ಶಿವಮೊಗ್ಗ

ಭೂಒಡೆತನ ಹಕ್ಕಿಗೆ ಒತ್ತಾಯ; ನಾಡಿಗೆ ಮನವಿ

Published On :

ಕ.ಪ್ರ.ವಾರ್ತೆ, ಸಾಗರ, ಡಿ.19
ಸಾಹಿತ್ಯ ಸಮ್ಮೇಳನ ಅಧ್ಯಕ್ಷರ ಭಾಷಣದಲ್ಲಿ ಶಾಲಾ ಜಮೀನು ಗೇಣಿದಾರರಿಗೆ ಭೂಒಡೆತನದ ಹಕ್ಕುಪತ್ರ ನೀಡಲು ರಾಜ್ಯ ಸರ್ಕಾರವನ್ನು ಒತ್ತಾಯಿಸಬೇಕು ಎಂದು ಶಿವಮೊಗ್ಗದ ರಾಜ್ಯ ಭೂ-ವಿದ್ಯಾದಾನದ ಶಾಲಾ ಜಮೀನು ಗೇಣಿ ರೈತರ ಹೋರಾಟ ಸಮಿತಿ ವತಿಯಿಂದ ಗುರುವಾರ 80ನೇ ಸಾಹಿತ್ಯ ಸಮ್ಮೇಳನದ ನಿಯೋಜಿತ ಅಧ್ಯಕ್ಷ ಡಾ.ನಾ.ಡಿಸೋಜ ಅವರಿಗೆ ಮನವಿ ಸಲ್ಲಿಸಲಾಯಿತು.
ರಾಜ್ಯದಲ್ಲಿ 58 ವರ್ಷಗಳಿಂದ ಸುಮಾರು 10 ಸಾವಿರ ಎಕರೆ ಭೂವಿದ್ಯಾದಾನದ ಶಾಲಾ ಜಮೀನುಗಳಲ್ಲಿ 3000ಕ್ಕೂ ಹೆಚ್ಚು ರೈತ ಕುಟುಂಬಗಳು ಗೇಣಿದಾರರಾಗಿದ್ದವು. ಈ ಶಾಲಾ ಜಮೀನುಗಳ ಖಾತೆ ಸಂವಿಧಾನಬಾಹಿರವಾಗಿ ರಾಜ್ಯಪಾಲರ ಹೆಸರಿನಲ್ಲಿದೆ. ರಾಜ್ಯದಲ್ಲಿ ಗೇಣಿ ಸಾಗುವಳಿಯಲ್ಲಿರುವ ಈ ಭೂ ವಿದ್ಯಾದಾನದ ಎಲ್ಲಾ ಶಾಲಾ ಜಮೀನುಗಳು ಶಾಲೆಯಿಂದ ದೂರವಿದೆ. ಈ ರೀತಿಯ ಯಾವ ಶಾಲೆಗಳಿಗೂ ಗೇಣಿ ಹಣದ ಅಗತ್ಯವಿರುವುದಿಲ್ಲ.
1974ರಲ್ಲಿ ಜಾರಿಗೆ ಬಂದ ರಾಜ್ಯ ಭೂಸುಧಾರಣಾ ಕಾನೂನಿನಲ್ಲಿ ಉಳುವವನೇ ಹೊಲದೊಡೆಯ ಸಿದ್ಧಾಂತಕ್ಕೆ ಬದ್ಧವಾಗಿ ಅಂದಿನ ಮುಖ್ಯಮಂತ್ರಿ ದಿ.ದೇವರಾಜ ಅರಸು ಅವರು ಸರ್ಕಾರ ಖಾಸಗಿಯವರು, ಮಠಮಾನ್ಯಗಳ, ದೇವಸ್ಥಾನಗಳ ಜಮೀನುಗಳನ್ನು ಗೇಣಿದಾರರಿಗೆ ಖಾತೆ ಮಾಡಿ ಭೂ ಒಡೆತನದ ಹಕ್ಕುಪತ್ರವನ್ನು ನೀಡಿದೆ. ಆದರೂ, ರಾಜ್ಯದಲ್ಲಿ ಶಾಲಾ ಜಮೀನು ಗೇಣಿ ಪದ್ಧತಿ 58 ವರ್ಷಗಳಿಂದ ಜೀವಂತವಾಗಿದೆ ಎಂದು ತಿಳಿಸಿದ್ದಾರೆ.
ಆದ್ದರಿಂದ ಜಾರಿಯಲ್ಲಿರುವ ವಿದ್ಯಾದಾನದ ಶಾಲಾ ಜಮೀನು ಗೇಣಿದಾರರಿಗೆ ಭೂ ಒಡೆತನದ ಹಕ್ಕುಪತ್ರ ನೀಡಲು ಮತ್ತು ಭೂ ವಿದ್ಯಾದಾನದ ಶಾಲಾ ಜಮೀನುಗಳಿಗೆ ಪ್ರತಿವರ್ಷ ಹರಾಜು ಮಾಡಬೇಕೆಂಬ ಸುತ್ತೋಲೆಯನ್ನು ವಾಪಾಸ್ ಪಡೆದು, ಈಗಾಗಲೇ ಶಾಲಾ ಜಮೀನು ಗೇಣಿದಾರರನ್ನು ಒಕ್ಕಲೆಬ್ಬಿಸಿದಲ್ಲಿ ಅವರಿಗೆ ಪುನಹ ಸಾಗುವಳಿಗೆ ಅವಕಾಶ ಕಲ್ಪಿಸಲು ಕ್ರಮ ಕೈಗೊಳ್ಳುವಂತೆ 80ನೇ ಸಾಹಿತ್ಯ ಸಮ್ಮೇಳನದ ಅಧ್ಯಕ್ಷೀಯ ಭಾಷಣದ ಮೂಲಕ ರಾಜ್ಯ ಸರ್ಕಾರದ ಮೇಲೆ ಒತ್ತಡ ತರಬೇಕು ಎಂದು ಒತ್ತಾಯಿಸಲಾಗಿದೆ.
ಈ ಸಂದರ್ಭ ಸಮಿತಿ ವತಿಯಿಂದ ಡಿಸೋಜ ಅವರನ್ನು ಸನ್ಮಾನಿಸಲಾಯಿತು. ಸಮಿತಿ ಅಧ್ಯಕ್ಷ ಕಲ್ಲೂರು ಮೇಘರಾಜ್, ಉಪಾಧ್ಯಕ್ಷ ಪಿ.ಡಿ.ಮಂಜಪ್ಪ, ಮಂಜುಳಾ ದೇವಿ, ಸುವರ್ಣ ನಾಗರಾಜ್, ರಾಮನಗರ ಕೃಷ್ಣಪ್ಪ, ಹರಮಘಟ್ಟ ತೀರ್ಥಪ್ಪ, ಎರೇಕೊಪ್ಪ ಚಂದ್ರಶೇಖರ್, ಕಡ್ಲೆಕಾಯಿ ಮಂಜುನಾಥ್, ನಿಂಬೆಹಣ್ಣು ಮಂಜುನಾಥ್ ಇನ್ನಿತರರು ಹಾಜರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.