ಶಿವಮೊಗ್ಗ

ಬಸ್ ಸಂಚಾರಕ್ಕೆ ಆಗ್ರಹಿಸಿ ರಸ್ತೆ ತಡೆ

Published On :

ಕ.ಪ್ರ. ವಾರ್ತೆ  ಶಿರಾಳಕೊಪ್ಪ  ಆ.26
ಶಿಕಾರಿಪುರ ತಾಲೂಕಿನ ಕೊರಟಿಗೆರೆ- ಹುಲುಗಿನ ಕೊಪ್ಪ ಭಾಗದಲ್ಲಿ ಶಾಲಾ ಕಾಲೇಜು ವಿದ್ಯಾರ್ಥಿಗಳ ಒಡಾಟಕ್ಕೆ ಕೆಎಸ್‌ಆರ್‌ಟಿಸಿ ಬಸ್ ಬಿಡದಿರುವಿದನ್ನು ಖಂಡಿಸಿ ರೈತಸಂಘ ಹಾಗೂ ವಿದ್ಯಾರ್ಥಿಗಳು ರಸ್ತೆತಡೆ ಮಾಡಿ ತಮ್ಮ ಆಕ್ರೋಶ ವ್ಯಕ್ತಪಡಿಸಿದರು.   
ಬೆಳಗ್ಗೆ 7-30ರಿಂದಲೇ ಪ್ರಾರಂಭವಾದ ಶಿರಾಳಕೊಪ್ಪ - ಹಿರೇಕೆರೂರ ಮಾರ್ಗ ಮಧ್ಯವಿರುವ ಹುಲಿಗಿನಕೊಪ್ಪ- ಕೊರಟಿಕೆರೆ ಕ್ರಾಸ್ ಬಸ್ ಬಳಿ ನೂರಾರು ವಿದ್ಯಾರ್ಥಿಗಳು ಹಾಗೂ ನೂರಾರು ರೈತರು ರಸ್ತೆ ಸಾರಿಗೆ ನಿಗಮದ ಅಧಿಕಾರಿಗಳ ವಿರುದ್ದ ಘೋಷಣೆ ಕೂಗಿ ರಸ್ತೆ ತಡೆ ನಡೆಸಿ, ಬೇಡಿಕೆ ಈಡೇರುವವರೆಗೆ ಹೋರಾಟ ನಡೆಸುವದಾಗಿ ರಸ್ತೆಯಲ್ಲೇ ಕುಳಿತು ಪ್ರತಿಭಟಿಸಿದರು.
  ತಾಲೂಕಿನ ಕೊನೆ ಗ್ರಾಮ ಮಲ್ಲೇನಹಳ್ಳಿಯಿಂದ ಶಿರಾಳಕೊಪ್ಪ- ಹಿರೇಕೆರೂರ ಮಾರ್ಗದ ಮಧ್ಯೆ ಇರುವಂತಹ ಹುಲಿಗಿನಕೊಪ್ಪ ಸಪಪೂ ಕಾಲೇಜಿಗೆ ವಿದ್ಯಾರ್ಥಿಗಳಿಗೆ ಒಂದೇ ಒಂದು ಬಸ್ಸು ಬಿಡದೆ ಇರುವುದು ಸಾರಿಗೆ ನಿಗಮದ ನಿರ್ಲಕ್ಷ್ಯ ಎತ್ತಿ ತೋರಿಸುತ್ತದೆ ಎಂದು ರೈತ ಸಂಘದ ಪದಾಧಿಕಾರಿಗಳು ಆಕ್ರೋಶ ವ್ಯಕ್ತಪಡಿಸಿ ರಸ್ತೆ ಸಾರಿಗೆ ನಿಗಮದ ಅಧಿಕಾರಿಗಳನ್ನು ಕರೆಸುವಂತೆ ಒತ್ತಾಯಿಸಿದರು.
    ರೈತರ ಮನವಿಗೆ ಸ್ಥಳದಲ್ಲಿ ಇದ್ದ ಎಸ್ ಐ ಗುರುಪ್ರಸಾದ್ ತಕ್ಷಣ ಇಲಾಖೆಯ ಅಧಿಕಾರಿಗಳನ್ನು ಕರೆಸಿದರು. ಸ್ಥಳಕ್ಕೆ ಆಗಮಿಸಿದ ಸಾಗರ ವೃತ್ತದ ಟ್ರಾಫಿಕ್ ಕಂಟ್ರೋಲರ್ ರೇಣುಕಾನಂದ ಹಾಗೂ ಆರ್ಟಿಸಿ ಓ ಈಶ್ವರ್ ಹಾಗೂ ಹಿರೇಕೆರೂರ ಡಿಪೋ ಮ್ಯಾನೇಜರ್ ನಂಜುಂಡಸ್ವಾಮಿ ಸ್ಥಳಕ್ಕೆ ಬಂದರು.
ನಂತರ ಎಸ್.ಐ ಗುರುಪ್ರಸಾದ್ ಮಧ್ಯಸ್ಥಿಕೆಯಲ್ಲಿ ನಾಲ್ಕು ದಿನದ ಒಳಗಡೆ ಬಸ್ಸು ಬಿಡುವುದಾಗಿ ತಿಳಿಸಿದ ಮೇಲೆ ಪ್ರತಿಭಟನೆ ಹಿಂಪಡೆಯಲಾಯಿತು.
ರಸ್ತೆತಡೆ ಹೋರಾಟದ ನೇತೃತ್ವವನ್ನು ಶಿಕಾರಿಪುರ ತಾಲೂಕು ರೈತ ಸಂಘದ ಅಧ್ಯಕ್ಷ ಶಿವಯೋಗಿ, ಹಿರೇಕೆರೂರ ತಾಲೂಕ ರೈತ ಸಂಘದ ಅಧ್ಯಕ್ಷ ರಾಜಶೇಖರ್, ರೈತ ನಾಯಕ ಲೋಕಪ್ಪಗೌಡ ಅಡಗಂಟಿ ಶಂಕ್ರಪ್ಪ ಚೆನ್ನಾಪುರ, ಹೊನ್ನಪ್ಪ, ರಾಜಪ್ಪ, ಪರಮೇಶ್ವರಪ್ಪ ಹಾಗೂ ಹಲವಾರು ರೈತ ನಾಯಕರು ವಿದ್ಯಾರ್ಥಿಗಳು ವಹಿಸಿದ್ದರು.
--

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.