ನೈಸರ್ಗಿಕ ಛಾಯಾಚಿತ್ರಕ್ಕೆ ಆದ್ಯತೆ ನೀಡಿ
ಶಿವಮೊಗ್ಗ: ಛಾಯಾಗ್ರಾಹಕರು ಲೇಖನಿ ಇಲ್ಲದ ಸಾಹಿತಿಗಳಿದ್ದಂತೆ. ತಮ್ಮ ಕಲೆಯಿಂದ ಒಂದು ನಿರ್ಜೀವ ವಸ್ತುವನ್ನು ಆಕರ್ಷಣೆಯ ಕೇಂದ್ರವನ್ನಾಗಿಸುವ ಸಾಮರ್ಥ್ಯ ಹೊಂದಿರುತ್ತಾರೆ ಎಂದು ಶಾಯರಿ ಕವಿ ಪ್ರೊ. ಇಟಗಿ ಈರಣ್ಣ ಅಭಿಪ್ರಾಯಪಟ್ಟರು.
ಛಾಯಾಚೇತನ ಹವ್ಯಾಸಿ ಛಾಯಾಗ್ರಾಹಕರ ಬಳಗ ಶನಿವಾರ ಕಸ್ತೂರಬಾ ಕಾಲೇಜು ಸಭಾಂಗಣದಲ್ಲಿ ಆಯೋಜಿಸಿದ್ದ 4ನೇ ರಾಜ್ಯಮಟ್ಟದ ಸ್ಪರ್ಧೆಯಲ್ಲಿ ಅವರು, ಛಾಯಾಚಿತ್ರ ತೆಗೆಯುವುದು ನಿಜಕ್ಕೂ ಒಂದು ಕಲೆ. ಅದು ಎಲ್ಲರಿಗೂ ಲಭಿಸುವುದಿಲ್ಲ ಎಂದರು.
ಅರಿವು ಮೂಡಿಸಿ: ಛಾಯಾಗ್ರಾಹಕರು ವನ್ಯಜೀವಿಗಳ ಜೀವನ ಕುರಿತು ಫೋಟೋಗಳನ್ನು ತೆಗೆದು ಸಾರ್ವಜನಿಕರಲ್ಲಿ ಅರಿವು ಮೂಡಿಸಬೇಕು. ಛಾಯಾಚಿತ್ರಗಾರ ನೈಸರ್ಗಿಕ ಚಿತ್ರಗಳಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡಬೇಕು ಎಂದ ಅವರು, ದೇಶದ ಹಲವಾರು ಅರಣ್ಯ ಪ್ರದೇಶಗಳಲ್ಲಿರುವ ವಿವಿಧ ಪ್ರಾಣಿ ಮತ್ತು ಪಕ್ಷಿಸಂಕುಲಗಳ ಜೀವನ ಚರಿತ್ರೆ ಸೆರೆಹಿಡಿಯಲು ಛಾಯಾಗ್ರಾಹರಿಂದ ಮಾತ್ರ ಸಾಧ್ಯ. ಆದ್ದರಿಂದ ಇಂತಹ ಕಾರ್ಯಕ್ರಮ ಹೆಚ್ಚಾಗಿ ನಡೆಯಬೇಕು. ಇದು ಛಾಯಾಗ್ರಾಹಕರಿಗೆ ಪ್ರೋತ್ಸಾಹ ನೀಡಿದಂತಾಗುತ್ತದೆ ಎಂದರು.
ಕೂಡಲ ಸಂಗಮ ಧರ್ಮಕ್ಷೇತ್ರದ ಶ್ರೀ ಬಸವಜಯ ಮೃತ್ಯುಂಜಯ ಸ್ವಾಮೀಜಿ ಮಾತನಾಡಿದರು.
ಸಾಧಕರಿಗೆ ಸನ್ಮಾನ: ಇದೇ ಸಂದರ್ಭದಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ಸಾಗರದ ಛಾಯಾಗ್ರಾಹಕ ವಿ.ಜಿ. ಲಕ್ಷ್ಮೀನಾರಾಯಣ, ಶಾಯರಿ ಕವಿ ಪ್ರೊ. ಇಟಗಿ ಈರಣ್ಣ, ಹಾರ್ನಹಳ್ಳಿಯ ಕುಸ್ತಿಪಟು ಎಂ.ಮಂಜಪ್ಪ, ಮಾಧಮನೆಲೆಯ ದಿ. ಮೈಲಾರಿಯವರ ಪತ್ನಿ ಎ. ರಾಜೇಶ್ವರಿ, ಬಳ್ಳಾರಿಯ ರಾಣಿ ಚೆನ್ನಮ್ಮ ಪ್ರಶಸ್ತಿ ಪುರಸ್ಕೃತೆ ಅಶ್ವಿನಿ ಅಂಗಡಿ ಅವರನ್ನು ಸನ್ಮಾನಿಸಯಿತು.
ಕಾರ್ಯಕ್ರಮದಲ್ಲಿ ಛಾಯಾಚೇತನ ಬಳಗದ ಕಾರ್ಯಾಧ್ಯಕ್ಷ ಕೆ.ಎಸ್.ಮಲ್ಲಿಕಾರ್ಜುನ, ಕಾಲೇಜು ಪ್ರಾಂಶುಪಾಲ ಎನ್. ಕುಮಾರಸ್ವಾಮಿ, ಗೌರವಾಧ್ಯಕ್ಷ ಸಿ.ಎಸ್. ದತ್ತಾತ್ರಿ ಮತ್ತಿತರರು ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

