ಶಿವಮೊಗ್ಗ

ಹೊಸಬಾಳೆ ದತ್ತಾತ್ರೇಯ ಮನೆಗೆ ಮುಖಂಡರ ಭೇಟಿ

Published On :

ಕ.ಪ್ರ.ವಾರ್ತೆ ಟಿ ಸೊರಬ ಟಿ  ಡಿ.24
ಆರ್‌ಎಸ್‌ಎಸ್ ಸಹ ಸರ ಕಾರ್ಯವಾಹ ಹೊಸಬಾಳೆ ದತ್ತಾತ್ರೇಯ ಅವರ ಸೊರಬ ಮನೆಗೆ ಮಂಗಳವಾರ ಆರ್‌ಎಸ್‌ಎಸ್ ಸರ ಕಾರ್ಯವಾಹ ಭಯ್ಯಾಜಿ ಜೋಷಿ, ಪ್ರಮುಖರಾದ ನ. ಕೃಷ್ಣಪ್ಪ, ಸಂಸ್ಕೃತ ಭಾರತಿ ರಾಷ್ಟ್ರೀಯ ಮಹಾಮಂತ್ರದ ದಿನೇಶ್ ಕಾಮತ್, ಕರ್ನಾಟಕ ದಕ್ಷಿಣ ಪ್ರಾಂತ ಪ್ರಚಾರಕ ಮುಕುಂದ, ಕರ್ನಾಟಕ ಉತ್ತರ ಪ್ರಾಂತ ಪ್ರಚಾರಕ ಶಂಕರಾನಂದ, ಪ್ರಚಾರಕ ದ.ಮ. ರವೀಂದ್ರ, ಪ್ರಾಂತ ಬೌದ್ಧಿಕ್ ಪ್ರಮುಖ ಪಟ್ಟಾಭಿರಾಮ ಆಗಮಿಸಿ, ಕುಟುಂಬಕ್ಕೆ ಸಾಂತ್ವನ ಹೇಳಿದರು.
ಬಿಜೆಪಿಯ ಶಾಸಕ ಅರವಿಂದ ಲಿಂಬಾವಳಿ ಹಾಗೂ ಸಭಾಪತಿ ಡಿ.ಎಚ್. ಶಂಕರಮೂರ್ತಿ ಆಗಮಿಸಿ, ಹೊಸಬಾಳೆ ದತ್ತಾತ್ರೇಯ ಅವರ ತಾಯಿ ಮೀನಾಕ್ಷಮ್ಮ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಿದರು.
ಕ್ಲಸ್ಟರ್ ಮಟ್ಟದ ಕಲಿಕೋತ್ಸವ
ಭದ್ರಾವತಿ: ಮಕ್ಕಳ ಕಲಿಕಾ ಪ್ರಗತಿಗೆ ಪೂರಕವಾದ ವಾತಾವರಣ ನಿರ್ಮಾಣಕ್ಕೆ ಕಲಿಕೋತ್ಸವ ಕಾರ್ಯಕ್ರಮ ಅತ್ಯಗತ್ಯ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಟಿ.ಎನ್. ಸೋಮಶೇಖರಯ್ಯ ಹೇಳಿದರು.
ನಗರದ ಹೊಸಮನೆ ಕ್ಲಸ್ಟರ್ ವಿಭಾಗದ 10 ಪ್ರಾಥಮಿಕ ಶಾಲೆಗಳು ಹೊಸಮನೆಯ ಪ್ರಾಥಮಿಕ ಸರ್ಕಾರಿ ಶಾಲೆಯಲ್ಲಿ ಏರ್ಪಡಿಸಿದ್ದ ಕಲಿಕೋತ್ಸವದಲ್ಲಿ ಅವರು, ಸರ್ಕಾರಿ ಶಾಲೆಗಳ ಮಕ್ಕಳು ಪಠ್ಯ ಪುಸ್ತಕದ ವಿಷಯಗಳನ್ನು ಹೆಚ್ಚು ಹೆಚ್ಚು ಮನವರಿಕೆ ಮಾಡಿಕೊಳ್ಳಲು ಈ ರೀತಿ ಕಾರ್ಯಕ್ರಮಗಳಲ್ಲಿ ಅವರನ್ನು ತೊಡಗಿಸಿಕೊಳ್ಳುವಂತೆ ಶಿಕ್ಷಕರು ಮಕ್ಕಳಿಗೆ ಹುರಿದುಂಬಿಸಬೇಕು ಎಂದರು.
