂಚಲನಕ್ಕೆ ಕಿರಿದಾದ ಮೈದಾನ ಇತ್ಯಾದಿ ಸಮಸ್ಯೆಗಳಿಂದ ಈ ಬಾರಿಯ ಸ್ವಾತಂತ್ರ್ಯೋತ್ಸವ ಹಿಂದಿನಂತಿರಲಿಲ್ಲ.
ಕಾರ್ಯಕ್ರಮದ ವಿಶೇಷ: ಕಾರ್ಯಕ್ರಮದಲ್ಲಿ ಸಾರ್ವಜನಿಕರ ಕೊರತೆ ಇದ್ದರೂ ಮಕ್ಕಳ ಕಾರ್ಯಕ್ರಮ ಎಲ್ಲರನ್ನು ಮನಸೊರೆಗೊಂಡಿತ್ತು. ಅದರಲ್ಲೂ ಮೇರಿ ಇಮಾಕ್ಯುಲೇಟ್ ಪ್ರೌಢಶಾಲೆ ಮಕ್ಕಳು ಮಳೆ ಬರುತ್ತಿರುವುದನ್ನು ಲೆಕ್ಕಿಸದೆ ಈ ಭಾರತ ವೀರರ ಜನ್ಮ ಸ್ಥಳ.. ಎಂಬ ಹಾಡಿನ ನೃತ್ಯ ಪ್ರದರ್ಶನ ಎಲ್ಲರನ್ನು ಆಕರ್ಷಿಸಿತು.
 ಕಸ್ತೂರಬಾ ಬಾಲಿಕ ಪ್ರೌಢಶಾಲೆ ವಿದ್ಯಾರ್ಥಿನಿಯರು, ಎದ್ದೇಳು ಹುಡುಗ.., ಅಮ್ಮ.. ಅಮ್ಮ.., ಒಂದೇ ಶಾಂತಿ ಮಣ್ಣಿನಿಂದ.. ಹಾಡಿಗೆ ಸಾಮೂಹಿಕ ನೃತ್ಯ ಪ್ರದರ್ಶನ ಮನಸೊರೆಗೊಂಡು ನೆರೆದಿದ್ದ ಪ್ರೇಕ್ಷಕರಿಂದ ಚಪ್ಪಳೆ, ಶಿಳ್ಳೆಗಳು ರಾರಾಜಿಸಿದವು.
 ಉಳಿದಂತೆ ಸೆಕ್ರೆಟ್ ಆರ್ಟ್, ದುರ್ಗಿಗುಡಿಯ ಸರ್ಕಾರಿ ಶಾಲೆ, ಪಿಇಎಸ್, ಬಿ.ಎಚ್. ರಸ್ತೆಯ ಸರ್ಕಾರಿ ಬಾಲಿಕ ಶಾಲೆ, ವಾಸವಿ ಶಾಲೆ, ಸರ್ವೋದಯ ಶಾಲೆ ಮಕ್ಕಳು ವಿವಿಧ ಗೀತೆಗಳಿಗೆ ನೃತ್ಯ ಪ್ರದರ್ಶನ ಮಾಡಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.