ಶಿವಪ್ಪನಾಯಕನ ತೆರಿಗೆ ನೀತಿ ಇಂದಿಗೂ ಪ್ರಸ್ತುತ
ಸಾಗರ: ಕೃಷಿಗೆ ಸಂಬಂಧಿಸಿದಂತೆ ಕೆಳದಿಯ ಶಿವಪ್ಪನಾಯಕನ ತೆರಿಗೆ ನೀತಿ ಇಂದಿಗೂ ಪ್ರಸ್ತುತ ಎಂದು ಚಿತ್ರದುರ್ಗದ ಇತಿಹಾಸ ಸಂಶೋಧಕ ಡಾ. ಬಿ.ರಾಜಶೇಖರಪ್ಪ ಹೇಳಿದರು.
ತಾಲೂಕಿನ ಕೆಳದಿಯಲ್ಲಿ ರಾಜ್ಯ ಸರ್ಕಾರ ಭಾನುವಾರ ಆಯೋಜಿಸಿದ್ದ ಕೆಳದಿ ಉತ್ಸವದ ವಿಚಾರ ಗೋಷ್ಠಿಯಲ್ಲಿ ಕೆಳದಿ ಕಾಲದ ಸಾಮಾಜಿಕ ಮತ್ತು ಧಾರ್ಮಿಕ ವ್ಯವಸ್ಥೆ ಕುರಿತು ವಿಚಾರ ಮಂಡಿಸಿದ ಅವರು, ಶಿವಪ್ಪನಾಯಕ ಭೂಮಿಯ ಫಲವತ್ತತೆ, ನೀರಾವರಿ, ಮಳೆಯ ಸ್ಥಿತಿಗತಿಗಳನ್ನು ಆಧರಿಸಿ ಬೆಳೆಗೆ ತೆರಿಗೆ ವಿಧಿಸುತ್ತಿದ್ದ ಕ್ರಮ ವೈಜ್ಞಾನಿಕವಾಗಿತ್ತು ಎಂದು ಅಭಿಪ್ರಾಯಪಟ್ಟರು.
ಪ್ರತಿಕ್ರಿಯಿಸಿದ ಸಾಮಾಜಿಕ ಕಾರ್ಯಕರ್ತ ಶಿವಾನಂದ ಕುಗ್ವೆ, ರಾಜ್ಯಾಡಳಿತಗಳಲ್ಲಿ ಶ್ರಮಿಕರ ದಾಖಲೆಗಳ ಕಡೆಗಣನೆಯಾಗುವ ಸಂಪ್ರದಾಯವನ್ನು ಕೆಳದಿ ರಾಜರ ಕಾಲದಲ್ಲಿ ತುಸು ಮುರಿದಿರುವುದು ಕಂಡುಬರುತ್ತದೆ. ಜನಪದೀಯ ಆಚರಣೆಗಳ ಮೂಲಕ ಇತಿಹಾಸವನ್ನು ಸ್ಮರಿಸಲಾಗುತ್ತಿದೆ. ಈ ದಿಸೆಯಲ್ಲಿ ಇನ್ನಷ್ಟು ಅಧ್ಯಯನ ನಡೆಸಲು ಇಲ್ಲಿನ ಪ್ರತಿ ಊರಿನ ಸ್ಥಳನಾಮಗಳ ಕುರಿತು ಸಂಶೋಧಕರು ಬೆಳಕು ಚೆಲ್ಲಬೇಕು ಎಂದು ಅಭಿಪ್ರಾಯಪಟ್ಟರು.
ಸಾಹಿತ್ಯಕ್ಕೆ ಪ್ರೋತ್ಸಾಹ: ಕೆಳದಿ ಕಾಲದ ಸಾಹಿತ್ಯ ಕುರಿತು ಮಾತನಾಡಿದ ತುಮಕೂರಿನ ಇತಿಹಾಸ ವಿದ್ವಾಂಸ ಡಾ.ಬಿ.ನಂಜುಂಡಸ್ವಾಮಿ, ಕೆಳದಿಯ ವೆಂಕಟಪ್ಪ ನಾಯಕರ ಕಾಲದಲ್ಲಿ ಸಾಹಿತ್ಯಕ್ಕೆ ಉನ್ನತ ಪ್ರೋತ್ಸಾಹ ಸಿಕ್ಕಿತ್ತು ಎಂದರು.
ಚಿಂತಕ ದೇವೇಂದ್ರ ಬೆಳೆಯೂರು ಪ್ರತಿಕ್ರಿಯಿಸಿ, ಇತಿಹಾಸ ಅಧ್ಯಯನ ವಿಶಾಲ ನೆಲೆಯಲ್ಲಿ ನಡೆಯುತ್ತಿದ್ದು, ಇವು ಎಷ್ಟೋ ಕುತೂಹಲಕಾರಿ ವಿಚಾರಗಳತ್ತ ಬೆಳಕು ಚೆಲ್ಲುವುದಿಲ್ಲ ಎಂದರು.
ಬೆಂಗಳೂರಿನ ಕರ್ನಾಟಕ ಇತಿಹಾಸ ಅಕಾಡೆಮಿಯ ಅಧ್ಯಕ್ಷ ಡಾ.ದೇವರಕೊಂಡರೆಡ್ಡಿ ಅಧ್ಯಕ್ಷತೆ ವಹಿಸಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

