ಶಿವಮೊಗ್ಗ

ಗ್ರಾಮೀಣ ಪ್ರದೇಶದ ಮಕ್ಕಳು ದಡ್ಡರಲ್ಲ: ನಾಗರಾಜ್

Published On :

ಸಾಗರ: ಗ್ರಾಮೀಣ ಮಕ್ಕಳು ದಡ್ಡರಲ್ಲ. ಪರಿಶ್ರಮ ಹಾಕಿದರೆ ಗ್ರಾಮಾಂತರ ಶಾಲೆಯ ಮಕ್ಕಳೂ ಉತ್ತಮ ಫಲಿತಾಂಶ ದಾಖಲಿಸಬಹುದು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಎಂ. ನಾಗರಾಜ್ ಹೇಳಿದರು.
ತಾಲೂಕಿನ ಸಿರಿವಂತೆ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಕೆನರಾ ಬ್ಯಾಂಕ್ ಜ್ಯುಬಿಲಿ ಎಜುಕೇಷನ್ ಫಂಡ್ ಸಂಸ್ಥೆ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಪ್ರತಿಭಾನ್ವಿತರಿಗೆ ಎ. ನಾರಾಯಣ ಪೈ ಸ್ಮಾರಕ ನಗದು ಪುರಸ್ಕಾರ ನೀಡಿ ಮಾತನಾಡಿ, ಕೀಳರಿಮೆಯಿಂದ ಗ್ರಾಮೀಣ ಶಾಲೆಯ ಮಕ್ಕಳು ಶೈಕ್ಷಣಿಕವಾಗಿ ಹಿಂದುಳಿಯುತ್ತಿದ್ದಾರೆ ಎಂದು ಅಭಿಪ್ರಾಯಪಟ್ಟರು.
ಗಿಳಿಪಾಠ ಬಿಡಿ: ತಾಂತ್ರಿಕತೆ ಮುಂದುವರಿದಾಗ ಎಲ್ಲರೂ ತಂತ್ರಜ್ಞಾನವನ್ನು ಬಳಸಿಕೊಳ್ಳುವಲ್ಲಿ ಹಿಂಜರಿಯಬಾರದು. ಇದು ಗ್ರಾಮೀಣ ಮಕ್ಕಳಿಗೂ ಅನ್ವಯವಾಗುತ್ತದೆ. ಗಿಳಿಪಾಠವನ್ನು ಬಿಟ್ಟು ಓದಿನಲ್ಲಿ ಶ್ರಮ ಹಾಕಿದರೆ ಹೆಚ್ಚು ಅಂಕ ಗಳಿಕೆ ಸಾಧ್ಯವಾಗುತ್ತದೆ. ವಿದ್ಯಾರ್ಥಿಗಳು ಸುಖ ಹಾಗೂ ನಿದ್ರೆಗೆ ಮಾರುಹೋಗದೆ ಓದಿನಲ್ಲಿ ತೊಡಗಿಸಿಕೊಂಡರೆ ಶೈಕ್ಷಣಿಕ ಸ್ಪರ್ಧೆ ಕಷ್ಟವಲ್ಲ ಎಂದು ಹೇಳಿದರು.
ಹಿರಿಯ ಪಶು ವೈದ್ಯ ನಿರ್ದೇಶಕ ಡಾ.ಎನ್.ಎಚ್. ಶ್ರೀಪಾದರಾವ್, ಮಕ್ಕಳ ಆದ್ಯತೆ ಮೊಬೈಲ್ ಮೊದಲಾದೆಡೆ ಹರಿಯದಂತೆ ಪೋಷಕರು ನೋಡಿಕೊಳ್ಳಬೇಕು. ದ್ವಿತೀಯ ಪಿಯುಸಿ ಹಂತ ಬದುಕಿನ ಪ್ರಮುಖ ಘಟ್ಟವಾಗಿದ್ದು, ಈ ನಡುವೆ ಗಮನವನ್ನು ಬೇರೆಡೆಗೆ ಸೆಳೆಯುವ ಆಕರ್ಷಣೆಗಳನ್ನು ತ್ಯಾಗ ಮಾಡಿ ಎಂದು ಕರೆ ನೀಡಿದರು.
ಕಾಲೇಜಿನ ಉಪಪ್ರಾಚಾರ್ಯ ಶಿವಪ್ಪ ಸಂಗಣ್ಣನವರ್ ಅಧ್ಯಕ್ಷತೆ ವಹಿಸಿದ್ದರು. ಗ್ರಾಮಾಂತರ ವಿಜ್ಞಾನ ಸಮುದಾಯ ಕೇಂದ್ರದ ಕೆ. ವೆಂಕಟೇಶ್ ಇದ್ದರು. ಜೂಲಿಯಟ್ ಫರ್ನಾಂಡಿಸ್ ಸ್ವಾಗತಿಸಿದರು. ಕೆಬಿಜೆಇಎಫ್ ಸ್ಥಳೀಯ ಸಂಚಾಲಕ ಮಾ.ವೆಂ.ಸ. ಪ್ರಸಾದ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಬಿ.ಟಿ. ಲಕ್ಷಣಪ್ಪ ವಂದಿಸಿದರು. ಸತೀಶ್ ಭಂಡಾರಿ ನಿರೂಪಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.