ಮಕ್ಕಳ ಸಾಹಿತ್ಯ ಸಂಪುಟಗಳ ಅಗತ್ಯವಿದೆ: ನಾಗರಾಜರಾವ್
ಶಿವಮೊಗ್ಗ: ಸಾಹಿತ್ಯ ಆಕಾಡೆಮಿಗಳು ಮಕ್ಕಳ ಸಾಹಿತ್ಯಕ್ಕೆ ಸಂಬಂಧಿಸಿದ ಸಂಪುಟಗಳನ್ನು ಹೊರತರಬೇಕಿದೆ ಎಂದು ಸಾಹಿತಿ ಎಂ.ವಿ. ನಾಗರಾಜರಾವ್ ಅಭಿಪ್ರಾಯಪಟ್ಟರು.
ಕರ್ನಾಟಕ ಸಂಘ ಶನಿವಾರ ಕರ್ನಾಟಕ ಸಂಘದಲ್ಲಿ ಆಯೋಜಿಸಿದ್ದ ಡಾ. ಶಿವರಾಮಕಾರಂತ ಮಕ್ಕಳ ಸಾಹಿತ್ಯ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪ್ರಶಸ್ತಿ ಸ್ವೀಕರಿಸಿ ಅವರು, ಇಂದಿನ ಅಕಾಡೆಮಿಗಳು ಹಿರಿಯ ಸಾಹಿತಿಗಳ ಸಂಪುಟಗಳನ್ನು ಮಾತ್ರ ಹೊರತರುತ್ತಿದ್ದು, ಮುಂದಿನ ದಿನಗಳಲ್ಲಿ ಮಕ್ಕಳ ಸಾಹಿತ್ಯಕ್ಕೆ ಸಂಬಂಧಿಸಿದ ಪುಸ್ತಕ, ಸಂಪುಟಗಳನ್ನು ಬಿಡುಗಡೆಗೊಳಿಸದರೆ, ಮಕ್ಕಳಲ್ಲಿ ಸಾಹಿತ್ಯ ಲೋಕ ಸೃಷ್ಟಿಸಬಹುದು ಎಂದರು.
ಮಕ್ಕಳ ಸಾಹಿತ್ಯವೆಂಬುದು ಮಕ್ಕಳ ಮೇಲೆ ಅಗಾಧ ಪ್ರಭಾವ ಬೀರುತ್ತದೆ. ಇಂದಿನ ಮಕ್ಕಳಿಗೆ ಕಥೆಗಳನ್ನು ಹೇಳುವ ಮೂಲಕ ಮಕ್ಕಳ ಸಾಹಿತ್ಯ ಲೋಕಕ್ಕೆ ಕರೆದೊಯ್ಯಬೇಕು. ಈ ಮೂಲಕ ಮಕ್ಕಳಲ್ಲಿ ಒಳ್ಳೆಯ ಮನಸ್ಸು ಬೆಳೆಸಬೇಕು ಎಂದರು.
ಮಕ್ಕಳಲ್ಲಿ ಸಾಂಸ್ಕೃತಿಕ ಲೋಕದ ಕಲ್ಪನೆ ಮೂಡಿಸದಿದ್ದರೆ ಬದುಕು ಕಟ್ಟಿಕೊಡುವುದು ಸಾಧ್ಯವಾಗುವುದಿಲ್ಲ. ಮಕ್ಕಳಲ್ಲಿ ಸಾಂಸ್ಕೃತಿಕ ಲೋಕದ ಕಲ್ಪನೆ ಮೂಡಿಸುವ ಕೆಲಸ ಪೊಷಕರು ಮಾಡಬೇಕು ಎಂದರಲ್ಲದೇ, ಆಮೇರಿಕಾದಲ್ಲಿ ಮಕ್ಕಳಿಗೆ ಬೇಕಾಗುವ ಪುಸ್ತಕವನ್ನು ನೀಡಲು ದೊಡ್‌ಡದಾದ ಗ್ರಂಥಾಲಯವನ್ನು ತರೆಯಲಾಗಿದೆ. ಆದರೆ, ಕರ್ನಾಟದಲ್ಲಾಗಲಿ, ಭಾರತದ ಯಾವುದೇ ರಾಜ್ಯದಲ್ಲಾಗಲಿ ಮಕ್ಕಳಿಗೆ ಸಂಬಂಧಿಸಿದ ಗ್ರಂಥಾಲಯ ತರೆಯದಿರುವುದು ವಿಷಾದನೀಯ ಎಂದರು.