ಸೋಮಶೇಖರಪ್ಪ, ಸಿರಿಯೂರು ಶಾಲೆ ಶಿಕ್ಷಕ ಸತ್ಯನಾರಾಯಣ ಭಟ್ ಅವರನ್ನು ಸನ್ಮಾನಿಸಲಾಯಿತು. ಅಧ್ಯಕ್ಷತೆಯನ್ನು ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಚನ್ನಕೇಶವ ವಹಿಸಿದ್ದರು. ನಗರಸಭಾ ಸದಸ್ಯೆ ಶಾಂಭವಿ ರಂಗನಾಥ್, ನಾರಾಣಪ್ಪ, ಹಾಲಮ್ಮ ಸೋಮಶೇಖರಪ್ಪ, ಆನಂದ್ ಕನಸು ಕುಮಾರ್, ಮುಖ್ಯ ಶಿಕ್ಷಕಿ ಭಾರತಿ ಮತ್ತಿತರು ಇದ್ದರು.
ನಾಳೆಯಿಂದ ಹೊಂಗಿರಣೋತ್ಸವ
ಸಾಗರ: ತಾಲೂಕಿನ ಅಮಟೆಕೊಪ್ಪದಲ್ಲಿರುವ ಹೊಂಗಿರಣ ಪದವಿಪೂರ್ವ ಕಾಲೇಜು ಹಾಗೂ ಹೊಂಗಿರಣ ಪ್ರಾಥಮಿಕ ಮತ್ತು ಪ್ರೌಢಶಾಲೆಯಲ್ಲಿ ಡಿ.26ರಿಂದ 29ರ ವರೆಗೆ ಹೊಂಗಿರಣೋತ್ಸವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಡಿ.26ರ ಸಂಜೆ ದಶಮಾನೋತ್ಸವದ ಸಮಾರೋಪ ನಡೆಯಲಿದ್ದು, ವಿಧಾನಪರಿಷತ್ ಸದಸ್ಯ ಪಿ.ವಿ. ಕೃಷ್ಣಭಟ್ಟ, ಮೈಸೂರಿನ ನಿವೃತ್ತ ಪ್ರಾಂಶುಪಾಲರಾದ ಶೋಭಾ, ಕಾಗೋಡು ಅಣ್ಣಪ್ಪ ಪಾಲ್ಗೊಳ್ಳವರು. ಡಿ.27ರಂದು ಇನ್ಫೋಸಿಸ್‌ನ ಅಶೋಕ ಹೆಗಡೆ, ಬರಹಗಾರ್ತಿ ಅಕ್ಷುಭಿತಾ ಅವರ ಉಪಸ್ಥಿತಿಯಲ್ಲಿ ಕಥೋತ್ಸವ ನಡೆಯಲಿದೆ. ಸಂಜೆಯ ಅನಿಕೇತನದಲ್ಲಿ ಪಿ.ಪದ್ಮಾವತಿ ಉಪಸ್ಥಿತರಿರುವರು. ಡಿ.28ರಂದು ನಡೆಯಲಿರುವ ವಿಜ್ಞಾನೋತ್ಸವದಲ್ಲಿ ಡಾ. ನಾ. ಸೋಮೇಶ್ವರ, ಪದವಿಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕಿ ಇಂದುಮತಿ, ಸ್ಪೇಸ್ ಜಿಯೋಟೆಕ್‌ನ ಡಾ. ಎಲ್.ಜಿ. ಅಶ್ವತ್ಥ್ ನಾರಾಯಣ ಪಾಲ್ಗೊಳ್ಳಲಿದ್ದಾರೆ. ಕಾರ್ಯಕ್ರಮದ ಸಮಾರೋಪದಂದು ಶಿವಮೊಗ್ಗದ ಸಂಧ್ಯಾ ಕಾವೇರಿ ಸಕಾರಾತ್ಮಕ ಪಾಲಕತ್ವ ಕುರಿತು ಮಾತನಾಡಲಿದ್ದು ಚಿತ್ರನಟ, ಕಲಾನಿರ್ದೇಶಕ ಅರುಣ್ ಸಾಗರ್, ಪತ್ರಕರ್ತ ಪದ್ಮರಾಜ ದಂಡಾವತಿ, ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್‌ನ ರಮೇಶ ಶಾಸ್ತ್ರಿ ಪಾಲ್ಗೊಳ್ಳಲಿದ್ದಾರೆ ಎಂದು ಪ್ರಾಂಶುಪಾಲೆ ಶೋಭಾ ರವೀಂದ್ರ ತಿಳಿಸಿದ್ದಾರೆ.
