ಶಿವಮೊಗ್ಗ

ಸುದ್ದಿ ಸಂಕ್ಷೇಪ

Published On :

ಇಂದು ಉಚಿತ ಮಾಹಿತಿ ಕಾರ್ಯಾಗಾರ
ಶಿವಮೊಗ್ಗ: ಸವಳಂಗ ರಸ್ತೆಯಲ್ಲಿರುವ ಟಾಪರ್ಸ್ ಕೋಚಿಂಗ್ ಸೆಂಟರ್ ಡಿ.22ರಂದು ಬೆಳಿಗ್ಗೆ 10ಗಂಟೆಗೆ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳ ಕುರಿತು ಒಂದು ದಿನದ ಉಚಿತ ಮಾಹಿತಿ ಕಾರ್ಯಾಗಾರ ಆಯೋಜಿಸಿದೆ. ಕೆಎಎಸ್, ಐಎಎಸ್, ಪಿಎಸ್‌ಐ, ಪಿ.ಸಿ, ಎಸ್ ಡಿಎ, ಡಿಇಡಿ,(ಟಿಇಟಿ) ಮತ್ತು ಐಬಿಪಿಎಸ್, ಬ್ಯಾಂಕ್ ಪಿಓ ಹುದ್ದೆಗಳ ಪರೀಕ್ಷಾ ವಿಧಾನ ಅಧ್ಯಯನಕ್ಕೆ ಬೇಕಾಗುವ ಪುಸ್ತಕ ಹಾಗೂ ನೋಟ್ಸ್‌ಗಳನ್ನು ಹಾಗೂ ಯಶಸ್ಸಿನ ಹಿಂದಿನ ಸೂತ್ರಗಳನ್ನು ಕುರಿತು ಮಾಹಿತಿ ನೀಡಲು ಕೆಎಎಸ್ ಮತ್ತು ಆಯಾ ಪರೀಕ್ಷೆಗಳಲ್ಲಿ ಪಾಸಾದ ಹಾಗೂ ವಿಷಯ ಪರಿಣಿತರಿಂದ ಮಾಹಿತಿ ನೀಡಲಾಗುವುದು ಎಂದು ಸೆಂಟರ್ ಆಡಳಿತ ಮಂಡಳಿ ತಿಳಿಸಿದೆ. ವಿವರಗಳಿಗಾಗಿ-7204321213.
ತಾಯಿ, ಮಗಳ ಮೇಲೆ ಹಲ್ಲೆ
ಶಿವಮೊಗ್ಗ: ದರೋಡೆ ಮಾಡಲು ಮನೆಯೊಳಗೆ ನುಗ್ಗಿದ ಡಕಾಯಿತರ ತಂಡ ತಾಯಿ ಮತ್ತು ಮಗಳ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿರುವ ಘಟನೆ ನಗರದ ಆರ್‌ಎಂಎಲ್ ನಗರದಲ್ಲಿ ಶನಿವಾರ ಮಧ್ಯಾಹ್ನ ನಡೆದಿದೆ. ಆರ್‌ಎಂಎಲ್ ನಗರದ ಸಲ್ಲೀಮುಲ್ಲಾ ಎಂಬುವವರ ಮನೆಯಲ್ಲಿ ಘಟನೆ ನಡೆದಿದೆ. 3-4 ಜನ ಡಕಾಯಿತಿಯ ತಂಡ ಇವರ ಮನೆಯೊಳಗೆ ನುಗ್ಗಿದೆ. ಮನೆಯೊಳಗೆ ಬೀರು ಸೇರಿದಂತೆ ಎಲ್ಲೆಡೆ ಹಣ ಮತ್ತು ಒಡವೆಗಾಗಿ ಪರಿಶೀಲಿಸಿದ್ದಾರೆ. ಇದನ್ನು ವಿರೋಧಿಸಿದ ಸಲೀಮುಲ್ಲಾ ಅವರ ಹೆಂಡತಿ ಹಾಗೂ ಮಗಳ ಮೇಲೆ ಹಲ್ಲೆ ನಡೆಸಿದ್ದಾರೆ. ಇವರನ್ನು ಕೂಡಲೇ ಸ್ಥಳೀಯ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಈ ವೇಳೆ ಸಾರ್ವಜನಿಕರು ಜಮಾಯಿಸಿದ್ದರಿಂದ ಪರಾರಿಯಾಗಲು ಯತ್ನಿಸಿದ ತಂಡದಲ್ಲಿ ಓರ್ವನನ್ನು ಸ್ಥಳೀಯರು ಸೇರಿ ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಪ್ರಕರಣ ದೊಡ್ಡಪೇಟೆ ಠಾಣೆಯಲ್ಲಿ ದಾಖಲಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.