ಮಕ್ಕಳ ಸಾಹಿತ್ಯವನ್ನು ಬೆಳೆಸುವ ಉದ್ದೇಶದಿಂದಲೇ ನಾನು ಶೃಂಗಾರ ಪ್ರಕಾಶನ ಆರಂಭಿಸಿದ್ದು, ಮಕ್ಕಳಿಗೆ ಬೇಕಾಗುವ ವ್ಯಾಕರಣ, ಕಥೆ, ಕವನಗಳು ಹಾಗೂ ದೇಶದ ವಿವಿಧ ಸಾಧಕರು ಸೇರಿದಂತೆ ಮತ್ತಿತರ ಪುಸ್ತಕಗಳನ್ನು ಪ್ರಕಾಶನದ ಮೂಲಕ ಹೊರತರಲಾಗಿದೆ ಎಂದು ತಿಳಿಸಿದರು.
ಇದಕ್ಕೂ ಮೊದಲು ಅಭಿನಂದನಾ ಭಾಷಣ ಮಾಡಿದ ಸರ್ವೋತ್ತಮ ಆಚಾರ್ಯ ಪ್ರಶಸ್ತಿ ಪುರಸ್ಕೃತ ವಿದ್ಯಾವಾಚಸ್ಪತಿ ಕವಿತಾ ಕೃಷ್ಣ, ನಾಗರಾಜರಾವ್ ಅವರ ಅನುವಾದದ ಕಲೆ ಉತ್ತಮವಾಗಿದೆ. ಒಬ್ಬ ದಕ್ಷ ಅನುವಾದಕರ ಎನ್ನಿಸಿಕೊಂಡಿದ್ದಾರೆ. ಇವರು ಒಬ್ಬ ವ್ಯಕ್ತಿ ಅಲ್ಲ ಶಕ್ತಿ ಕೂಡ ಹೌದು. ಅದರಲ್ಲಿಯೂ ಸಾಹಿತ್ಯ ಲೋಕದ ಶಕ್ತಿ ಎಂದರು.
ಲೇಖಕರೆಲ್ಲರೂ ಕನ್ನಡ ಸಾಹಿತ್ಯ ಕಟ್ಟುವ ಕೆಲಸ ಮಾಡಿದಿದ್ದರೆ, ರಾಜ್ಯದ ಕನ್ನಡ ಶಾಲೆಗಳು ಮುಚ್ಚುವ ಸ್ಥಿತಿ ತಲುಪುತ್ತಿರಲಿಲ್ಲ ಎಂದು ಬೇಸರವ್ಯಕ್ತಪಡಿಸಿದ ಅವರು, ಸಾಹಿತ್ಯ ಆತ್ಮಕ್ಕೆ ಸಂತೋಷ ಸಿಗುತ್ತದೆ. ಒಂದು ವೇಳೆ ಸಾಹಿತ್ಯ ಇಲ್ಲದಿದ್ದರೆ ಮನುಷ್ಯ ಪಶುವಿನಂತೆ ಜೀವನ ನಡೆಸಬೇಕಿತ್ತು ಎಂದು ಅಭಿಪ್ರಾಯಪಟ್ಟರು. ವೇದಿಕೆಯಲ್ಲಿ ಸಂಘದ ಪೂರ್ವಾಧ್ಯಕ್ಷ ಕೆ.ಜಿ. ಸುಬ್ರಹ್ಮಣ್ಯ, ಅಧ್ಯಕ್ಷ ಎಸ್.ವಿ. ತಿಮ್ಮಯ್ಯ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

