ಉತ್ತರ ಕರ್ನಾಟಕ ಹಬ್ಬಗಳು ವೈಶಿಷ್ಟ್ಯಪೂರ್ಣ: ಮೋಹನ್
ಭದ್ರಾವತಿ: ಶ್ರಾವಣ ಮಾಸ ಬಂತೆಂದರೆ ಹಬ್ಬಗಳ ಸಾಲು ಬಂದಂತೆ. ಅದರಲ್ಲೂ ಉತ್ತರ ಕರ್ನಾಟಕದ ಹಬ್ಬದ ಆಚರಣೆ ವೈಶಿಷ್ಟ್ಯಪೂರ್ಣವಾಗಿರುತ್ತದೆ ಎಂದು ನಗರಸಭೆ ಮಾಜಿ ಅಧ್ಯಕ್ಷ ಬಿ.ಕೆ. ಮೋಹನ್ ತಿಳಿಸಿದರು.
ಉತ್ತರ ಕರ್ನಾಟಕ ಸಾಂಸ್ಕೃತಿಕ ಸಂಘವು ಭಾನುವಾರ ಪಟ್ಟಣದ ಲಯನ್ಸ್ ಕ್ಲಬ್ ಸಭಾಂಗಣದಲ್ಲಿ ನಾಗರ ಪಂಚಮಿ ಹಬ್ಬದ ಪ್ರಯುಕ್ತ ಏರ್ಪಡಿಸಿದ್ದ ವಿಶೇಷ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಉತ್ತರ ಕರ್ನಾಟಕದ ಸಂಪ್ರದಾಯಗಳು, ಅಲ್ಲಿನ ಭಾಷೆ ಜನರ ನಡೆ-ನುಡಿಗಳು, ಉಡುಗೆ-ತೊಡುಗೆಗಳು ವಿಶಿಷ್ಟವಾಗಿವೆ.
ಅಲ್ಲದೆ ಹಬ್ಬ- ಹರಿದಿನಗಳನ್ನು ಬಿಡದೆ ಆಚರಿಸುವ ಇವರು ದೇಶದ ಯಾವುದೇ ಭಾಗದಲ್ಲಿ ನೆಲೆಸಿದರೂ ತಮ್ಮತನವನ್ನು ಉಳಿಸಿಕೊಂಡು ತನ್ನ ನಾಡಿನ ಛಾಪು ಮೂಡಿಸುತ್ತಿದ್ದಾರೆ ಎಂದು ಅಭಿಪ್ರಾಯಪಟ್ಟರು.
ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಶಸ್ತ್ರಚಿಕಿತ್ಸಾತಜ್ಞ ಹಾಗೂ ಉತ್ತರ ಕರ್ನಾಟಕ ಸಾಂಸ್ಕೃತಿಕ ಸಂಘದ ಅಧ್ಯಕ್ಷ ಡಾ. ಆರ್.ಸಿ. ಬೆಂಗಳೂರು ಜಾಗತೀಕರಣದ ಪ್ರವಾಹದಲ್ಲಿ ಸಂಪ್ರದಾಯ ಮತ್ತು ಆಚಾರ- ವಿಚಾರಗಳನ್ನು ಮರೆತು ಪಾಶ್ಚಾತ್ಯ ಸಂಸ್ಕೃತಿಗೆ ಮಾರುಹೋಗಿದೆ ಎಂದು ಹೇಳಿದರು.
ಒತ್ತಡ ಹೇರಬೇಡಿ: ಪೋಷಕರು ತಮ್ಮ ಮಕ್ಕಳು ಕೇವಲ ವೈದ್ಯರು ಹಾಗೂ ಎಂಜಿನಿಯರ್ಗಳಾಗಬೇಕೆಂಬ ವ್ಯಾಮೋಹದಿಂದ ಮಕ್ಕಳ ಮೇಲೆ ಅತಿಯಾದ ಒತ್ತಡ ಹೇರುತ್ತಿರುವುದು ಸರಿಯಲ್ಲ. ಅವರು ಇದರ ಹೊರತಾಗಿ ಬಹಳಷ್ಟು ಕ್ಷೇತ್ರಗಳ ಆಯ್ಕೆಯಿದ್ದು ಅವುಗಳ ಕಡೆಯೂ ಗಮನ ಹರಿಸಬೇಕೆಂದು ಕರೆ ನೀಡಿದರು. ಯುವಜನರಲ್ಲಿ ಹಾಗೂ ಸಮಾಜದ ಎಲ್ಲಾ ಕ್ಷೇತ್ರಗಳಲ್ಲಿ ಪ್ರಾಮಾಣಿಕತೆ ಮರೆಯಾಗುತ್ತಿರುವುದರ ಬಗ್ಗೆ ವೈದ್ಯರು ವಿಷಾದಿಸಿದರು.
ಪಂಚಮಿ ಹಬ್ಬದ ಪ್ರಯುಕ್ತ ಏರ್ಪಡಿಸಿದ್ದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನಗಳನ್ನು ನೀಡಲಾಯಿತು. ಸಮಾಜದ ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಪುರಸ್ಕರಿಸಲಾಯಿತು. ಸಂಘದ ಗೌರವಾಧ್ಯಕ್ಷ ಬಿ.ಕೆ. ಜಗನ್ನಾಥ್, ವೀರಣ್ಣ ಅಸುಂಡಿ, ಎಸ್.ಎಸ್.ಪಾಟೀಲ್ ಮೊದಲಾದವರು ವೇದಿಕೆಯಲ್ಲಿದ್ದರು.
ಎಸ್.ಎಸ್. ಜಾಡಬುತ್ತಿ ಸ್ವಾಗತಿಸಿದರು. ಶಾಂತಲಾ ಉದೋಷಿ ಸ್ವಾಗತನೃತ್ಯ ಮಾಡಿದರು. ಎಂ.ಬಿ. ತಡಕನಹಳ್ಳಿ ವಾರ್ಷಿಕ ವರದಿಯನ್ನೋದಿದರು. ಚಂದ್ರಶೇಖರ್ ಕಾರ್ಯಕ್ರಮ ನಿರೂಪಿಸಿದರು. ಗೀತಾ ಬೆಂಗಳೂರಿ ವಂದಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

