ಶಿವಮೊಗ್ಗ

ಛದ್ಮ ವೇಷ ಸ್ಪರ್ಧೆ ಸಂಸ್ಕೃತಿ ಅನಾವರಣ: ಪೈ

Published On :

ಜೋಗ್ ಫಾಲ್ಸ್: ಛದ್ಮ ವೇಷ ಸ್ಪರ್ಧೆಗಳನ್ನು ಏರ್ಪಡಿಸುವುದರಿಂದ ನಾಡಿನ ಭವ್ಯ ಸಂಸ್ಕೃತಿಯ ಅನಾವರಣಕ್ಕೆ ಅನುಕೂಲವಾಗುತ್ತದೆ ಎಂದು ವರ್ತಕ, ಸಮಾಜ ಸೇವಕ ಶ್ರೀನಿವಾಸ್ ಎಂ. ಪೈ ತಿಳಿಸಿದರು.
ಅವರು ಕಾರ್ಗಲ್ನ ಶರಾವತಿ ವಿದ್ಯಾ ಕೇಂದ್ರದಲ್ಲಿ ನಡೆದ ಕೃಷ್ಣವೇಷ ಸ್ಪರ್ಧೆಯಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿ, ಕೃಷ್ಣವೇಷ ಸ್ಪರ್ಧೆಯಲ್ಲಿ ಭಾಗವಹಿಸಿರುವ ಮಕ್ಕಳನ್ನು ನೋಡುತ್ತಿದ್ದರೆ ಮುದ್ದು ಕೃಷ್ಣ ಲೀಲೆಗಳು ನೆನಪಿಗೆ ಬರುತ್ತವೆ. ಇಂತಹ ಸ್ಪರ್ಧೆಗಳಿಂದ ಇಂದಿನ ಮಕ್ಕಳಿಗೆ ಹಿಂದಿನ ಇತಿಹಾಸ, ಸಂಸ್ಕೃತಿಯ ಬಗೆಗೆ ಮಾಹಿತಿ ಒದಗಿಸಿದಂತಾಗುತ್ತದೆ. ಇಂದಿನ ಮಕ್ಕಳನ್ನು ಸುಸಂಸ್ಕೃತರನ್ನಾಗಿ ಬೆಳೆಸಲು ಇಂತಹ ಕಾರ್ಯಕ್ರಮಗಳು ಉತ್ತಮ ವೇದಿಕೆಯಾಗಿವೆ ಎಂದು ಅವರು ಹೇಳಿದರು.
ಉತ್ತಮ ವೇದಿಕೆ: ಶರಾವತಿ ವಿದ್ಯಾ ಕೇಂದ್ರದ ಸಂಸ್ಥಾಪಕ ಸದಸ್ಯ, ನಿರ್ದೇಶಕ ಬಿ.ಎಸ್. ಯಶೋಧರ ಇಂದ್ರ ಮಾತನಾಡಿ, ನೂತನ ಆಡಳಿತ ಮಂಡಳಿ ಅಸ್ಥಿತ್ವಕ್ಕೆ ಬಂದ ನಂತರ ಕಳೆದ 2-3 ವರ್ಷಗಳಿಂದ ವಿದ್ಯಾ ಕೇಂದ್ರದಲ್ಲಿ ವಿವಿಧ ಕ್ರಿಯಾತ್ಮಕ ಚಟುವಟಿಕೆಗಳನ್ನು ಹಮ್ಮಿಕೊಳ್ಳುವುದರ ಮೂಲಕ ಸಂಪೂರ್ಣವಾಗಿ ಮಕ್ಕಳ ಸರ್ವಾಂಗೀಣ ಅಭಿವೃದ್ಧಿಗೆ ಉತ್ತಮ ವೇದಿಕೆಯನ್ನು ಕಲ್ಪಿಸಿಕೊಡುತ್ತಿದೆ ಎಂದು ತಿಳಿಸಿದರು.
ಶರಾವತಿ ವಿದ್ಯಾಕೇಂದ್ರದ ಉಪಾಧ್ಯಕ್ಷ ಎಸ್. ಗೋಪಿನಾಥ್, ಕಾರ್ಯದರ್ಶಿ ನಾಗೇಂದ್ರ ಮಹಾಲೆ ಕಾರ್ಯಕ್ರಮದಲ್ಲಿ ಹಾಜರಿದ್ದರು. ಕೃಷ್ಣವೇಷ ಸ್ಪರ್ಧೆಯಲ್ಲಿ ಎಲ್.ಕೆ.ಜಿ. ವಿಭಾಗದಲ್ಲಿ ಇನ್ಶಾ ಫಾತಿಮಾ ಪ್ರಥಮ ಮತ್ತು ಶ್ರದ್ಧಾ ಎಸ್. ದ್ವಿತೀಯ ಸ್ಥಾನ ಪಡೆದರೆ, ಯು.ಕೆ.ಜಿ ವಿಭಾಗದಲ್ಲಿ ಸೃಜನ್ ಪ್ರಥಮ ಮತ್ತು ದ್ರುವ ಸಿ. ದ್ವಿತೀಯ ಸ್ಥಾನ ಪಡೆದರು.
ಶ್ರೀಪಾದ ಭಟ್, ಶೈಲಜಾ ಜಗದೀಶ್, ಸರೋಜಮ್ಮ ತೀರ್ಪುಗಾರರಾಗಿ  ಭಾಗವಹಿಸಿದ್ದರು. ಸ್ಪರ್ಧೆಯಲ್ಲಿ 45 ಮಕ್ಕಳು ಭಾಗವಹಿಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.