ನಮ್ಮಲ್ಲಿ ಇನ್ನಷ್ಟು ಸಾಹಿತ್ಯಾಭಿಮಾನ ಬೆಳೆಯಲಿ
ಕ.ಪ್ರ.ವಾರ್ತೆ ಭದ್ರಾವತಿ ಆ.22
ಕನ್ನಡ ನಾಡಿಗೆ ವಿಶೇಷ ಸ್ಥಾನಮಾನವಿದೆ, ಭಾಷೆಯ ಉಳಿವಿಗಾಗಿ ಕನ್ನಡಿಗರಾದ ನಾವು ಸಾಹಿತ್ಯಾಭಿಮಾನ ಬೆಳೆಸಿಕೊಳ್ಳಬೇಕು ಎಂದು ಶಾಸಕ ಎಂ.ಜೆ.ಅಪ್ಪಾಜಿ ಹೇಳಿದರು.
ಭದ್ರಾವತಿ ತಾಲೂಕು ಕಸಾಪ ಹಿರಿಯೂರು ಗ್ರಾಮದಲ್ಲಿ ಇತ್ತೀಚೆಗೆ ಏರ್ಪಡಿಸಿದ್ದ ಹಿರಿಯೂರು ಹೋಬಳಿ ಸಾಹಿತ್ಯ ಘಟಕ ಉದ್ಘಾಟಿಸಿ ಮಾತನಾಡಿದ ಅವರು, ಯಾವುದೇ ರಾಜ್ಯದಲ್ಲಿಯೂ ಆಯಾ ಭಾಷೆಯ ಸಾಹಿತ್ಯ ಪರಿಷತ್ತುಗಳಿಲ್ಲವಾದರೂ ನಮ್ಮ ರಾಜ್ಯದಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಇರುವುದು ಹೆಮ್ಮೆಯ ವಿಷಯವೆಂದರು.
ಶೇ. 30 ಮಾತ್ರ: ರಾಜ್ಯದ ರಾಜಧಾನಿಯಾದ ಬೆಂಗಳೂರಿನಲ್ಲಿ ಕನ್ನಡ ಭಾಷೆ ಮಾತನಾಡುವವರ ಸಂಖ್ಯೆ ಶೇ. 30 ಮಾತ್ರ ಇರುವುದರ ಬಗ್ಗೆ ಕಳಕಳಿ ವ್ಯಕ್ತಪಡಿಸಿದ ಶಾಸಕರು, ಇದು ನೋವಿನ ಸಂಗತಿಯಾಗಿದೆ ಎಂದರು. ಹೋಬಳಿ ಸಾಹಿತ್ಯ ಘಟಕದಲ್ಲಿ ಸಾಹಿತ್ಯವನ್ನು ಉಳಿಸಿ ಬೆಳೆಸುವ ಕಾರ್ಯಕ್ರಮಗಳು ನಿರಂತರವಾಗಿ ನಡೆಯಲಿ ಎಂದು ಅವರು ಹಾರೈಸಿದರು.
ಜಿಲ್ಲಾ ಕಸಾಪ ಅಧ್ಯಕ್ಷ ಡಿ. ಮಂಜುನಾಥ್ ಮಾತನಾಡಿ, ಕನ್ನಡ ಕಟ್ಟುವ ಕೆಲಸ ಕನ್ನಡಿಗರಿಂದಲೇ ಆಗಬೇಕು ಎಂದರು. ಕನ್ನಡಿಗರಲ್ಲಿ ಆತ್ಮಸ್ಥೈರ್ಯವಿದೆ. ನಾವು ಆದರ್ಶ ನೀತಿಗಳನ್ನು ಬೋಧಿಸುವಾಗ ಚೆನ್ನಾಗಿ ಅರ್ಥಮಾಡಿಕೊಂಡು ಬೋಧಿಸಬೇಕು. ಸಾಹಿತ್ಯ ವಿದ್ಯಾವಂತರಿಗೆ ಮಾತ್ರವೆಂಬ ತಪ್ಪು ಕಲ್ಬನೆ ಇದೆ. ಇಂದು ಸಾಹಿತ್ಯ ಎಲ್ಲರಿಗೂ ಬೇಕಾಗಿದೆ ಎಂದರು.
