ಮೈಲಾರಿ ನಮನ
ಶಿವಮೊಗ್ಗ: ಶಿವಮೊಗ್ಗದಲ್ಲಿ ಸೇವೆಗೆ ಇನ್ನೊಂದು ಹೆಸರೇ ಮೈಲಾರಿ ಎಂಬಂತೆ ಬದುಕಿದ್ದ ಮೈಲಾರಿ ಅವರನ್ನು ಕುರಿತ ವಿಶೇಷ ಕಾರ್ಯಕ್ರಮ ಸ್ಪಂದನ ವಾಹಿನಿಯಲ್ಲಿ ಆ.17 ರಾತ್ರಿ 9ರಿಂದ 10ರವರೆಗೆ ಪ್ರಸಾರವಾಗಲಿದೆ. ನೇರಪ್ರಸಾರದ ಕಾರ್ಯಕ್ರಮದಲ್ಲಿ ಮೈಲಾರಿ ಅವರ ಸೇವಾವೈಖರಿ ಕುರಿತು ಶಿವಮೊಗ್ಗ ನಗರಸಭೆ ಮಾಜಿ ಅಧ್ಯಕ್ಷ ಎನ್.ಜೆ. ರಾಜಶೇಖರ್ ಹಾಗೂ ನಟರಾಜ್ ಭಾಗವತ್ ಅವರು ಪಾಲ್ಗೊಳ್ಳುವರು. ಶಿವಮೊಗ್ಗದಲ್ಲಿ ಚಿಂದಿ ಆಯುವ ಮಕ್ಕಳಿಗಾಗಿ ಆರಂಭಗೊಂಡಿರುವ ಮಾಧವನೆಲೆಯ ರೂವಾರಿ ಮೈಲಾರಿ ಅವರ ಸಾರ್ಥ್ಯಕ್ಯ ಬದುಕನ್ನು ಸ್ಮರಿಸುವ ಈ ಕಾರ್ಯಕ್ರಮದಲ್ಲಿ ವೀಕ್ಷಕರೂ ದೂರವಾಣಿ ಕರೆ ಮಾತನಾಡಬಹುದು. (08182-223377) ಮೈಲಾರಿ ಅವರೊಂದಿಗಿನ ಒಡನಾಟವನ್ನು ಹಂಚಿಕೊಳ್ಳಬಹುದು.
ಪೂಜಾ ಕಾರ್ಯ
ಶಿವಮೊಗ್ಗ: ಗುಂಡಪ್ಪ ಶೆಡ್ನ ಶ್ರೀ ಅಯ್ಯಪ್ಪ ಸ್ವಾಮಿ ದೇವಸ್ಥಾನದಲ್ಲಿ ಆ.17 ಮತ್ತು 18ರಂದು ಶ್ರೀ ಸ್ವಾಮಿಗೆ ಶಬರಿ ಮಲೆಯಲ್ಲಿ ನಡೆಯುವ ರೀತಿಯಲ್ಲಿ ನಿತ್ಯ ಪೂಜೆ ಹಾಗೂ ಇತರೆ ಪೂಜೆಗಳನ್ನು ನಡೆಸಲು ದೇವಸ್ಥಾನ ತೀರ್ಮಾನಿಸಿದೆ. 17ರಂದು ಬೆಳಿಗ್ಗೆ 6ಕ್ಕೆ ಗುರುವಂದನೆ, ಗಣಪತಿ ಪೂಜೆ, ಪ್ರಸಾದ ಶುದ್ಧಿ, ವಾಸ್ತುಹೋಮ, ವಾಸ್ತುಬಲಿ, ವಾಸ್ತು ಪುಣ್ಯಾಹ, 18ರಂದು ಅಷ್ಟದ್ರವ್ಯ, ಗಣಪತಿ ಹೋಮ, ಸುದರ್ಶನ ಹೋಮ, ಉಷ ಪೂಜೆ, ನವರ, ಪಂಚಗವ್ಯ, 25 ಕಳಸ ಮಧ್ಯಾಹ್ನ ಪೂಜೆ, ರಾತ್ರಿ 7ಕ್ಕೆ ಭಗವತಿ ಸೇವೆ, 8ಕ್ಕೆ ಪೂಜೆ ನಡೆಯಲಿದೆ ಎಂದು ದೇವಾಲಯದ ಅರ್ಚಕ ಶಿವಶಂಕರನ್ ನಂಬೂದರಿ ಪಾದ್ ತಿಳಿಸಿದ್ದಾರೆ.
ಇಂದು ಆರ್ಯ ಟ್ಯಾಲೆಂಟ್ ಉತ್ಸವ
ಶಿವಮೊಗ್ಗ: ಎನ್ಇಎಸ್ ಇನ್ಸ್ಟಿಟ್ಯೂಟ್ ಆಫ್ ಅಡ್ವಾನ್ಸ್ಡ್ ಸ್ಟಡೀಸ್ ಆ.17ರಂದು ಬೆಳಿಗ್ಗೆ 9.30ಕ್ಕೆ ನಗರದ ಅಂಬೇಡ್ಕರ್ ಭವನದಲ್ಲಿ ಅಂತರಕಾಲೇಜು ಪದವಿ ವಿದ್ಯಾರ್ಥಿಗಳಿಗೆ ಆರ್ಯ ಟ್ಯಾಲೆಂಟ್ ಉತ್ಸವ-2013 ಎಂಬ ಸಾಂಸ್ಕೃತಿ ಕಾರ್ಯಕ್ರಮ ಹಮ್ಮಿಕೊಂಡಿದೆ. ಶಾಸಕ ಕೆ.ಬಿ. ಪ್ರಸನ್ನಕುಮಾರ್ ಕಾರ್ಯಕ್ರಮ ಉದ್ಘಾಟಿಸಲಿದ್ದು, ಮುಖ್ಯಅತಿಥಿಯಾಗಿ ಕುವೆಂಪು ವಿವಿಯ ಸಿಂಡಿಕೇಟ್ ಸದಸ್ಯ ಎಸ್.ಪಿ. ದಿನೇಶ್, ಪ್ರಾಂಶುಪಾಲ ಪ್ರೊ. ಬಿ.ಎಸ್. ಶಿವಪ್ರಸಾದ್ ಉಪಸ್ಥಿತರಿರುವರು. ರಾಷ್ಟ್ರೀಯ ಶಿಕ್ಷಣ ಸಮಿತಿ ಕಾರ್ಯದರ್ಶಿ ತಿಮ್ಮಯ್ಯ ಅಧ್ಯಕ್ಷತೆ ವಹಿಸುವರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

