ಕ್ಷುಲ್ಲಕ ಕಾರಣ: ಯುವಕನ ಮೇಲೆ ರಾಡಿನಿಂದ ಹಲ್ಲೆ
ಸಾಗರ: ರಸ್ತೆ ಸಂಚಾರಕ್ಕೆ ಅಡ್ಡಲಾಗಿ ನಿಲ್ಲಿಸಿರುವ ವಾಹನ ತೆರವುಗೊಳಿಸುವಂತೆ ನಡೆದ ಮಾತಿನ ಚಕಮಕಿಯಲ್ಲಿ ಯುವಕನೊಬ್ಬನಿಗೆ ರಾಡಿನಿಂದ ತಲೆ ಹೊಡೆದ ಘಟನೆ ಭಾನುವಾರ ನಗರದಲ್ಲಿ ನಡೆದಿದೆ.
ಇಲ್ಲಿನ ನಗರಸಭೆ ವ್ಯಾಪ್ತಿ ಶಿವಪ್ಪ ನಾಯಕ ನಗರದ 4ನೇ ಮುಖ್ಯ ತಿರುವಿನ ರಸ್ತೆಯಲ್ಲಿ ನಿಲ್ಲಿಸಿಕೊಂಡ ಕ್ಯಾಂಟರ್ವೊಂದರಲ್ಲಿ ಮನೆ ಸಾಮಗ್ರಿಗಳನ್ನು ಇಳಿಸುತ್ತಿದ್ದರು. ಈ ಸಮಯಕ್ಕೆ ನಗರಸಭೆ ಸದಸ್ಯ ರಫಿಕ್ ಅವರ ಅಡಕೆ ಮಂಡಿಗೆ ಹೋಗುವ ಕ್ಯಾಂಟರ್ ವಾಹನ ಹೋಗಲು ರಸ್ತೆ ಬಿಟ್ಟುಕೊಡುವಂತೆ ಒತ್ತಾಯಿಸಿದಾಗ ಮಾತಿನ ಚಕಮಕಿ ನಡೆದು ಹಲ್ಲೆಗೆ ತಿರುಗಿದೆ.
ಭಾನುವಾರ ಸುಮಾರು ಮಧ್ಯಾಹ್ನ 1 ಗಂಟೆ ಸಮಯದಲ್ಲಿ ಅಡಕೆ ಮಂಡಿಗೆ ಹೋಗಲು ಬಂದಿರುವ ಕ್ಯಾಟರ್ನ ನೆಹರೂನಗರ ನಿವಾಸಿ ರಫಿಕ್ ಮತ್ತು ಮಂಡಕ್ಕಿ ಭಟ್ಟಿ ನಿವಾಸಿ ರಿಯಾಜ್, ರಾಡ್ ತೆಗೆದುಕೊಂಡು ಮನೆ ಸಾಮಗ್ರಿ ಇಳಿಸುತ್ತಿದ್ದ ಇನ್ನೊಂದು ಕ್ಯಾಂಟರಿನ ಜ್ಯೋವೆಲ್ನ ತಲೆಗೆ ಬಲವಾಗಿ ಹೊಡೆದಿದ್ದಾರೆ.
ರಫಿಕ್ ಮತ್ತು ರಿಯಾಜ್ ಅವರ ಹೊಡೆತದಿಂದ ಜ್ಯೋವೆಲ್ನ ತಲೆಯಿಂದ ರಕ್ತ ಬಂದಿದ್ದು, ತಕ್ಷಣ ರಕ್ಷಣೆಗೆ ಆಗಮಿಸಿದ ಕಿರಣ್ ಎಂಬ ಯುವಕನ ಮೇಲೂ ಹಲ್ಲೆ ಮಾಡಲಾಗಿದೆ. ಘರ್ಷಣೆಯ ಮಾಹಿತಿ ತಿಳಿಯುತ್ತಿದ್ದಂತೆ ಸಾರ್ವಜನಿಕರು ನೆರವಿಗೆ ಧಾವಿಸಿ ಸಾಗರ ಸರ್ಕಾರಿ ಉಪವಿಭಾಗೀಯ ಆಸ್ಪತ್ರೆಗೆ ದಾಖಲಿಸಿದ್ದಾರೆ. ನಂತರ ಹೆಚ್ಚಿನ ಚಿಕಿತ್ಸೆಗಾಗಿ ಜೋವೆಲ್ನನ್ನು ಶಿವಮೊಗ್ಗಕ್ಕೆ ವರ್ಗಾಯಿಸಲಾಯಿತು.
ಇಂತಹ ಘಟನೆಗೆ ನಗರಸಭೆ ಸದಸ್ಯ ರಫಿಕ್ ಅವರೇ ಕಾರಣ ಎಂದು ಕೆಲವರು ಆರೋಪಿಸಿದರು.
ಆರೋಪಿಗಳ ಬಂಧನ: ಘಟನೆ ಸಂಬಂಧ ಪೊಲೀಸರು ಹಲ್ಲೆ ನಡೆಸಿದ ರಫಿಕ್ ಮತ್ತು ರಿಯಾಜ್ ಇಬ್ಬರನ್ನು ಬಂಧಿಸಿ ಕಾನೂನು ಕ್ರಮ ಕೈಗೊಂಡಿದ್ದಾರೆ. ಘಟನಾ ಸ್ಥಳಕ್ಕೆ ಜಿಲ್ಲಾ ರಕ್ಷಣಾಧಿಕಾರಿ ಕೌಶಲೇಂದ್ರಕುಮಾರ್ ಭೇಟಿ ನೀಡಿ, ಆರೋಪಿಗಳನ್ನು ಬಂಧಿಸಿ ತನಿಖೆ ನಡೆಸುವಂತೆ ಸೂಚಿಸಿದ್ದಾರೆ.
ಸೋಲಾರ್ ಬ್ಯಾಟರಿ ಕಳವು
ಶಿವಮೊಗ್ಗ: ಸಾವಿರಾರು ರುಪಾಯಿ ಮೌಲ್ಯದ ಸೋಲಾರ್ ದೀಪದ ಬ್ಯಾಟರಿಗಳನ್ನು ಕಳ್ಳರು ಅಪಹರಿಸಿ ಪರಾರಿಯಾಗಿರುವ ಘಟನೆ ತುಂಗಾ ಮೇಲ್ದಂಡೆ ಯೋಜನೆ ಕಾಲೋನಿ ಮತ್ತು ಕಚೇರಿಯ ಬಳಿ ನಡೆದಿದೆ. ತುಂಗಾ ಮೇಲ್ದಂಡೆ ಯೋಜನೆ ಕಾಲೋನಿ ಮತ್ತು ಕಚೇರಿ ಬಳಿ ಅಳವಡಿಸಿದ್ದ ಸೋಲಾರ್ ದೀಪದ 5 ಪಿ.ಟಿ. ಪ್ರೈಮ್ ಟ್ಯೂಬುಲಾರ್ನ 5 ಬ್ಯಾಟರಿಗಳನ್ನು ಕಳ್ಳರು ಅಪಹರಿಸಿದ್ದಾರೆ. ಇವುಗಳ ಮೌಲ್ಯ ರು. 40,000 ಎಂದು ಅಂದಾಜಿಸಲಾಗಿದೆ. ದೊಡ್ಡಪೇಟೆ ಠಾಣೆ ಪ್ರಕರಣ ದಾಖಲಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

