ಎಂಬಿಎ ವಿದ್ಯಾರ್ಥಿ, ಪ್ರೊಫೆಸರ್ಗಳಿಗೆ ಸಂವಾದ
ಶಿವಮೊಗ್ಗ: ಪಿಇಎಸ್ಐಟಿಎಂನ ಎಂಬಿಎ ವಿಭಾಗದಲ್ಲಿ ವಿದ್ಯಾರ್ಥಿ ಮತ್ತು ಪ್ರೊಫೆಸರ್ಗಳಿಗಾಗಿ ಜರ್ಮನಿಯ ಕಾಮರ್ಸ್ ಬ್ಯಾಂಕ್ನ ನಿರ್ದೇಶಕರೊಂದಿಗೆ ಸಂವಾದ ಏರ್ಪಡಿಸಲಾಗಿತ್ತು.
ಸಂವಾದದಲ್ಲಿ ಬ್ಯಾಂಕ್ನ ಜೋಕೀಮ್ ಬ್ಲೆಸ್ಟಿನ್, ಬ್ಯಾಂಕಿಂಗ್, ಹೂಡಿಕೆ, ಹೊರಗುತ್ತಿಗೆ ಮುಂತಾದ ವಿಚಾರಗಳ ಬಗ್ಗೆ ಚರ್ಚೆ ನಡೆಸಿದರು. ಬ್ಯಾಂಕಿಂಗ್ ಹಣಕಾಸು ಮತ್ತು ವಾಣಿಜ್ಯ ನಿರ್ವಹಣೆಯಲ್ಲಿ ಮೂಲತ- ಸದೃಢತೆ ಇರಬೇಕಲ್ಲದೆ, ಇಂಗ್ಲಿಷ್ ಮತ್ತು ಜರ್ಮನ್ ಭಾಷೆಯ ಕುರಿತು ಸಂವಹನ ಕೌಶಲ್ಯ ಬಹಳ ಮುಖ್ಯ ಎಂದು ತಿಳಿಸಿದರು. ಸಂವಾದದಲ್ಲಿ ಕಾಲೇಜಿನ ಪ್ರಾಂಶುಪಾಲ ಡಾ. ಸುರೇಶ್ ಚಂದ್ರ ಮೋಹನ್, ಡೆವಲಪ್ಮೆಂಟ್ನ ಮುಖ್ಯಸ್ಥ ಪ್ರಮೋದ್ ಪ್ರಭುದೇವ್, ಡಾ. ಆರ್. ನಾಗರಾಜ, ವಿವಿಧ ವಿಭಾಗದ ಮುಖ್ಯಸ್ಥರು, ಪ್ರೊಫೆಸರ್, ಉಪನ್ಯಾಸಕರು ಪಾಲ್ಗೊಂಡಿದ್ದರು.
ಸುಂದರ್ರಾಜ್ಗೆ ಸನ್ಮಾನ
ಶಿವಮೊಗ್ಗ: ಲೇಖಕ ಎಂ.ಎನ್. ಸುಂದರ್ರಾಜ್ ಅವರನ್ನು ಬುಧವಾರ ನಗರದ ರವೀಂದ್ರನಗರದ ಪ್ರಸನ್ನ ಗಣಪತಿ ದೇವಾಲಯದಲ್ಲಿ ಸುಂದರ್ರಾಜ್ ಅಭಿಮಾನಿಗಳು ಸನ್ಮಾನಿಸಿದರು. ಕಾರ್ಯಕ್ರಮದಲ್ಲಿ ಉದ್ಯಮಿ ಡಿ.ಎಸ್.ಅರುಣ್, ನೂರಾರು ಕತೆ ಕವನಗಳು ಹಾಗೂ ಸಾಹಿತ್ಯದ ವಿಮರ್ಶೆಯನ್ನು ಬರೆದು ಅನೇಕ ಕಲಾವಿದರನ್ನು ಹಾಗೂ ಶಿವಮೊಗ್ಗೆಯ ನೂರಕ್ಕೂ ಹೆಚ್ಚು ವಿವಿಧ ಕ್ಷೇತ್ರಗಳಲ್ಲಿ ಸಾಧನೆಯನ್ನು ಮಾಡಿದ ಸಾಧಕರನ್ನು ಶಿವಮೊಗ್ಗೆಯ ಸಾಧಕರು ಕೃತಿಯ ಮೂಲಕ ಪರಿಚಯಿಸಿದ ಸುಂದರ್ರಾಜ್ ಅವರ ಪ್ರತಿಭೆ ಅಗಾಧವಾಗಿದೆ ಎಂದರು.
ಸಾಮಾಜಿಕ ಕಳಕಳಿ: ನಿರಂತರ ಅಧ್ಯಯನ, ಬರವಣಿಗೆ, ನೂರಾರು ಲೇಖನಗಳು, ಪ್ರಸ್ತುತ ಸಮಾಜದ ಅಂಕು- ಡೊಂಕುಗಳನ್ನು ಸಾರ್ವಜನಿಕರಿಗೆ ತಿಳಿಸುತ್ತಾ ವನಿತಾ ವಿದ್ಯಾಲಯವನ್ನು ಸ್ಥಾಪಿಸಿ, ಸಾವಿರಾರು ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡುತ್ತಾ ಗಮಕ ಕಲಾವಿದರಿಗೆ ಪ್ರೋತ್ಸಾಹಿಸುತ್ತಾ ನಾಗರಿಕ ಹಿತರಕ್ಷಣಾ ವೇದಿಕೆ, ಅಣ್ಣಹಜಾರೆ ಹೋರಾಟ ಸಮಿತಿಗಳಲ್ಲಿ ಪಾಲ್ಗೊಂಡು ಸಾಮಾಜಿಕ ಕಳಕಳಿ ಮೆರೆದಿದ್ದಾರೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಅಶೋಕ್ಯಾದವ್, ಜನಮೇಜಿರಾವ್, ಅ.ಪ. ರಾಮಭಟ್, ಅ.ನಾ. ವಿಜಯೇಂದ್ರರಾವ್, ಡಾ. ಎಂ.ಎನ್. ನಾಯಕ್, ವಿಜಯಕುಮಾರ್, ರುದ್ರೇಗೌಡ, ಎಸ್.ವಿ. ತಿಮ್ಮಯ್ಯ, ಪದ್ಮನಾಭ್ ಉಡುಪ ಮತ್ತಿತರರು ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

