ಇಂದು ಸೊರಬಕ್ಕೆ ರಾಜನಾಥ ಸಿಂಗ್
ಸೊರಬ: ಪಟ್ಟಣಕ್ಕೆ ಇಂದು ಬಿಜೆಪಿ ರಾಷ್ಟ್ರಾಧ್ಯಕ್ಷ ರಾಜನಾಥ್ ಸಿಂಗ್ ಆಗಮಿಸಲಿರುವ ಹಿನ್ನೆಲೆಯಲ್ಲಿ ಭರದ ಸಿದ್ಧತೆ ನಡೆದಿದೆ.
ಇವರೊಂದಿಗೆ ರಾಜ್ಯಧ್ಯಕ್ಷ ಮುರಳಿ ಮನೋಹರ ಜೋಷಿಯವರು ಬರಲಿದ್ದು, ನಂತರದಲ್ಲಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಗಳಾದ ಧರ್ಮೇಂದ್ರ ಪ್ರದಾನ್, ಜಗತ್ ಪ್ರಕಾಶ್ ಡೆ, ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್, ಅನಂತಕುಮಾರ್, ಪ್ರಹ್ಲಾದ ಜೋಷಿ, ಸಂಸದ ಆಯನೂರು ಮಂಜುನಾಥ್, ವಿಪ ಸದಸ್ಯ ಆರ್.ಕೆ.ಸಿದ್ಧರಾಮಣ್ಣ, ಬಾನುಪ್ರಕಾಶ್, ಪಕ್ಷದ ರಾಜ್ಯ, ಜಿಲ್ಲಾ ಪ್ರಮುಖರು ರಾಷ್ಟ್ರಾಧ್ಯಕ್ಷರೊಂದಿಗೆ ಸೇರಲಿದ್ದಾರೆ, ಮಧ್ಯಪ್ರದೇಶದ ಮುಖ್ಯ ಮಂತ್ರಿ ಶಿವರಾಜ್ ಸಿಂಗ್ ಚೌವ್ಹಾಣ್ ಆಗಮಿಸುವ ಸಾಧ್ಯತೆ ಇದೆ.
ಸಿದ್ಧತೆ: ಪಟ್ಟಣದ ಬಂಗಾರಪ್ಪ ಕ್ರೀಡಾಂಗಣದಲ್ಲಿ ಹೆಲಿಪ್ಯಾಡ್ ಸಿದ್ಧಗೊಂಡಿದ್ದು, ಸ್ಥಳಕ್ಕೆ ಅಡಿಷನಲ್ ಎಸ್ಪಿ, ಸಿಪಿಐ, ಎಸ್ಐ, ಮುಂಬಯಿ ಹೆಲಿಕಾಪ್ಟರ್ ಕಂಪೆನಿಯ ತಜ್ಞರು, ಲೋಕೋಪಯೋಗಿ ಇಲಾಖೆ ಅಭಿಯಂತರರು ತೆರಳಿ ಪರಿಶೀಲಿಸಿದರು. ರಕ್ಷಣಾ ವ್ಯವಸ್ಥೆಯೂ ಸೇರಿದಂತೆ ಉಪಚಾರದ ತಯಾರಿ ನಡೆದಿದೆ. ಮಧ್ಯಾಹ್ನ ಇಲ್ಲಿನ ಎನ್.ಜಿ.ಪದ್ಮನಾಭ ರಾವ್ ಅವರ ಮನೆಯಲ್ಲಿ ಬೋಜನ ವ್ಯವಸ್ಥೆಗೆ ಸಿದ್ಧತೆ ನಡೆದಿದೆ.
ಬಿಎಸ್ವೈ ಜೊತೆ ಮಾತುಕತೆ: ಇದೇ ವೇಳೆ ರಾಜ್ಯ ಬಿಜೆಪಿ ಪಕ್ಷದಲ್ಲಿನ ಭಿನ್ನಾಭಿಪ್ರಾಯದ ಹಿನ್ನೆಲೆಯಲ್ಲಿ ರಾಜ್ಯದ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಜೊತೆ ಮಾತುಕತೆ ನಡೆಯಲಿದೆ ಎಂದು ಕೇಳಿ ಬಂದಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

