ಜಿಎಸ್ಎಸ್ ವಿಚಾರಧಾರೆ ಸಮಾಜಕ್ಕೆ ಬುನಾದಿ
ಕ.ಪ್ರ.ವಾರ್ತೆ ಟಿ ಸೊರಬ ಟಿ ಡಿ.29
ಉನ್ನತ ಪರಿಕಲ್ಪನೆಗಳು, ಭಾವಪೂರ್ಣ ಅನಾವರಣ ಕವಿಗಳಿಂದ ಮಾತ್ರ ಸಾಧ್ಯ, ಈ ಸಾಲಿನಲ್ಲಿ ಶಿವರುದ್ರಪ್ಪನವರ ವಿಚಾರಧಾರೆಗಳು, ಮಾನವೀಯ ಮೌಲ್ಯಗಳು ಸದೃಢ ಸಮಾಜಕ್ಕೆ ಬುನಾದಿಯಾಗಿವೆ. ಪರಿಪಕ್ವ ಮನಸ್ಸಿನ ಕಲ್ಪನೆಗಳಾಗಿವೆ ಎಂದು ಜಡೆ ಸಂಸ್ಥಾನ ಮಠದ ಡಾ.ಮಹಾಂತ ಸ್ವಾಮಿಗಳು ತಿಳಿಸಿದರು.
ಪಟ್ಟಣದ ಮುರುಘಾಮಠ ಆವರಣದಲ್ಲಿ ವೀರಶೈವ ಸಮಾಜದಿಂದ ರಾಷ್ಟ್ರಕವಿ ಡಾ.ಜಿ.ಎಸ್.ಶಿವರುದ್ರಪ್ಪನವರಿಗೆ ಹಮ್ಮಿಕೊಂಡಿದ್ದ ನುಡಿನಮನ ಕಾರ್ಯಕ್ರಮದ ದಿವ್ಯ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.
ಮನುಷ್ಯತ್ವದ ತತ್ವಗಳ ಹಣತೆಯನ್ನು ಹಚ್ಚಿದ ಕವಿ ಜಿಎಸ್ಎಸ್ ಸಾಮಾಜಿಕ ಸ್ವಾಸ್ಥ್ಯವನ್ನು ಕಾಪಾಡುವಲ್ಲಿ ಪ್ರೇಮ ಬಾಂಧವ್ಯ ಬೆಸೆದವರು ಎಂದು ತಾಲೂಕು ವೀರಶೈವ ಸಮಾಜದ ಅಧ್ಯಕ್ಷ ಇಂದೂಧರ ಒಡೆಯರ್ ತಿಳಿಸಿದರು.
ಜಿಎಸ್ಎಸ್ ಶಾರೀರಿಕವಾಗಿ ನಮ್ಮೊಂದಿಗಿಲ್ಲ. ಆದರೆ, ಅವರ ಭಾವಗೀತೆಗಳು ಎಂದಿಗೂ ಜನಮನದಲ್ಲಿ ಜೀವಂತವಾಗಿರುತ್ತವೆ ಎಂದು ವಕೀಲ ಎಂ.ನಾಗಪ್ಪ ಹೇಳಿದರು.
ವಿಶ್ವಕರ್ಮ ಸಮಾಜದ ಅಧ್ಯಕ್ಷ ಡಿ.ಕೆ.ಆಚಾರ್, ಕೃಷಿಕ ಬಸವರಾಜಗೌಡ ಮಾತನಾಡಿದರು. ಕೋಲ್ಗುಣಸಿ ನಂದಿನಿ ಜಯಪ್ರಕಾಶ್, ಲಯನ್ಸ್ ಜಿಲ್ಲಾ ಆರೋಗ್ಯ ಸಂಯೋಜಕ ನಾಗರಾಜಗೌಡ, ನಿಜಗುಣ, ಪಾಲ್ಗೊಂಡಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

