ಶಿವಮೊಗ್ಗ

ಸತತ ವ್ಯಾಸಂಗದಿಂದ ಅಭಿವೃದ್ಧಿ ಸಾಧ್ಯ: ಕಿಮ್ಮನೆ

Published On :

ಕ.ಪ್ರ.ವಾರ್ತೆ  ತೀರ್ಥಹಳ್ಳಿ  ಆ.18 ವಿಶ್ವಮಟ್ಟಕ್ಕೆ ಹೋಲಿಸಿದರೆ ನಮ್ಮ ದೇಶದಲ್ಲಿ ಉನ್ನತ ಶಿಕ್ಷಣ ಪಡೆದವರ ಸಂಖ್ಯೆ ಕಡಿಮೆ. ಈ ಹಿನ್ನೆಲೆಯಲ್ಲಿ ಗ್ರಾಮೀಣ ಪ್ರದೇಶದಲ್ಲಿ ಸ್ನಾತಕೋತ್ತರ ಕೇಂದ್ರ ಪ್ರಾರಂಭಗೊಳ್ಳುತ್ತಿರುವುದು  ಹೆಮ್ಮೆಯ ವಿಷಯ ಎಂದು ಪ್ರಾಥಮಿಕ, ಪ್ರೌಢಶಿಕ್ಷಣ ಸಚಿವ ಕಿಮ್ಮನೆ ರತ್ನಕರ್ ಹೇಳಿದರು.
ತುಂಗಾ ಮಹಾವಿದ್ಯಾಲಯದಲ್ಲಿ ಇತ್ತೀಚೆಗೆ ಎಂಕಾಂ ವಿಭಾಗ ಉದ್ಘಾಟಿಸಿ, ಮಾತನಾಡಿದ ಸಚಿವರು, ವಿದ್ಯಾರ್ಥಿಗಳು ಶ್ರದ್ಧೆ, ಆಸಕ್ತಿ ಮತ್ತು ಸತತ ಪ್ರಯತ್ನದಿಂದ ವ್ಯಾಂಸಂಗ ಮಾಡಬೇಕು. ಇದರಿಂದ ಜೀವನದಲ್ಲಿ ಯಶಸ್ಸು ಸಾಧ್ಯವಾಗುತ್ತದೆ. ನಮ್ಮಲ್ಲಿ ಮನೆಮಾಡಿರುವ ಅನೇಕ ಸಮಸ್ಯೆಗಳನ್ನು ನಾವೆ ಪರಿಹರಿಸಿಕೊಳ್ಳಬೇಕು. ಇದಕ್ಕೆ ನಮ್ಮ ಪ್ರಯತ್ನ ಮುಖ್ಯ ಎಂದು ಹೇಳಿದರು.    
ಅಗ್ಗದ ಪ್ರಚಾರಕ್ಕೆ ಒಳಗಾಗಬೇಡಿ: ವಿದ್ಯಾವಂತರು ರಚನಾತ್ಮಕ ಕಾರ್ಯಕ್ರಮಗಳಲ್ಲಿ ತೊಡಗಿಸಿಕೊಳ್ಳಬೇಕು. ಸಾರ್ವಜನಿಕ ಆಸ್ತಿಪಾಸ್ತಿ ಹಾಳು ಮಾಡಬಾರದು.
   ಈ ಆಸ್ತಿ ಸರ್ಕಾರ ಸಾರ್ವಜನಿಕ ಹಣದಿಂದಲೇ ನಿರ್ಮಾಣ ಮಾಡಿರುತ್ತದೆ.  ಇಂದಿನ ಉದಾರೀಕರಣ  ನೀತಿ ಬಂಡವಾಳಶಾಹಿಗಳಿಗೆ ಅನುಕೂಲವಾಗುತ್ತಿದೆ ಎಂದರು.
ಮುಂದಾಲೋಚನೆಯಿಲ್ಲದೆ ಯೋಜನೆಗಳನ್ನು ಸರ್ಕಾರ ಅನುಷ್ಠಾನಗೊಳಿಸುವುದರಿಂದ ಸವಲತ್ತುಗಳು ಜನರನ್ನು ಸರಿಯಾಗಿ ತಲುಪುತ್ತಿಲ್ಲ ಎಂದು ಹೇಲಿದ ಅವರು, ವಿದ್ಯಾರ್ಥಿಗಳು ಅಗ್ಗದ ಪ್ರಚಾರಕ್ಕೆ ಒಳಗಾಗಬೇಡಿ ಎಂದು  ಕಿವಿಮಾತು ಹೇಳಿದರು.    
ಕುವೆಂಪು ವಿ.ವಿ. ಕುಲಪತಿ ಪ್ರೊ. ಎಸ್.ಎ.ಬಾರಿ ಮಾತನಾಡಿ, ಜಗತ್ತಿನಲ್ಲಿ ನಮ್ಮ ದೇಶ ಹೆಚ್ಚು ಯುವಶಕ್ತಿ ಹೊಂದಿದೆ. 600 ವಿಶ್ವ ವಿದ್ಯಾಲಯಗಳಿದ್ದರೂ, ಉನ್ನತ ಶಿಕ್ಷಣದ ಬೇಡಿಕೆ ಈಡೇರಿಸಲು ಸಾಧ್ಯವಾಗುತ್ತಿಲ್ಲ.
   ಈ ನಿಟ್ಟಿನಲ್ಲಿ ಶಿಕ್ಷಣದ ಗುಣಮಟ್ಟ ಇನ್ನೂ ಹೆಚ್ಚಬೇಕು ಎಂದು ಹೇಳಿದರು.   
ತುಂಗಾವಿದ್ಯಾವರ್ಧಕ ಸಂಘದ ಸ್ಥಾಪಕ ಸದಸ್ಯ, ಮಾಜಿ ಅಧ್ಯಕ್ಷ ಪ್ರೊ.ಕೆ. ಗಂಗಾಧರ್ ಮಾತನಾಡಿ, ಸ್ನಾತಕೋತ್ತರ ಕೇಂದ್ರ ಪ್ರಾರಂಭವಾಗುತ್ತಿರುವುದು ಸಂಸ್ಥೆಗೆ ಮತ್ತೊಂದು ಗರಿ ಬಂದಂತಾಗಿದ್ದು, ವಿದ್ಯಾರ್ಥಿಗಳು ಸದುಪಯೋಗಪಡಿಸಿಕೊಳ್ಳಬೇಕು ಎಂದರು.
ಕುವೆಂಪು ವಿ.ವಿ. ಡೀನ್ ಪ್ರೊ. ಹಿರೇಮಣಿ ನಾಯಕ್,  ಶಿವಮೊಗ್ಗ ಕಾಲೇಜು ಶಿಕ್ಷಣ ಇಲಾಖೆ ಜಂಟಿ ನಿರ್ದೇಶಕ ಪ್ರೊ. ವಿವೇಕಾನಂದ,  ತಾಪಂ ಅಧ್ಯಕ್ಷೆ ಜೀನಾವಿಕ್ಟರ್ ಡಿಸೋಜ, ಪಟಮಕ್ಕಿ ಮಹಾಬಲೇಶ್, ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಪ್ರಾಂಶುಪಾಲ ಪ್ರೊ. ಡಿ.ಎಸ್. ಸೋಮಶೇಖರ್ ಸ್ವಾಗತಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.