ಶಿವಮೊಗ್ಗ

ಕಳಪೆ ಬತ್ತದ ಬೀಜ ಬೆಳಕಿಗೆ

Published On :

ಕ.ಪ್ರ. ವಾರ್ತೆ, ಶಿರಾಳಕೊಪ್ಪ, ಡಿ.16
ಉತ್ತಮ ಬತ್ತದ ಬೀಜವೆಂದು ಬೇರೆ ಕಳಪೆ ಬೀಜ ಕೊಟ್ಟ ಹಿನ್ನೆಲೆಯಲ್ಲಿ ರೈತರು ಪೊಲೀಸ್ ಠಾಣೆ ಮೆಟ್ಟಲೇರಿರುವ ಸಂಗತಿ ನಡೆದಿದೆ.
ಕಳೆದ ಮಳೆಗಾಲದಲ್ಲಿ ಉತ್ತಮ ಬೆಲೆ ಸಿಗುತ್ತದೆ ಎಂದು ಶಿರಾಳಕೊಪ್ಪ ಹತ್ತಿರದ ಬಿಳಕಿ ಗ್ರಾಮದ ರೈತ ಈರಪ್ಪ ಎಂಬುವವರು ಪಟ್ಟಣದ ಅಂಗಡಿ ಒಂದರಲ್ಲಿ ಅಮಾನ್ ಸೋನಾ ಎಂಬ ಬತ್ತ ಖರೀದಿಸಿದ್ದಾರೆ.
ಕಳಪೆ ಬತ್ತ: ಆದರೆ ಆಗ ಏನೂ ಗೋತ್ತಗದೇ ಈಗ ಕೊಯ್ಲು ಬಂದಾಗ ಅದು ಅಮಾನ್ ಸೋನಾ ಬದಲು ಕಳಪೆ ಜೆಜೆಎಲ್ ಬತ್ತ ಎಂದು ಗೊತ್ತಾಗಿದೆ. ಮಾಮೂಲು ಜೆಜೆಎಲ್ ಬತ್ತ ಉತ್ತಮವಾಗಿದ್ದು, ಅಮಾನ್ ಸೋನಾ  ಎಂದು ಬೆಳಯಲಾಗಿರುವ ಜೆಜೆಎಲ್ ಬತ್ತ ಕಳಪೆ ಮಟ್ಟದ್ದು ಎಂದು ಮಾರುಕಟ್ಟೆಗೆ ತಂದಾಗ ತಿಳಿದಿದೆ.
ಇಂತಹ ಕೃತ್ಯ ಪಟ್ಟಣದ ಹಲವಾರು ವ್ಯಾಪಾರಿಗಳಿಂದ ಆಗಿದೆ ಎಂದು ರೈತರು ಹೇಳುತ್ತಿದ್ದು, ಹತ್ತಿರದ ಮಳೂರ, ಬಸವನಂದಿ ಹಳ್ಳಿ, ಚಿಕ್ಕಜಂಬೂರ, ತೊಗರ್ಸಿ ಗ್ರಾಮಗಳಲ್ಲೂ ಇದೇ ರೀತಿ ಆಗಿದೆ ಎಂಬ ಧ್ವನಿ ರೈತರಿಂದ ಕೇಳಿಬರುತ್ತಿದೆ.
ಠಾಣೆಯಲ್ಲಿ ದೂರು: ಈ ಬಗ್ಗೆ ಶಿರಾಳಕೊಪ್ಪ ಠಾಣೆಯಲ್ಲಿ ದೂರು ನೀಡಿರುವ ಬಿಳಕಿ ಈರಪ್ಪ ಹಾಗೂ ಉಡಗಣಿ- ತಾಳಗುಂದ ಹೋಬಳಿ ರೈತ ಹೋರಾಟ ಸಮಿತಿ ಪದಾಧಿಕಾರಿಗಳು ಠಾಣೆಯಲ್ಲಿ ಸಬ್ ಇನ್ಸ್‌ಪೆಕ್ಟರ್ ಇದಕ್ಕೆ ಸಂಭಂಧಿಸಿದ ಜಿಲ್ಲಾ ವಿತರಕರನ್ನು ಗುರುವಾರ ಕರೆಸುವುದಾಗಿ ತಿಳಿಸಿದ್ದಾರೆ.
ಅಂದು ಆ ಬಗ್ಗೆ ಚರ್ಚೆ ಮಾಡುವುದಾಗಿ ರೈತ ಮುಖಂಡ ಹೋರಾಟ ಸಮಿತಿ ಅಧ್ಯಕ್ಷ ರಾಜಣ್ಣ, ಕಾರ್ಯದರ್ಶಿ ಕೊಟ್ರೇಶ್, ರೈತ ಮುಖಂಡ ಮಾಳಗುಂಡನ ಕೊಪ್ಪ ವೀರಣ್ಣ, ಬಿಳಕಿ ಸತೀಶ್ ಗೌಡ ಇತರರು ತಿಳಿಸಿದ್ದಾರೆ.
--
ಮನೆಯೊಳಗೆ ನುಗ್ಗಿದ ಮರಳು ಲಾರಿ
ತೀರ್ಥಹಳ್ಳಿ: ಕುಂದಾಪುರದಿಂದ ಮರಳು ಹೊತ್ತು ತಂದ ಲಾರಿಯೊಂದು ಮನೆಯೊಳಗೆ ನುಗ್ಗಿ ಆತಂಕದ ವಾತಾವರಣ ಸೃಷ್ಟಿಸಿದ ಘಟನೆ ಸೋಮವಾರ ನಡೆದಿದೆ.
ಪಟ್ಟಣದ ಬಾಳೇಬೈಲಿನಲ್ಲಿ ಮರಳು ಲಾರಿ ಮನೆಗೆ ನುಗ್ಗಿದ್ದು, ವಾಸದ ಮನೆಯ ಮುಂಭಾಗ ಪೂರ್ಣ ಜಖಂ ಆಗಿದೆ.
ಮರಳು ಲಾರಿಗಳು ರಾತ್ರಿಯ ಹೊತ್ತಿನಲ್ಲೇ ಹೆಚ್ಚಾಗಿ ಸಂಚರಿಸುತ್ತಿದ್ದು, ದಿನಕ್ಕೆ  ಕನಿಷ್ಠ 100 ಮರಳು ಲಾರಿಗಳು ಅತಿ ಭಾರ ಹೊತ್ತುಕೊಂಡು ಈ ಮಾರ್ಗವಾಗಿ ಸಂಚರಿಸುತ್ತವೆ. ದಕ್ಷಿಣ ಕನ್ನಡದ ಮರಳು ಘಟ್ಟದ ಮೇಲಿನ ಶಿವಮೊಗ್ಗ, ಭದ್ರಾವತಿಗೆ ಸಾಗಿಸಲಾಗುತ್ತದೆ. ತೀರ್ಥಹಳ್ಳಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

