ಪೊಲೀಸರ ಮಧ್ಯೆಪ್ರವೇಶ: ತಪ್ಪಿದ ಗುಂಪು ಘರ್ಷಣೆ
ಶಿವಮೊಗ್ಗ: ಇಲ್ಲಿನ ವಿನೋಬನಗರ ಲಕ್ಷ್ಮಿ ಚಿತ್ರಮಂದಿರದೊಳಗೆ ಎರಡು ಗುಂಪಿನ ನಡುವೆ ನಡೆದ ಮಾತಿನ ಚಕಮಕಿಯೊಂದು ಕೈಕೈ ಮಿಲಾವಣೆಗೆ ಕಾರಣವಾದ ಪ್ರಸಂಗ ಭಾನುವಾರ ರಾತ್ರಿ ನಡೆದಿದೆ.
ಪೊಲೀಸರ ಸಕಾಲಿಕ ಪ್ರವೇಶ ಮತ್ತು ಪರಿಸ್ಥಿತಿಯನ್ನು ಪೂರ್ಣ ಹತೋಟಿಗೆ ತೆಗೆದುಕೊಂಡ ಪರಿಣಾಮ ನಡೆಯಬಹುದಾಗಿದ್ದ ದೊಡ್ಡ ಘರ್ಷಣೆಯೊಂದು ತಪ್ಪಿತು.
ಆಗಿದ್ದೇನು?: ಚಿತ್ರಮಂದಿರದ ಒಳ ಭಾಗದಲ್ಲಿ ಫಸ್ಟ್ ಶೋ ಚಿತ್ರ ಪ್ರದರ್ಶನ ವೇಳೆ (ಸಂಜೆ 7.30) ನೃತ್ಯ ಮಾಡುವ ವೇಳೆಗೆ ಇತ್ತಂಡಗಳ ನಡುವೆ ಮಾತಿನ ಚಕಮಕಿ ನಡೆದಿದೆ. ಚಿತ್ರದ ಮಧ್ಯಂತರ ವೇಳೆ ಮಾತಿನ ಚಕಮಕಿ ಕೈಕೈ ಮಿಲಾವಣೆಗೂ ದಾರಿ ಮಾಡಿಕೊಟ್ಟಿದ್ದು, ಒಂದು ಗುಂಪು ಮತ್ತೊಂದು ಗುಂಪಿನ ಮೇಲೆ ಮುಗಿಬಿದ್ದಿದೆ.
ಈ ವಿಷಯ ಹರಡಿದ್ದು, ನಗರದ ವಿವಿಧ ಬಡಾವಣೆಗಳಿಂದ ಯುವಕರ ಗುಂಪು ಚಿತ್ರಮಂದಿರದ ಹೊರ ಆವರಣದಲ್ಲಿ ರಾತ್ರಿ 8ರ ಸುಮಾರಿಗೆ ಹೊಡೆದಾಟಕ್ಕಾಗಿ ಕಾಯ್ದಿದೆ. ಈ ಬಗ್ಗೆ ಮಾಹಿತಿ ಪಡೆದ ಪೊಲೀಸರು ಅಲ್ಲಿಗೆ ಜಮಾವಣೆಗೊಂಡು ಪರಿಸ್ಥಿತಿಗೆ ಕೈಮೀರದಂತೆ ತಡೆದರು. ಸುತ್ತಮುತ್ತಲಿನ ಅಂಗಡಿ- ಮುಗ್ಗಟ್ಟು ಮುಚ್ಚಿಸಿ ಅಲ್ಲಿ ಸೇರಿದ್ದವರನ್ನೂ ಚದುರಿಸಿದ್ದಾರೆ. 10 ಗಂಟೆ ವೇಳೆಗೆ ಪರಿಸ್ಥಿತಿ ಸಂಪೂರ್ಣ ಹದ್ದುಬಸ್ತಿಗೆ ಬಂದಿತು. ಎಸ್‌ಪಿ ಕೌಶಲೇಂದ್ರ ಕುಮಾರ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಡಿವೈಎಸ್ಪಿ ಶಿವಕುಮಾರ್, ಸರ್ಕಲ್ ಇನ್ಸ್‌ಪೆಕ್ಟರ್, ಸಿಪಿಐ ಸೇರಿದಂತೆ ಪೊಲೀಸರ ತಂಡ ಅಲ್ಲಿ ಹಾಜರಿದ್ದು ಪರಿಸ್ಥಿತಿ ತಹಬದಿಗೆ ತಂದಿತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

