ಬದುಕಿನ ಘನತೆ ಎತ್ತಿಹಿಡಿದ ಚೇತನ
ಮಲೆನಾಡಿನ ತೊಟ್ಟಿಲಲ್ಲಿ ಹುಟ್ಟಿ ಬೆಳೆದ ಹಿರಿಯ ಕವಿ ರಾಷ್ಟ್ರಕವಿ ಶಿವರುದ್ರಪ್ಪ ಅವರು ನಮ್ಮನ್ನಗಲಿದ್ದಾರೆ ಎಂಬ ಸುದ್ದಿಯನ್ನು ಅರಗಿಸಿಕೊಳ್ಳುವುದು ಪ್ರಯಾಸದ ಕೆಲಸ. ಎದೆ ತುಂಬಿ ಹಾಡಿದ ಕವಿ ತಮ್ಮ ಬದುಕಿನುದ್ದಕ್ಕೂ ಸತ್ಯದ ಅನ್ವೇಷಣೆಯನ್ನು ಮಾಡುತ್ತಾ, ನಂಬಿದ ಸಿದ್ಧಾಂತಗಳಿಗೆ ಬದ್ಧರಾಗಿ ಬದುಕಿದ್ದು ನಮ್ಮಲ್ಲೆರ ಸೌಭಾಗ್ಯ.
ಯಾವುದೇ ಸಿದ್ಧಾಂತ, ರಾಜಕೀಯ ಪ್ರೇರಿತವಾದ ವಿಚಾರಗಳಿಗೆ ಎಂದೂ ಮನಸ್ಸು ಕೊಡಲಿಲ್ಲ. ಅಪ್ಪಟ ಬದುಕನ್ನು ಪ್ರೀತಿಸಿದ, ಬದುಕಿನ ಮೌಲ್ಯಗಳನ್ನು ಎಲ್ಲ ಸಿದ್ಧಾಂತಗಳಿಂದಲೂ ಪ್ರೇರಿತರಾಗಿ ಪಡೆದುಕೊಂಡು ಬದುಕಿನ ಘನತೆಯನ್ನು ಎತ್ತಿ ಹಿಡಿದ ನಮ್ಮ ಮಧ್ಯದ ಅದ್ಭುತವಾದಂತಹ ಚೇತನ.
ಭೌತಿಕವಾಗಿ ಜಿಎಸ್‌ಎಸ್ ಅವರು ಇನ್ನು ಮುಂದೆ ನಮ್ಮ ಜತೆಗಿರಲಿಕ್ಕಿಲ್ಲ, ಇದು ವಾಸ್ತವ. ಆದರೆ ಈ ನೆಲದ ಭಾವಕೋಶದಲ್ಲಿ ನಿರಂತರವಾಗಿ ಕವಿ ಜೀವಂತ ಇರುವರು ಎಂಬುದು ಮಾತ್ರ ಕಾಲಾತೀತ ಸತ್ಯ.
ಈ ಸತ್ಯ ನಮ್ಮ ಮಕ್ಕಳಿಗಾಗಿ, ನಮಗಾಗಿ, ಎಲ್ಲರಲ್ಲಿಯೂ ಒಂದು ನೈತಿಕ ಪ್ರಜ್ಞೆಯಾಗಿ ಉಳಿಯಬೇಕು ಎಂಬುದು ಬದುಕನ್ನು ಪ್ರೀತಿಸುವವರ ಹಂಬಲ. ಬದುಕನ್ನು ಪ್ರೀತಿಸಿದ ಕವಿಗೆ ನಾವು ಸಲ್ಲಿಸಬಹದಾದಂತಹ ಗೌರವ ಅವರು ಸಾಹಿತ್ಯಿಕವಾಗಿ ಸಾಮಾಜಿಕವಾಗಿ ನಡೆದುಬಂದಂತಹ ಹಾದಿಯಲ್ಲಿ ಮುಳ್ಳು ಬಿತ್ತದೆ ಹೂ ಅರಳಿಸುವ ಕೆಲಸ ನಮ್ಮ ಕರ್ತವ್ಯ ಎಂದು ಭಾವಿಸುವುದೊಂದೇ ನಾವು ಅವರಿಗೆ ಸಲ್ಲಿಸುವ ಗೌರವ ಮತ್ತು ನೆನಪಿನ ಉತ್ಕಟತೆ.
- ಪ್ರೊ. ಮಲ್ಲಿಕಾ ಎಸ್. ಗಂಟಿ, ಕವಯತ್ರಿ
ಸದ್ಬಳಕೆಯಾಗದ ಕೋಟ್ಯಂತರ ಹಣ: ಆರೋಪ
ಕ.ಪ್ರ.ವಾರ್ತೆ ಶಿವಮೊಗ್ಗ ಡಿ.23
ಕಟ್ಟಡ ಮತ್ತು ಇತರೆ ನಿರ್ಮಾಣ ಕೆಲಸಗಳಲ್ಲಿ ತೊಡಗಿರುವ ಕಾರ್ಮಿಕರ ಕಲ್ಯಾಣಕ್ಕಾಗಿ ಮೀಸಲಿಟ್ಟ ಸೆಸ್ ರೂಪದಲ್ಲಿ ಸಂಗ್ರಹಿಸಿರುವ ಸಾವಿರಾರು ಕೋಟಿ ರುಪಾಯಿ ಹಣ ಸದ್ಬಳಕೆಯಾಗಿಲ್ಲ ಎಂದು ರಾಜೀವ್ ಗಾಂಧಿ ಶಿವಮೊಗ್ಗ ಜಿಲ್ಲಾ ಕಟ್ಟಡ ಕಾರ್ಮಿಕರ ಕ್ಷೇಮಾಭಿವೃದ್ಧಿ ಸಂಘದ ಪ್ರಧಾನ ಕಾರ್ಯದರ್ಶಿ ಎನ್. ರಮೇಶ್ ತಿಳಿಸಿದರು.
ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಅವರು, ಕಟ್ಟಡ-ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣಕ್ಕಾಗಿ ಸರ್ಕಾರ ಪ್ರತ್ಯೇಕ ಕಾಯ್ದೆ ಜಾರಿಗೊಳಿಸಿ ಅನುಷ್ಠಾನಗೊಳಿಸಿದೆ. ಈ ಕಾಯ್ದೆಯಡಿ ಕೇಂದ್ರ- ರಾಜ್ಯ ಸರ್ಕಾರಗಳು ಹತ್ತು ಹಲವು ಸೌಲಭ್ಯಗಳನ್ನು ಕಲ್ಪಿಸುತ್ತಿದೆ. ಆದರೆ, ಜಿಲ್ಲೆಯಲ್ಲಿ ಜಾಗೃತಿಯ ಕೊರತೆಯಿಂದ ಕಾರ್ಮಿಕರು ಸೌಲಭ್ಯ ಪಡೆಯುತ್ತಿಲ್ಲ. ಈ ಹಿನ್ನೆಲೆಯಲ್ಲಿ ಕಾರ್ಮಿಕರು ಮಂಡಳಿಗೆ ನೋಂದಾಯಿಸಿಕೊಂಡು ಪ್ರಯೋಜನ ಪಡೆದುಕೊಳ್ಳಬೇಕು ಎಂದು ಕರೆ ನೀಡಿದರು.
600 ಕಾರ್ಡ್ ವಿತರಣೆ: ಪ್ರಸ್ತುತ ವರ್ಷ ಸಂಘದಿಂದ ಹೊಸದಾಗಿ 600 ಕಾರ್ಡ್ ವಿತರಣೆ ಮಾಡಲಾಗಿದೆ. 400 ಕಾರ್ಡ್ ವಿತರಿಸುವ ಪ್ರಕ್ರಿಯೆ ಈಗಾಗಲೇ ಚಾಲನೆಯಲ್ಲಿದೆ ಎಂದು ತಿಳಿಸಿದರು.
ಮಂಡಳಿಯಲ್ಲಿ ನೋಂದಾಯಿಸಿ ಕೊಂಡರೆ ಕಾರ್ಮಿಕರಿಗೆ 12 ವಿವಿಧ ಸೌಲಭ್ಯ ದೊರೆಯುತ್ತದೆ. ಒಳರೋಗಿಯಾಗಿ ಚಿಕಿತ್ಸೆ ಪಡೆಯಲು 6 ಸಾವಿರದವರೆಗೆ ಧನ ಸಹಾಯ, ಅಪಘಾತ ಪರಿಹಾರ, ಗಂಭೀರ ಸ್ವರೂಪದ ಕಾಯಿಲೆಗಳಿಗೆ ಚಿಕಿತ್ಸೆ, ಅಂಗವೈಕಲ್ಯಕ್ಕೆ ತುತ್ತಾಗುವ ಕಾರ್ಮಿಕರಿಗೆ ನೆರವು, ಫಲಾನುಭವಿ ಮೃತಪಟ್ಟಾಗ ಅಂತ್ಯಕ್ರಿಯೆಗೆ 4 ಸಾವಿರ ಧನ ಸಹಾಯ ಹಾಗೂ 50 ಸಾವಿರ ಎಕ್ಸ್‌ಗ್ರೇಶಿಯಾ ದೊರೆಯಲಿದೆ ಎಂದರು.
ನೋಂದಾಯಿತ ಫಲಾನುಭವಿಯ ಇಬ್ಬರ ಮಕ್ಕಳ ವಿದ್ಯಾಭ್ಯಾಸಕ್ಕೆ ಧನ ಸಹಾಯ, ನಿರ್ಮಾಣ ಕೆಲಸಗಳಿಗೆ ಸಂಬಂಧಿಸಿದ ಉಪಕರಣ ಖರೀದಿಗೆ ಆರ್ಥಿಕ ನೆರವು, ಪಿಂಚಣಿ ಸೌಲಭ್ಯ, ಮನೆ ಕಟ್ಟಲು ಧನ ಸಹಾಯ ಸಿಗಲಿದೆ ಎಂದು ಮಾಹಿತಿ ನೀಡಿದರು.ಸುದ್ದಿಗೋಷ್ಠಿಯಲ್ಲಿ ಸಂಘದ ಪ್ರಮುಖರಾದ ನಗರದ ಮಹದೇವಪ್ಪ, ರಘು, ಮೋಹನ್ ಮತ್ತಿತರರು ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

