ಶಿವಮೊಗ್ಗ

ಪ್ರೇಮಿಗಳ ದೋಚುತ್ತಿದ್ದ ನಕಲಿ ಪೊಲೀಸನ ಸೆರೆ

Published On :

ಶಿವಮೊಗ್ಗ: ಹಾದಿತಪ್ಪಿದ ಯುವಕ-ಯುವತಿಯರನ್ನು ಬೆದರಿಸಿ ದೋಚುತ್ತಿದ್ದ ನಕಲಿ ಪೊಲೀಸನನ್ನು ಅಸಲಿ ಪೊಲೀಸರು ಬಲೆಗೆ ಕೆಡವಿದ್ದಾರೆ.
ಶಿವಮೊಗ್ಗ ಗಾಡಿಕೊಪ್ಪ ವಾಸಿ ತರುಣ್(29) ಬಂಧಿತ ಆರೋಪಿಯಾಗಿದ್ದು, ತೀವ್ರ ವಿಚಾರಣೆಗೊಳಪಡಿಸಿದ್ದಾರೆ.
ಬೊಮ್ಮನಕಟ್ಟೆ  ಕೆರೆ ವ್ಯಾಪ್ತಿ ಸೇರಿದಂತೆ ನಗರದ ವಿವಿಧ ನಿರ್ಜನ ಪ್ರದೇಶಗಳಲ್ಲಿ ಜೋಡಿಯಾಗಿ ತಿರುಗಾಡುವ ಹುಡುಗ ಹುಡುಗಿರು ಹಾಗೂ ಅನೈತಿಕ ಚಟುವಟಿಕೆಯಲ್ಲಿ ತೊಡಗಿರುವವರೇ ಇವನ ಗುರಿಯಾಗಿರುತ್ತಿದ್ದರು.
ಹಣ, ಆಭರಣ ವಸೂಲಿ: ಹುಡುಗ- ಹುಡುಗಿಯರು ಅದರಲ್ಲೂ ಕಾಲೇಜು ವಿದ್ಯಾರ್ಥಿಗಳು ಜೋಡಿಯಲ್ಲಿ ನಿರ್ಜನ ಪ್ರದೇಶಕ್ಕೆ ಹೋಗುವುದನ್ನೇ ಹೊಂಚು ಹಾಕುತ್ತಿದ್ದ ಈ ನಕಲಿ ಪೊಲೀಸ್, ನೇರವಾಗಿ ಅವರ ಮುಂದೆ ಬಂದು ನಿಲ್ಲುತ್ತಿದ್ದ.
ಸ್ಟೇಷನ್ಗೆ ಬನ್ನಿ ಎಂದು ಗದರುವ ಮೂಲಕ ಹಾದಿ ತಪ್ಪಿದ ಯುವಕ ಯುವತಿಯರನ್ನು ಹೆದರಿಸುತ್ತಿದ್ದ. ಎರಡನೇ ಹಂತದಲ್ಲಿ ನೀವು ಠಾಣೆಗೆ ಬನ್ನಿ ಪೋಷಕರನ್ನು ಕರೆಸಬೇಕು ಎಂದು ಹೇಳುತ್ತಿದ್ದಂತೆ ಸಹಜವಾಗಿ ಜೋಡಿಯಲ್ಲಿ ಬಂದ ಯುವಕ ಯುವತಿಯರು ಈತನ ಮುಂದೆ ಮಂಡಿಯೂರುತ್ತಿದ್ದರು. ಕೈಯಲ್ಲಿದ್ದ ದುಡ್ಡು, ಮೈಮೇಲಿನ ಚಿನ್ನಾಭರಣ ಬಿಚ್ಚಿಕೊಡುತ್ತಿದ್ದರು.
 ಇದನ್ನೇ ದಂಧೆಯಾಗಿ ಮಾಡಿಕೊಂಡಿದ್ದ ಈತನ ವಿರುದ್ಧ ಯಾರೂ ದೂರು ಕೊಡಲು ಮುಂದೆ ಬರುತ್ತಿರಲಿಲ್ಲ. ಹೀಗಾಗಿ ಇಂತಹದ್ದೊಂದು ದಂಧೆ ನಡೆಯುತ್ತಿದೆ ಎಂಬುದೇ ಗೊತ್ತಾಗಿರಲಿಲ್ಲ. ಪೊಲೀಸರಿಗೆ ಸದ್ಯ ಸಿಕ್ಕಿರುವ ಮಾಹಿತಿಯಂತೆ ಆತ 11 ಪ್ರಕರಣದಲ್ಲಿ ಲೂಟಿ ಮಾಡಿದ್ದಾನೆ.
