ಶಿವಮೊಗ್ಗ

ನೌಕರರ ಸಂಘ ಅಸ್ತಿತ್ವಕ್ಕೆ

Published On :

ಶಿವಮೊಗ್ಗ: ಜಿಲ್ಲೆಯಲ್ಲಿರುವ ಅನುದಾನಿತ ಶಿಕ್ಷಣ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸುತ್ತಿರುವ ಎಲ್ಲಾ ಸ್ತರದ ನೌಕರರ ಕ್ಷೇಮಾಭಿವೃದ್ಧಿ ಮತ್ತು ಆಯಾ ಶಿಕ್ಷಣ ಸಂಸ್ಥೆಗಳಿಗೆ ಸರ್ಕಾರದಿಂದ ಸಿಗಬಹುದಾದ ಸವಲತ್ತುಗಳನ್ನು ದೊರಕಿಸಿಕೊಡುವ ಹಿನ್ನೆಲೆಯಲ್ಲಿ ಕಾರ್ಯೋನ್ಮುಖವಾಗಲು ನೂತನವಾಗಿ ಜಿಲ್ಲಾ ಅನುದಾನಿತ ಶಿಕ್ಷಣ ಸಂಸ್ಥೆಗಳ ನೌಕರರ ಸಂಘ ಅಸ್ತಿತ್ವಕ್ಕೆ ಬಂದಿದೆ.
ವಿವಿಧ ಕ್ಷೇತ್ರಗಳಲ್ಲಿ ಅನುಭವ ಹೊಂದಿರುವವರು ಮತ್ತು ಜಿಲ್ಲೆಯ ಕೆಲವು ಆಡಳಿತ ಮಂಡಳಿಯ ಪ್ರಮುಖರು, ಶಿಕ್ಷಣ ಇಲಾಖೆಯ ಉನ್ನತಾಧಿಕಾರಿಗಳು, ನೀಡಿದ ಅಮೂಲ್ಯ ಸಲಹೆ ಮೇರೆಗೆ ಈ ಸಂಘ ಅಸ್ತಿತ್ವಕ್ಕೆ ಬಂದಿದ್ದು, ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಗಿದೆ.
ನೂತನ ಸಂಘದ ಸಂಸ್ಥಾಪಕ ಗೌರವಾಧ್ಯಕ್ಷರಾಗಿ ಡಾ. ಬಾಲಕೃಷ್ಣ ಹೆಗಡೆ, ಅಧ್ಯಕ್ಷರಾಗಿ ಡಾ. ಕೆ.ಎಚ್. ಕುಮಾರಸ್ವಾಮಿ, ಪ್ರಧಾನ ಕಾರ್ಯದರ್ಶಿ ಎಂ.ಎಲ್. ಶಿವಕುಮಾರ, ಜಿಲ್ಲಾ ಸಂಚಾಲಕ ಅಮೀರ್ ಜಾನ್, ಖಜಾಂಚಿ ಎಸ್. ಯೋಗೀಶ್, ಸಹಕಾರ್ಯದರ್ಶಿ ಜೆ. ಮಂಜಾನಾಯ್ಕ್ ಆಯ್ಕೆಯಾಗಿದ್ದಾರೆ.
ಉಪಾಧ್ಯಕ್ಷರಾಗಿ ಟಿ.ಬಿ. ಮಂಜುನಾಥ್ ಸ್ವಾಮಿ, ಕೆ.ಎಂ. ರವಿ, ಕೆ.ಎಸ್. ಭೋಜರಾಜ್,ಎಂ.ಎನ್. ಮಧುಕುಮಾರ್, ಡಾ. ಪ್ರಕಾಶ್ ಕುಪ್ಪಸ್ವಾಮಿ, ಎಲ್.ಡಿ. ದಯಾನಂದ್ ನಾಯ್ಕ್, ಸಂಘಟನಾ ಕಾರ್ಯದರ್ಶಿ ಎಚ್. ಶಿವನಗೌಡ, ಕೆ.ಮಂಜಪ್ಪ, ಎಚ್.ಎಂ. ಶಶೀಧರ, ಸಿ.ಕೆ. ಯೋಗೇಶ್ವರಾಚಾರ್, ಎಂ.ಹಾಲಸ್ವಾಮಿ, ಇಜಾಜ್ ಅಹ್ಮದ್ ಹಾಗೂ ನಿರ್ದೇಶಕರಾಗಿ ಬಿ. ನಂದ, ಎಂ. ಹೇಮ್ಲಾನಾಯ್ಕ್, ರಿಯಾಜ್ ಅಹ್ಮದ್, ಬಿ. ಪಾಲಾಕ್ಷಪ್ಪ, ಎಂ. ಮೃತ್ಯುಂಜಯ, ಕೆ.ಬಿ. ಮಹಾಬಲೇಶ್ವರ್, ಎಸ್. ಸರೋಜಮ್ಮ, ಎನ್. ಸುಜಾತ, ಬಿ. ಸತೀಶ್, ಶಿವ್ಯಾನಾಯ್ಕ್, ಆರ್. ತಿಪ್ಪೇಶಿ, ಗಜೇಂದ್ರಕುಮಾರ್, ಧನಪಾಲ್ ರಾಥೋಡ್, ಡಿ.ವಿ. ವಾಗೀಶ್,  ಶಿವಕುಮಾರ್ ನೇಮಕವಾಗಿದ್ದಾರೆ.
ಪತ್ರಿಕಾ ಕಾರ್ಯದರ್ಶಿಯಾಗಿ ಬಿ. ದಾನಪ್ಪ ನಿಯುಕ್ತರಾಗಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.