ಮಂಜುನಾಥ್ ಅವರನ್ನು ಸಮಾರಂಭದಲ್ಲಿ ಸನ್ಮಾನಿಸಲಾಯಿತು.
37ನೇ ಸ್ಥಾನ: ಕೋಡ್ಲು ಯಜ್ಞಯ್ಯ ಮಾತನಾಡಿ, ಕನ್ನಡ ಭಾಷೆಗೆ 2,500 ವರ್ಷಗಳ ಇತಿಹಾಸವಿದೆ. ಮಹಾಭಾರತದ ಭೀಷ್ಮಪರ್ವದಲ್ಲಿ ಕನ್ನಡದ ವಾಕ್ಯಗಳು ಸಿಗುತ್ತವೆ. ವಿಶ್ವದಲ್ಲಿರುವ 7000 ಭಾಷೆಗಳಲ್ಲಿ ಕನ್ನಡವು 37ನೇ ಸ್ಥಾನದಲ್ಲಿದೆ ಎಂದರು.
ಭದ್ರಾವತಿ ತಾಲೂಕು ಕಸಾಪ ಅಧ್ಯಕ್ಷ ಕೋಗಲೂರು ತಿಪ್ಪೇಸ್ವಾಮಿ ಪ್ರಾಸ್ತಾವಿಕವಾಗಿ ಮಾತನಾಡಿದರು. ತಾಲ್ಲೂಕು ಕಸಾಪ ಮಹಿಳಾ ಘಟಕದ ಅಧ್ಯಕ್ಷೆ ಅನ್ನಪೂರ್ಣ ಸತೀಶ್ ಮಾತನಾಡಿದರು.
ಹಿರಿಯೂರು ಗ್ರಾಪಂ ಅಧ್ಯಕ್ಷೆ ಆಶಾದೇವಿ, ಹೊಳೆಹೊನ್ನೂರು ಹೋಬಳಿ ಸಾಹಿತ್ಯ ಘಟಕದ ಅಧ್ಯಕ್ಷ ದ್ಯಾಮಪ್ಪ, ಸಿಂಗನಮನೆ ಪ್ರಕಾಶ, ಬೊಮ್ಮನಕಟ್ಟೆ ಯಲ್ಲಪ್ಪ, ತಾಲೂಕು ಕಸಾಪ ಕಾರ್ಯದರ್ಶಿ ತಿಮ್ಮಪ್ಪ ಮತ್ತು ಸತೀಶ್, ಎಚ್.ಬಿ. ಸುಬ್ರಮಣ್ಯ ಮೊದಲಾದವರು ಇದ್ದರು.
ಹಿರಿಯೂರು ಹೋಬಳಿ ಸಾಹಿತ್ಯ ಘಟಕದ ಅಧ್ಯಕ್ಷ ಎಚ್.ಬಿ. ಸಿದ್ದೋಜಿರಾವ್ ಅಧ್ಯಕ್ಷತೆ ವಹಿಸಿದ್ದರು. ಅನು ಮತ್ತು ಸಂಗಡಿಗರು ಪ್ರಾರ್ಥಿಸಿದರು. ಎಸ್.ಬಿ.ಎಂ.ಎಂ.ಆರ್ ಪ್ರೌಢಶಾಲೆಯ ಮಕ್ಕಳು ನಾಡಗೀತೆ ಹಾಡಿದರು. ಹರೋನಹಳ್ಳಿ ಸ್ವಾಮಿ ರೈತಗೀತೆ ಹಾಡಿದರು. ಕೋಶಾಧ್ಯಕ್ಷ ಎ.ಎನ್. ಪುಟ್ಟಸ್ವಾಮಿ ಸ್ವಾಗತಿಸಿದರು. ಕಾರ್ಯದರ್ಶಿ ಎಚ್.ವೈ. ಕುಮಾರ್ ನಿರೂಪಿಸಿದರು. ಎಚ್.ಸಿ. ಮಂಜುನಾಥ್ ವಂದಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

