15ರಿಂದ ಬೆಳ್ಳಿಮಂಡಲ ಚಲನಚಿತ್ರೋತ್ಸವ
ಶಿವಮೊಗ್ಗ:ಶಿವಮೊಗ್ಗ ಬೆಳ್ಳಿಮಂಡಲದ ಡಿಸೆಂಬರ್ ತಿಂಗಳ ಚಲನಚಿತ್ರೋತ್ಸವ ಇದೇ 15 ಮತ್ತು 16ರಂದು ನಗರದ ಕರ್ನಾಟಕ ಸಂಘ ಭವನದಲ್ಲಿ ನಡೆಯಲಿದೆ.
ಡಿ. 15ರಂದು ಮಧ್ಯಾಹ್ನ 3.30ಕ್ಕೆ ಉತ್ಸಾಹೀ ಯುವಕರ ಹೊಸನತನದ ಪ್ರಯತ್ನದ ಗೊಂಬೆಗಳ ಲವ್ (ಭಾರತ ಕನ್ನಡ 2013 ಸಂತೋಷ್ 90 ನಿಮಿಷ) ಚಿತ್ರ ಪ್ರದರ್ಶನವಿದೆ. ನಂತರ ಸಂಜೆ 6ಕ್ಕೆ ದಕ್ಷಿಣ ಆಫ್ರಿಕಾದ ಅತ್ಯಂತ ಮನೋಜ್ಞ ಚಿತ್ರ ಯಸ್ಟರ್ ಡೇ (ದಕ್ಷಿಣ ಆಫ್ರಿಕಾ/ಇಂಗ್ಲೀಷ್/ 2004/ ಡೆಲ್ಲರ್ ರೂಟ್ / 96 ನಿಮಿಷ) ಚಿತ್ರ ಪ್ರದರ್ಶನ ನಡೆಯಲಿದೆ. ಈ ಚಿತ್ರ ಕುರಿತು ಡಾ. ನಾಗಭೂಷಣ್ ವಿಶ್ಲೇಷಣೆ ನಡೆಸಲಿದ್ದಾರೆ.
ಡಿ. 16ರ ಸೋಮವಾರ ಸಂಜೆ 6ಕ್ಕೆ ಶಾಮ್ ಬೆನಗಲ್ ಅವರ ಹಾಸ್ಯ-ವಿಡಂಬನೆಯ ಚಿತ್ರ ವೆಲ್ಕಂ ಟು ಸಜ್ಜನ್ ಪುರ್ ಭಾರತ/ ಹಿಂದಿ/ 2007/ ಶಾಮ್ ಬೆನೆಗಲ್ / 103 ನಿಮಿಷ) ಚಿತ್ರ ಪ್ರದರ್ಶನವಿದ್ದು, ಚಿತ್ರವನ್ನು ಕುರಿತು ವೈದ್ಯ ವಿಶ್ಲೇಷಿಸಲಿದ್ದಾರೆ.
ಈ ಮೂರೂ ದಿನಗಳು ವೇದಿಕೆಯ ಕಾರ್ಯಕ್ರಮ ಇಲ್ಲದಿರುವುದರಿಂದ ಸಮಯಕ್ಕೆ ಸರಿಯಾಗಿ ಚಿತ್ರ ಪ್ರದರ್ಶನ ಆರಂಭಗೊಳ್ಳಲಿದೆ. ಪೋಷಕ ಸದಸ್ಯರಲ್ಲದವರಿಗೆ ಪ್ರತೀ ಚಿತ್ರ ಪ್ರದರ್ಶನಕ್ಕೆ ರು. 20 ಪ್ರವೇಶ ದರವಿದ್ದು, ಚಲನಚಿತ್ರ ಅಭಿಮಾನಿಗಳು, ಶಿವಮೊಗ್ಗ ಬೆಳ್ಳಿಮಂಡಲದ ಪೋಷಕ ಸದಸ್ಯರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ಸಂಚಾಲಕ ವೈದ್ಯ ಕೋರಿದ್ದಾರೆ.
ಕೃಷಿ ಬಗ್ಗೆ ಅಸಡ್ಡೆ ಬೇಡ
ಹೊಸನಗರ: ದೇಶದ ಭವಿಷ್ಯವೇ ಕೃಷಿ ಮೇಲೆ ಅವಲಂಬಿತವಾಗಿದ್ದು, ಕೃಷಿ ಬಗ್ಗೆ ಯಾವುದೇ ಕಾರಣಕ್ಕೂ ಅಸಡ್ಡೆ ತೋರಬೇಡಿ ಎಂದು ಜಿಪಂ ಸದಸ್ಯೆ ಶುಭಾ ಕೃಷ್ಣಮೂರ್ತಿ ಹೇಳಿದರು.
ತಾಲೂಕಿನ ಕರಿಮನೆ ಗ್ರಾಪಂ ವ್ಯಾಪ್ತಿಯ ಚಂಡಿಕೇಶ್ವರಿ ಸಭಾಭವನದಲ್ಲಿ ತೋಟಗಾರಿಕಾ ಇಲಾಖೆ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಹಮ್ಮಿಕೊಂಡಿದ್ದ ಕೃಷಿ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ, ಇಂದಿನ ಯುವಕರು ಕೃಷಿಯಿಂದ ವಿಮುಖರಾಗುತ್ತಿರುವ ಬಗ್ಗೆ ವಿಷಾದ ವ್ಯಕ್ತಪಡಿಸಿದರು. ನೆಮ್ಮದಿ ಬದುಕು ಸಾಗಿಸಲು ಕೃಷಿ ಸಹಕಾರಿ ಜೊತೆಗೆ ಸರ್ಕಾರ ಕೂಡ ಕೃಷಿ ನಿರತ ರೈತರಿಗೆ ಹೆಚ್ಚಿನ ಒತ್ತು ನೀಡುವ ಅಗತ್ಯವಿದೆ ಎಂದರು.
ಕರಿಮನೆ ಗ್ರಾಪಂ ಅಧ್ಯಕ್ಷೆ ಭಾಗ್ಯಮ್ಮ ಅಧ್ಯಕ್ಷತೆ ವಹಿಸಿದ್ದರು. ಕೃಷಿ ಅಧಿಕಾರಿ ನಾಗರಾಜ ಪ್ರಾಸ್ತಾವಿಕ ಮಾತನಾಡಿದರು. ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಜಿಲ್ಲಾ ನಿರ್ದೇಶಕ ಸುಧೀರಕುಮಾರ್ ಬಂಟ್ವಾಳ್, ತಾಪಂ ಸದಸ್ಯೆ ಸುಮಾಸುಬ್ರಹ್ಮಣ್ಯ, ಮಂಜುನಾಥಗೌಡ, ತಾ. ಬಿಜೆಪಿ ಅಧ್ಯಕ್ಷ ಕೆ.ವಿ. ಕೃಷ್ಣಮೂರ್ತಿ, ತೋಟಗಾರಿಕೆ ಇಲಾಖೆ ಸಹಾಯಕ ನಿರ್ದೇಶಕ ಪುಟ್ಟನಾಯಕ, ವಲಯ ಒಕ್ಕೂಟದ ಅಧ್ಯಕ್ಷ ಮಹೇಶ್ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

