ಯುಪಿಎ ನಿರ್ನಾಮವೇ ನಮೋ ಬ್ರಿಗೇಡ್ ಧ್ಯೇಯ
ಸಾಗರ: ಕೇಂದ್ರದ ಕಾಂಗ್ರೆಸ್ ನೇತೃತ್ವದ ಯು.ಪಿ.ಎ. ಸರ್ಕಾರದ ಮೂಲೋಚ್ಛಾಟನೆಯೇ ನಮೋ ಬ್ರಿಗೇಡ್ನ ಪ್ರಮುಖ ಆಶಯವಾಗಿದೆ ಎಂದು ಅಂಕಣಕಾರ ಚಕ್ರವರ್ತಿ ಸೂಲಿಬೆಲೆ ಹೇಳಿದರು.
ದೇಶವನ್ನು ನಮೋ ಬ್ರಿಗೇಡ್ ತಾಲೂಕು ಘಟಕವನ್ನು ಉದ್ಘಾಟಿಸಿ ಮಾತನಾಡಿ, ಈಗಿನ ಕೇಂದ್ರ ಸರ್ಕಾರ ದೇಶವನ್ನು ಅತ್ಯಂತ ದುಸ್ಥಿತಿಗೆ ತಂದು ನಿಲ್ಲಿಸಿ ಬೇರೆ ದೇಶಗಳ ಎದುರು ಭಾರತವನ್ನು ತಲೆತಗ್ಗಿಸುವಂತೆ ಮಾಡಿದೆ ಎಂದು ಅಭಿಪ್ರಾಯಪಟ್ಟರು.
ಅಸಮರ್ಥ ಪ್ರಧಾನಿ: ದೇಶವಾಸಿಗಳನ್ನು ದೀನ ಸ್ಥಿತಿಗೆ ಕೊಂಡೊಯ್ಯುವ ಕೆಲಸ ಮಾಡಿರುವ ಪ್ರಧಾನಿ ಡಾ. ಮನಮೋಹನ್ ಸಿಂಗ್ ಪಾಕಿಸ್ತಾನ, ಚೀನಾ ದೇಶದವರು ಗಡಿಯೊಳಗೆ ಬರುತ್ತಿದ್ದರೂ ಕೈಲಾಗದವರಂತೆ ಶಾಂತಿಯ ಮಾತು ಆಡುತ್ತಿದ್ದಾರೆ. ಇಂಥವರಿಂದ ಸ್ವಾಭಿಮಾನಿ ಭಾರತ ನಿರ್ಮಾಣ ಸಾಧ್ಯವಿಲ್ಲ. ನರೇಂದ್ರ ಮೋದಿ ಭಾರತದ ಆಶಾಕಿರಣವಾಗಿದ್ದು, ಅವರನ್ನು ಪ್ರಧಾನಿಯಾಗಿಸುವ ಮೂಲಕ ದೇಶದ ಸಂಕಷ್ಟವನ್ನು ಹೋಗಲಾಡಿಸುವ ನಿಟ್ಟಿನಲ್ಲಿ ಎಲ್ಲರೂ ಒಂದಾಗಬೇಕು ಎಂದು ಕರೆ ನೀಡಿದರು.