ನಾಳೆ ಬಂಗಾರಪ್ಪ ಪುಣ್ಯಸ್ಮರಣೆ
ಸೊರಬ: ಪಟ್ಟಣದ ಬಂಗಾರಧಾಮದಲ್ಲಿ ಡಿ.26ರಂದು ಮಾಜಿ ಮುಖ್ಯಮಂತ್ರಿ ಎಸ್. ಬಂಗಾರಪ್ಪ ಅವರ ಎರಡನೇ ಪುಣ್ಯಸ್ಮರಣೆ ಪ್ರಯುಕ್ತ ಕಲ್ಪವೃಕ್ಷ ಕಾರ್ಯಕ್ರಮದಡಿ ತೆಂಗಿನ ಸಸಿ ವಿತರಿಸುವ ಹಾಗೂ ಇಲ್ಲಿನ ಬಂಗಾರಧಾಮದಲ್ಲಿ ಸ್ಮರಣ ಮಂದಿರ ನಿರ್ಮಿಸಲು ಶಂಕುಸ್ಥಾಪನೆ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿರುವುದಾಗಿ ಎಸ್. ಬಂಗಾರಪ್ಪ ಫೌಂಡೇಶನ್ ಪ್ರಕಟಣೆಯಲ್ಲಿ ತಿಳಿಸಿದೆ.ಶಂಕುಸ್ಥಾಪನಾ ಕಾರ್ಯಕ್ರಮಕ್ಕೆ ಬಂಗಾರಪ್ಪ ಅವರ ಬಹು ದೊಡ್ಡ ಶಕ್ತಿಯಾಗಿದ್ದ ಅಭಿಮಾನಿಗಳೆ ಮುಖ್ಯ ಅತಿಥಿಗಳು ಎಂದಿದ್ದಾರೆ. ಸಂಜೆ ನಡೆಯುವ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಸ್ಥಳೀಯ ಕಲಾವಿದರೊಂದಿಗೆ ಚಿತ್ರನಟ ಶಿವರಾಜಕುಮಾರ್ ಪಾಲ್ಗೊಳ್ಳಲಿದ್ದಾರೆ.
ದೀಪ ಲಕ್ಷ್ಮೀ ಪೂಜೆ
ಶಿವಮೊಗ್ಗ: ಕೋಟೆ ಶ್ರೀ ಮಾರಿಕಾಂಬ ದೇವಸ್ಥಾನದಲ್ಲಿ ಡಿ.27ರಂದು ಸಂಜೆ 5.30ಕ್ಕೆ ಶ್ರೀ ದೇವಿಯ ಸನ್ನಿಧಿಯಲ್ಲಿ ಮಹಿಳೆಯರಿಂದ ದೀಪ ಲಕ್ಷ್ಮೀ ಪೂಜೆ ಏರ್ಪಡಿಸಿದೆ. ರೋಜಾಷಣ್ಮುಗಂ ಗುರುಸ್ವಾಮಿ ಅವರ ನೇತೃತ್ವದಲ್ಲಿ ಧಾರ್ಮಿಕ ಪೂಜಾ ವಿಧಾನ ನಡೆಯುವುದು. 50 ಜನ ಮಹಿಳೆಯರಿಗೆ ಮಾತ್ರ ಅವಕಾಶವಿದೆ. ಸಾರ್ವಜನಿಕರು ಪಾಲ್ಗೊಳ್ಳುವಂತೆ ದೇವಾಲಯದ ಕೆ.ಬಿ. ರಾಮಪ್ಪ ತಿಳಿಸಿದ್ದಾರೆ.
ನಾಳೆ ಪುಣ್ಯಸ್ಮರಣೆ
ಸಾಗರ: ಸೊರಬದಲ್ಲಿ ಡಿ.26ರಂದು ಮಾಜಿ ಮುಖ್ಯಮಂತ್ರಿ ಎಸ್.ಬಂಗಾರಪ್ಪನವರ ಎರಡನೇ ಪುಣ್ಯ ಸ್ಮರಣೆ ಕಾರ್ಯಕ್ರಮ ನಡೆಯಲಿದ್ದು, ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕೆಂದು ತಾಲೂಕು ಬಂಗಾರಪ್ಪ ಅಭಿಮಾನಿ ಬಳಗ ಕೋರಿದೆ.
ಅಂದು ಬೆಳಗ್ಗೆ 10ಕ್ಕೆ ಸೊರಬದ ಬಂಗಾರಧಾಮದಲ್ಲಿ ಪುಣ್ಯಸ್ಮರಣೆ ಕಾರ್ಯಕ್ರಮ ನಡೆಯಲಿದ್ದು, ಈ ಸಂದರ್ಭದಲ್ಲಿ ಬಂಗಾರಪ್ಪ ಅವರ ನೆನಪು ಸದಾ ಹಸಿರಾಗಿರಿಸುವ ನಿಟ್ಟಿನಲ್ಲಿ ಕಲ್ಪವೃಕ್ಷ ಕಾರ್ಯಕ್ರಮದಡಿ ಸಾರ್ವಜನಿಕರಿಗೆ ಉಚಿತವಾಗಿ ತೆಂಗಿನ ಸಸಿ ವಿತರಣೆ ಹಾಗೂ ಸ್ಮರಣ ಮಂದಿರ ನಿರ್ಮಾಣ ಪ್ರಾರಂಭೋತ್ಸವ ಮತ್ತು ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ. ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಹೆಸರಾಂತ ಚಲನಚಿತ್ರ ನಟ ಶಿವರಾಜಕುಮಾರ್ ಪಾಲ್ಗೊಳ್ಳಲಿದ್ದಾರೆ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.