ಚಕ್ರಾನಗರಕ್ಕೆ ಮೊರಾರ್ಜಿ ಶಾಲೆ ಮಂಜೂರು
ಹೊಸನಗರ: ಕೆಪಿಸಿ ಕಾಲೋನಿ ತೆರವು ಗೊಳಿಸಿದ ನಂತರದಲ್ಲಿ ಬರಿದಾದ ಚಕ್ರಾನಗರ ಪ್ರದೇಶಕ್ಕೆ ಮೊರಾರ್ಜಿ ಶಾಲೆ ಮತ್ತು ಮಾಸ್ತಿಕಟ್ಟೆ ಪ್ರದೇಶಕ್ಕೆ ಐಟಿಐ ಕಾಲೇಜು ಮಂಜೂರು ಮಾಡಿಸುವುದಾಗಿ ಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ ಭರವಸೆ ನೀಡಿದರು.
ಕರಿಮನೆ ಗ್ರಾಮದ ಪ್ರಮುಖರು ತೀರ್ಥಹಳ್ಳಿಯಲ್ಲಿ ಶಿಕ್ಷಣ ಸಚಿವರನ್ನು ಭೇಟಿ ಮಾಡಿ ಚಕ್ರಾನಗರದಲ್ಲಿ ಮೊರಾರ್ಜಿ ಶಾಲೆ ನೀಡಬೇಕು ಈ ನಿಟ್ಟಿನಲ್ಲಿ ಹಾಳುಬಿದ್ದ ಪ್ರದೇಶಕ್ಕೆ ಜೀವ ತುಂಬಬೇಕು ಎಂದು ಮನವಿ ಮಾಡಿದರು.
ಗ್ರಾಮಸ್ಥರ ಮನವಿಗೆ ಸ್ಪಂದಿಸಿದ ಸಚಿವರು, ಚಕ್ರಾನಗರದಲ್ಲಿ ಮೊರಾರ್ಜಿ ಶಾಲೆ ಸ್ಥಾಪನೆ ಮತ್ತು ಈ ನಿಟ್ಟಿನಲ್ಲಿ ನಡೆದಿರುವ ಕ್ರಮಗಳ ಬಗ್ಗೆ ಅರಿವಿದ್ದು ಶಾಲೆಯನ್ನು ಮಂಜೂರು ಮಾಡಿಸುವ ಭರವಸೆ ನೀಡಿದರು.
ಸಚಿವರನ್ನು ಭೇಟಿ ಮಾಡಿದ ನಿಯೋಗದಲ್ಲಿ ಸಿ.ರಾಮಚಂದ್ರರಾವ್, ಚಕ್ರಾ ಸುಬ್ರಹ್ಮಣ್ಯ, ಕರಿಮನೆ ರಾಜಶೇಖರ್, ರಮೇಶ್, ನಗರ ಚಂದ್ರ, ಗಿರಿಧರ್ಮ್ತ್ತಿತರರು ಪಾಲ್ಗೊಂಡಿದ್ದರು.
ಕೆಪಿಸಿ ಸ್ಥಳಾಂತರ ಅವಾಂತರ: ಹೊಸನಗರದ ವಾರಾಹಿ ಯೋಜನೆಯದಲ್ಲಿ ನಿರ್ಮಾಣಗೊಂಡ ಪ್ರೊಜೆಕ್ಟ್ಗಳ ನಿರ್ವಹಣೆಗೆ ಮಾಸ್ತಿಕಟ್ಟೆ ಸೂಕ್ತವಾಗಿದ್ದರು ಕೂಡ ಅವೈಜ್ಞಾನಿಕವಾಗಿ ಸ್ಥಳಾಂತರಿಸಿರುವುದರ ಸಂಬಂಧ ಮಾಸ್ತಿಕಟ್ಟೆ ನಾಗರೀಕ ಹಿತರಕ್ಷಣೆ ವೇದಿಕೆಯ ಸದಸ್ಯರು ಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ್ ಅವರನ್ನು ಭೇಟಿ ಮಾಡಿ ಸಮಸ್ಯೆ ಬಗ್ಗೆ ಮಾತುಕತೆ ನಡೆಸಿದರು.
ಮಾಣಿ ಡ್ಯಾಂ ಸೇರಿದಂತೆ ವಾರಾಹಿ ಯೋಜನೆಯ 15 ಸ್ಯಾಡಲ್ ಡ್ಯಾಂಗಳ ನಿರ್ವಹಣೆಗೆ ಮಾಸ್ತಿಕಟ್ಟೆ ಸೂಕ್ತವಾಗಿದೆ. ಅಲ್ಲದೆ ಕಾಲೋನಿಯಲ್ಲಿ ಮೂಲಭೂತ ಸೌಕರ್ಯಗಳ ಉತ್ತಮ ಅನುಷ್ಠಾನವಾಗಿದ್ದು ಮತ್ತು ವಿಶಾಲವಾದ 85 ಎಕರೆ ಪ್ರದೇಶ ಕೆಪಿಸಿಯ ಸ್ವಂತ ಆಸ್ತಿ ಇದ್ದು ಇಲ್ಲಿಂದಲೆ ನಿರ್ವಹಣೆ ಮಾಡುವಂತೆ ಸ್ಥಳಾಂತರವನ್ನು ರದ್ದುಗೊಳಿಸುವಂತೆ ಗ್ರಾಮಸ್ಥರು ಸಚಿವರನ್ನು ಆಗ್ರಹಿಸಿದರು.
ಗ್ರಾಮಸ್ಥರ ಅಹವಾಲು ಸ್ವೀಕರಿಸಿದ ನಂತರ ಸಚಿವರು, ಮಾಸ್ತಿಕಟ್ಟೆ ಪ್ರದೇಶದ ಸಮಸ್ಯೆ ಅರಿವು ನನಗಿದೆ. ಈ ಸಂಬಂಧ ಮುಖ್ಯಮಂತ್ರಿಗಳೊಂದಿಗೆ ಬೇಟಿ ಮಾಡಿ ಮಾತುಕಟೆ ನಡೆಸೋಣ. ಡಿ.26ರಂದು ವೇದಿಕೆಯ ನಿಯೋಗ ಬೆಂಗಳೂರಿಗೆ ಬರುವಂತೆ ಸೂಚಿಸಿದರು.
ಪ್ರಮುಖರಾದ ಸಿ.ರಾಮಚಂದ್ರರಾವ್. ಹಿತರಕ್ಷಣಾ ವೇದಿಕೆ ಅಧ್ಯಕ್ಷ ಎಸ್.ಕೆ.ಗೋಪಾಲ್, ಜಿ.ವೈ.ರವೀಂದ್ರ, ಅನಂತಮೂರ್ತಿ ಶೆಣೈ, ವಿದ್ಯಾನಂದರಾವ್, ಮಹೇಶ್, ಸುನೀಲ್ ಕುಮಾರ್, ಸಜೀಶ್, ಮಾಸ್ತಿಕಟ್ಟೆಯ ಪ್ರಮುಖರು ಹಾಜರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

