ಶಿವಮೊಗ್ಗ

ಡಾ. ಪ್ರಪುಲ್ಲಚಂದ್ರರ ನಿಧನಕ್ಕೆ ಸಂತಾಪ

Published On :

ಶಿವಮೊಗ್ಗ: ಕೃಷಿ ಕ್ಷೇತ್ರದಲ್ಲಿ ಹೊಸಹೊಸ ಆವಿಷ್ಕಾರಗಳನ್ನು ಮಾಡಿ ಆಹಾರ ಉತ್ಪಾದನೆ ಹೆಚ್ಚಳಕ್ಕೆ ಕೊಡುಗೆ ನೀಡಿರುವ ಡಾ. ದೇವಂಗಿ ಪ್ರಫುಲ್ಲಚಂದ್ರ ಅವರದ್ದು ಫುಕುವೋಕ ಅವರ ಎತ್ತರಕ್ಕೆ ನಿಲ್ಲಬಹುದಾದ ಸಾಧನೆ ಎಂದು ವಿಧಾನಪರಿಷತ್ ಸಭಾಪತಿ ಡಿ.ಎಚ್. ಶಂಕರಮೂರ್ತಿ ಸ್ಮರಿಸಿದ್ದಾರೆ. ಇವರ ಕೃಷಿ ಕ್ಷೇತ್ರವಾದ ಹೊಸಹಳ್ಳಿಯ ಕೃಷಿ ಸಂಪದ ಕೃಷಿ ಕಾಶಿಯಾಗಿದೆ. ಕೃಷಿ ವಿಜ್ಞಾನಿಗಳು ಮಾಡಬಹುದಾದ ಕಾರ್ಯವನ್ನು ಸ್ವಾನುಭವದಿಂದಲೇ ಮಾಡಿದ್ದಾರೆ. ಇಂತವರನ್ನು ಕಳೆದುಕೊಂಡ ಕನ್ನಡ ನಾಡು ಬರಡಾಗಿದೆ ಎಂದು ಸಂತಾಪ ಸೂಚಿಸಿದ್ದಾರೆ. ಕೃಷಿ ಪಂಡಿತ ಪ್ರಶಸ್ತಿ ಪುರಸ್ಕೃತ ದುಮ್ಮಳ್ಳಿ ರಘು, ಕೃಷಿಯಲ್ಲಿ ಹತ್ತು ಹಲವು ಸಾಧನೆ ಮಾಡಿ, ಯುವ ರೈತರಿಗೆ ಮಾರ್ಗದರ್ಶಕರಾಗಿದ್ದ ಪ್ರಗತಿಪರ ರೈತ ಡಾ. ದೇವಂಗಿ ಪ್ರಫುಲ್ಲ ಚಂದ್ರ ಅವರ ನಿಧನಕ್ಕೆ ತೀವ್ರ ಸಂತಾಪ ಸೂಚಿಸಿದ್ದಾರೆ. ಕೃಷಿ ಎಂದರೆ ಹಿಂಜರಿಯುವವರ ಮಧ್ಯೆ ಕೃಷಿಯಲ್ಲೇ ಮಹಾನ್ ಸಾಧನೆ ಮಾಡಿದವರು, ಅವರ ಕೃಷಿ ಪ್ರಯೋಗಗಳು ಶಾಶ್ವತವಾಗಿರಲಿದೆ ಎಂದವರು ಹೇಳಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.