'ಅಡಕೆ ನಿಷೇಧ ಪ್ರಮಾಣಪತ್ರ ಸಲ್ಲಿಸಿಲ್ಲ'
ಶಿವಮೊಗ್ಗ: ಅಡಕೆ ಆರೋಗ್ಯಕ್ಕೆ ಹಾನಿಕಾರಕ. ಆದ್ದರಿಂದ ಅಡಕೆ ನಿಷೇಧ ಮಾಡಬೇಕು ಎಂದು ಕೇಂದ್ರ ಆರೋಗ್ಯ ಇಲಾಖೆ ಸುಪ್ರೀಂ ಕೋರ್ಟ್‌ಗೆ ಪ್ರಮಾಣಪತ್ರ ಸಲ್ಲಿಸಿಲ್ಲ ಎಂದು ಜಿಲ್ಲಾ ಕಾಂಗ್ರೆಸ್ ವಕ್ತಾರ ಬಿ.ಎ. ರಮೇಶ್ ಹೆಗ್ಡೆ ತಿಳಿಸಿದ್ದಾರೆ.
ಈ ಕುರಿತು ಮಾಹಿತಿ ನೀಡಿರುವ ಅವರು, ಈ ಬಗ್ಗೆ ಬಿಜೆಪಿ ಅನಗತ್ಯವಾಗಿ ಅಪಪ್ರಚಾರ ಮಾಡುತ್ತಿದೆ. ಉತ್ತಮ ಧಾರಣೆ ಹೊಂದಿರುವ ಅಡಕೆಯನ್ನು ಮಾರುಕಟ್ಟೆಯಲ್ಲಿ ಅಸ್ಥಿರಗೊಳಿಸುವ ಷಡ್ಯಂತ್ರ ನಡೆಯುತ್ತಿದೆ. ಪ್ರತಿವರ್ಷ ಅಡಕೆ ಮಾರುಕಟ್ಟೆಗೆ ಬರುವ ಸಂದರ್ಭದಲ್ಲಿ ಗುಟ್ಕಾ ನಿಷೇಧದ ಗುಮ್ಮ ಬಿಡುತ್ತಿದ್ದ ವ್ಯಾಪಾರಿ ಹಿತಾಸಕ್ತಿಗಳಿಗೆ ಈ ಬಾರಿ ಅನುಕೂಲ ಮಾಡಿಕೊಡಲು ಅಡಕೆ ನಿಷೇಧದ ಪ್ರಮಾಣಪತ್ರದ ಗುಮ್ಮ ಬಿಡಲು ಬಿಜೆಪಿ ನಾಯಕರು ಹೊರಟಿರುವುದು ಬೆಳೆಗಾರರ ವಿರೋಧಿ ನೀತಿಯಾಗಿದೆ ಎಂದು ಆರೋಪಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.