ಕಾಂಗ್ರೆಸ್ಸಿನ ದಬ್ಬಾಳಿಕೆ: ಹಳ್ಳಿಹಳ್ಳಿಯಲ್ಲೂ ಲಕ್ಷಾಂತರ ಜನ ನಮೋ ಬ್ರಿಗೇಡ್ ಜೊತೆ ಹೆಜ್ಜೆ ಹಾಕುತ್ತಿದ್ದಾರೆ. ದೇಶದಲ್ಲಿ ಕಲ್ಲಿದ್ದಲು, 2ಜಿ ಸ್ಪ್ರೆಕ್ಟ್ರಂನಂತಹ ನೂರಾರು ಹಗರಣ ನಡೆದಿದೆ. ಭ್ರಷ್ಟಾಚಾರದ ವಿರುದ್ಧ ಜನ ಲೋಕಪಾಲ್ ಮಸೂದೆಗಾಗಿ ಹೋರಾಟ ನಡೆಸುತ್ತಿದ್ದ ಅಣ್ಣಾ ಹಜಾರೆ ಅವರ ಹೋರಾಟವನ್ನು ವ್ಯವಸ್ಥಿತವಾಗಿ ಮಟ್ಟ ಹಾಕಲಾಗಿದೆ. ವಿದೇಶಿದಲ್ಲಿರುವ ಭಾರತದ ಕಪ್ಪುಹಣವನ್ನು ಸ್ವದೇಶಕ್ಕೆ ತರಬೇಕು ಎಂದು ಹೋರಾಟ ನಡೆಸುತ್ತಿದ್ದ ಬಾಬಾ ರಾಮದೇವ್ ಅವರನ್ನು ಬಂಧಿಸುವ ಕೆಲಸ ನಡೆದಿದೆ. ಇನ್ನೂ ಎಷ್ಟು ದಿನ ಕಾಂಗ್ರೆಸ್ಸಿನ ಈ ದಬ್ಬಾಳಿಕೆ ಸಹಿಸಿಕೊಂಡು ಇರಲು ಸಾಧ್ಯ ಎಂದು ಪ್ರಶ್ನಿಸಿದರು.
ದೇಶದ ಯುವಜನರು ಸ್ವಯಂಪ್ರೇರಿತವಾಗಿ ಮೋದಿ ಅವರ ಬೆಂಬಲಕ್ಕೆ ನಿಂತಿದ್ದಾರೆ. ಮೋದಿಯವರನ್ನು ಪ್ರಧಾನಿ ಸ್ಥಾನದಲ್ಲಿ ಕಾಣಬೇಕು ಎನ್ನುವ ಸ್ವಾಭಿಮಾನಿ ಯುವಜನರ ಕನಸು ಸಾಕಾರಗೊಳಿಸುವ ನಿಟ್ಟಿನಲ್ಲಿ ನಮೋ ಬ್ರಿಗೇಡ್ ಅಹರ್ನಿಶಿ ದುಡಿಯುತ್ತಿದೆ. ಗ್ರಾಮಾಂತರ ಪ್ರದೇಶದಲ್ಲೂ ಜನರು ಜಾಗೃತರಾಗಿ, ಮೋದಿ ಮೋಡಿಗೆ ಒಳಗಾಗಿದ್ದಾರೆ ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ನಮೋ ಬ್ರಿಗೇಡ್ ತಾಲೂಕು ಘಟಕದ ಸಂಚಾಲಕ ಕೆ.ಎಲ್. ಭೋಜರಾಜ್, ಪಕ್ಷಾತೀತ ಹಾಗೂ ಜಾತ್ಯಾತೀತವಾಗಿ ನಮೋ ಬ್ರಿಗೇಡ್ ಕಾರ್ಯನಿರ್ವಹಿಸುತ್ತಿದೆ. ಈಗಾಗಲೆ 14 ಕೋಟಿ ಹೊಸ ಮತದಾರರು ಸೇರ್ಪಡೆಗೊಂಡಿದ್ದು, ಎಲ್ಲರೂ ಮೋದಿ ಬೆಂಬಲಕ್ಕೆ ನಿಂತಿದ್ದಾರೆ. ಕೇಂದ್ರದಲ್ಲಿ 9 ವರ್ಷಗಳ ಕಾಲ ಆಡಳಿತ ನಡೆಸಿದ ಕಾಂಗ್ರೆಸ್ ಸರ್ಕಾರದ ಹಗರಣ ಎಲ್ಲೆ ಮೀರಿದ್ದು, ಮೋದಿ ಪ್ರಧಾನಿಯಾದರೆ ಈ ಹಗರಣಗಳನ್ನು ನಡೆಸಿದವರು ಶಿಕ್ಷೆಯಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಹೇಳಿದರು.
ನಿತ್ಯಾನಂದ ವಿವೇಕ ವಂಶಿ, ರಾಜೇಂದ್ರ ಪೈ ಹಾಜರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