ಮಹಿಳೆ ದೂರು: ಇತ್ತೀಚೆಗೆ ಮಹಿಳೆಯೊಬ್ಬರನ್ನು ಬೆದರಿಸಿ ಹಣ ವಸೂಲಿಗೆ ಮುಂದಾದಾಗ ಆಕೆ ವಿನೋಬ ನಗರ ಪೊಲೀಸರಿಗೆ ದೂರು ನೀಡಿದ್ದರು. ದೂರು ಆದರಿಸಿ ಆರೋಪಿಯ ಪತ್ತೆಗೆ ಕ್ರಮವಹಿಸಿದರಾದರೂ ಯಾವುದೇ ಪ್ರಯೋಜಕ್ಕೆ ಬಾರದಾಯಿತು. ಅಂತಿಮವಾಗಿ ಆರೋಪಿ ಸಿಕ್ಕಿಲ್ಲ ಎಂದು ಸಿ ರಿಪೋರ್ಟ್ ಹಾಕುವ ಸಂದರ್ಭದಲ್ಲಿ ಆತ ಮತ್ತೆ ಕಾಣಿಸಿಕೊಂಡಿದ್ದಾರೆ.
ಶೋರೂಂ ಒಂದರಲ್ಲಿ ತನ್ನ ಗೆಳೆಯನೊಂದಿಗೆ ದೂರುಕೊಟ್ಟಾಕೆಯ ಕಣ್ಣಿಗೆ ಕಾಣಿಸಿಕೊಂಡಿದ್ದಾನೆ. ಆಕೆ, ಕೂಡಲೇ ಪೊಲೀಸರಿಗೆ ಸುದ್ದಿ ಮುಟ್ಟಿಸಿದ್ದಾರೆ.  
ಪೊಲೀಸರು ಸಂಬಂಧಪಟ್ಟ ಸ್ಥಳಕ್ಕೆ ಆಗಮಿಸಿ ಅಲ್ಲಿನ ಸಿಸಿ ಕ್ಯಾಮರಾ ವೀಕ್ಷಿಸಿ ಆತನ ಚಹರೆ ಕಂಡುಕೊಂಡಿದ್ದಾರೆ. ಹಾಗೂ ಆತನೊಂದಿಗಿದ್ದವನನ್ನು ವಿಚಾರಣೆಗೊಳಪಡಿಸಿದಾಗ ನಕಲಿ ಪೊಲೀಸನ ಮೊಬೈಲ್ ಸಂಖ್ಯೆ ಪತ್ತೆಯಾಯಿತು.
ಬಲೆಗೆ ಬಿದ್ದ ಮಿಕ: ಅಷ್ಟರಲ್ಲಾಗಲೇ ನಕಲಿ ಪೊಲೀಸ್ ಚಾಣಾಕ್ಷತೆ ತೋರಿ ತಾನು ಬಳಸುತ್ತಿದ್ದ ಸಿಮ್ಕಾರ್ಡ್ ಮುರಿದು ಹಾಕಿದ್ದ.
 ಜೊತೆಗೆ ತನ್ನ ಪತ್ನಿಯನ್ನು ಕರೆದುಕೊಂಡು ಶೃಂಗೇರಿ ಬಳಿಯ ಬುಕಡಿ ಬೈಲಿಗೆ ತೆರಳಿದ್ದ. ಇದೇ ಹೊತ್ತಿನಲ್ಲಿ ಬೇರೆ ಸಿಮ್ ಬಳಸಿ ತನ್ನ ಗೆಳೆಯನಿಗೆ ಕರೆ ಮಾಡಿದ್ದನ್ನು ಗಮನಿಸಿ ಪೊಲೀಸರು ಮತ್ತೆ ಚರುಕುಗೊಂಡು ಕಾರ್ಯಾಚರಣೆಗಿಳಿಸಿದರು.
 ಮೊಬೈಲ್ ನೆಟ್ವರ್ಕ್ ಬಳಸಿಕೊಂಡು ಬುಕಡಿಬೈಲಿಗೆ ಹೋಗಿ ಅಲ್ಲಿ ಹಾಯಾಗಿ ಕಾಲ ಕಳೆಯುತ್ತಿದ್ದ ತರುಣ್ನನ್ನು ಬಂಧಿಸುವಲ್ಲಿ ವಿನೋಬ ನಗರ ಪೊಲೀಸರು ಯಶಸ್ವಿಯಾದರು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.