ಶಿವಮೊಗ್ಗ

ಮಲೆನಾಡು ವಸ್ತ್ರ ಉತ್ಸವ ಪ್ರಾರಂಭ

Published On :

ಕ.ಪ್ರ.ವಾರ್ತೆ  ಶಿವಮೊಗ್ಗ  ಡಿ.23
ನವದೆಹಲಿಯ ಜವಳಿ ಮಂತ್ರಾಲಯದ ಅಭಿವೃದ್ಧಿ ಆಯುಕ್ತರು(ಕೈಮಗ್ಗ) ಮತ್ತು ಬೆಂಗಳೂರಿನ ಕೈಮಗ್ಗ ಮತ್ತು ಜವಳಿ ಅಭಿವೃದ್ಧಿ ಆಯುಕ್ತರು ಹಾಗೂ ನಿರ್ದೇಶಕರ ಆಶ್ರಯದಲ್ಲಿ ಡಿ. 23ರಿಂದ 28ರವರೆಗೆ ನಗರದ ಕರ್ನಾಟಕ ಸಂಘದಲ್ಲಿ ಮಲೆನಾಡು ವಸ್ತ್ರ ಉತ್ಸವ-2013 ಜಿಲ್ಲಾ ಮಟ್ಟದ ಕೈಮಗ್ಗ ಮೇಳ ಆಯೋಜಿಸಲಾಗಿದೆ. ಕೈಮಗ್ಗ ಉತ್ಪನ್ನಗಳ ಪ್ರದರ್ಶನ ಮತ್ತು ಮಾರಾಟ ಮೇಳದಲ್ಲಿ ರಾಜ್ಯದ ಎಲ್ಲಾ ಭಾಗಗಳಲ್ಲಿ ತಯಾರಾದ ವೈವಿಧ್ಯಮಯ ರೇಷ್ಮೆ ಮತ್ತು ಕಾಟನ್ ಸೀರೆಗಳು, ಉಣ್ಣೆ ಕಂಬಳಿಗಳು, ಕಾರ್ಪೆಟ್ ಗಳು, ಹತ್ತಿ ಬಟ್ಟೆಗಳು, ಲುಂಗಿಗಳು, ಕರವಸ್ತ್ರಗಳು, ಚೂಡಿದಾರ್ ಸೆಟ್‌ಗಳು, ಬೆಡ್‌ಶೀಟ್‌ಗಳು ಇನ್ನೂ ಅನೇಕ ಕೈಮಗ್ಗದ ಉತ್ಪನ್ನಗಳು ಮೇಳದಲ್ಲಿ ದೊರೆಯಲಿದೆ. ಮೇಳದಲ್ಲಿ ರಾಜ್ಯ ವಿವಿಧ ಜಿಲ್ಲೆಗಳಿಂದ, ಬೆಂಗಳೂರು, ಚಾಮರಾಜಪೇಟೆ, ಗದಗ, ಮೈಸೂರು, ಚಿತ್ರದುರ್ಗ, ದಾವಣಗೆರೆ, ತುಮಕೂರು, ಶಿವಮೊಗ್ಗ, ಸಾಗರ, ಶಿಕಾರಿಪುರ, ಚಿಕ್ಕಬಳ್ಳಾಪುರ, ಮೊಳಕಾಲ್ಮುರು, ಯಲಹಂಕ ಸೇರಿದಂತೆ 20ಕ್ಕೂ ಅಧಿಕ ಮಳಿಗೆಗಳು ಕಂಡು ಬರುತ್ತವೆ. ಮೇಳದಲ್ಲಿ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ಆಯೋಜಕರು ತಿಳಿಸಿದ್ದಾರೆ. ರಾಷ್ಟ್ರಕವಿ ಜಿ.ಎಸ್. ಶಿವರುದ್ರಪ್ಪ ಅವರ ನಿಧನದ ಹಿನ್ನೆಲೆಯಲ್ಲಿ ಯಾವುದೇ ಉದ್ಘಾಟನಾ ಸಮಾರಂಭ ನಡೆಯಲಿಲ್ಲ. ಜಿಪಂ ಅಧ್ಯಕ್ಷೆ ಗೀತಾ ಮಲ್ಲಿಕಾರ್ಜುನ ಮೇಳ ವೀಕ್ಷಿಸಿದರು.

ಕ್ರಿಕೆಟ್: ಹುಲಿಕಲ್ ತಂಡ ಪ್ರಥಮ
ಹೊಸನಗರ: ಮಾಸ್ತಿಕಟ್ಟೆ ಫ್ರೆಂಡ್ಸ್ ಕ್ಲಬ್ ವತಿಯಿಂದ 20 ವರ್ಷ ವಯೋವುತಿ ಒಳಗಿನ ತಾಲೂಕು ಮಟ್ಟದ ಟೆನ್ನಿಸ್ ಬಾಲ್ ಕ್ರಿಕೆಟ್ ಪಂದ್ಯಾವಳಿಯಲ್ಲಿ ಹುಲಿಕಲ್ ತಂಡ ಪ್ರಶಸ್ತಿ ಗೆದ್ದುಕೊಂಡಿದೆ. ಶಂಕರನಾರಾಯಣ ತಂಡ ದ್ವಿತೀಯ ಬಹುಮಾನ ಪಡೆಯಿತು. ಉತ್ತಮ ಬ್ಯಾಟಿಂಗ್ ಮತ್ತು ಬೌಲಿಂಗ್‌ಗಾಗಿ ಕ್ರಮವಾಗಿ ಆದರ್ಶ್ ಸಂಪೆಕಟ್ಟೆ , ಸುನಿಲ್ ಮಾಸ್ತಿಕಟ್ಟೆ, ಸರಣಿ ಸರ್ವೋತಮನಾಗಿ ರಾಹುಲ್ ಪ್ರಶಸ್ತಿ ಪಡೆದುಕೊಂಡರು. ಸಮಾರೋಪ ಸಮಾರಂಭದಲ್ಲಿ ವಿಜೇತರಿಗೆ ಪ್ರಶಸ್ತಿ ವಿತರಿಸಲಾಯಿತು. ಸ್ಥಳೀಯರಾದ ಮೆಹಬೂಬ್, ಲಯನ್ ಎಚ್. ವಾಸಪ್ಪ, ವಿದ್ಯನಂದರಾವ್, ಜಿ. ಪ್ರಕಾಶ್, ರಂಜಿತ್ ಹೆಗ್ಡೆ ಬಹುಮಾನ ವಿತರಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.