ಅಡಕೆ ಹಾನಿಕಾರಕ ಎಂಬ ವರದಿ ಹಿಂಪಡೆಯಿರಿ
ತೀರ್ಥಹಳ್ಳಿ: ಅಡಕೆ ಬೆಳೆಗಾರರ ರಕ್ಷಣೆಗೆ ಸಂಘಟಿತ ಹೋರಾಟ ಅವಶ್ಯ. ಅಡಕೆ ನಿಷೇಧ ಇಲ್ಲ, ಇದೆ ಎನ್ನುವ ಬಗ್ಗೆ ಪತ್ರಿಕಾ ಹೇಳಿಕೆಗಳು ಸಾಕು. ಕ್ರಮಬದ್ಧ ಕಾರ್ಯಾಚರಣೆ ಜಾರಿಗೆ ಬರಬೇಕು. ಸುಪ್ರಿಂಕೋರ್ಟಿಗೆ ನೀಡಿರುವ ಅಡಕೆ ಹಾನಿಕಾರಕ ಎಂಬ ವರದಿ ಹಿಂಪಡೆಯಬೇಕು ಎಂದು ಅಪೆಕ್ಸ್ ಬ್ಯಾಂಕ್ ಅಧ್ಯಕ್ಷ ಆರ್.ಎಂ. ಮಂಜುನಾಥ ಗೌಡ ಹೇಳಿದರು.
ಸಹಕಾರಿ ವೇದಿಕೆ ನೇತೃತ್ವದಲ್ಲಿ ಹಮ್ಮಿಕೊಂಡಿದ್ದ ಬೃಹತ್ ಪ್ರತಿಭಟನಾ ಸಭೆಯಲ್ಲಿ ಮಾತನಾಡಿದ ಅವರು, ಇದು ಹೋರಾಟದ ಮೊದಲ ಹಂತ. ಈಗಾಗಲೇ ಕೇಂದ್ರ ಸರ್ಕಾರವೇ ನೇಮಿಸಿದ್ದ ಗೋರಕ್ ಸಿಂಗ್ ಸಮಿತಿ ನೀಡಿದ್ದ ವರದಿ ಅಡಕೆ ಬೆಳೆಗಾರರ ರಕ್ಷಣೆಗೆ ಒದಗಿಬಂದಿದೆ. ಆದರೆ, ವರದಿಯ ಅನುಷ್ಠಾನ ಆಗುತ್ತಿಲ್ಲ. ಮಾ.31 ರೊಳಗೆ ಇದು ಜಾರಿಗೆ ಬರಬೇಕು. ಇಲ್ಲದಿದ್ದರೆ ಅಡಕೆ ಬೆಳೆಗಾರರ ಹಿತರಕ್ಷಣೆ ಬಗ್ಗೆ ಹೋರಾಟವನ್ನು ತೀವ್ರಗೊಳಿಸಲಾಗುವುದು ಎಂದರು.
ಅಡಕೆ ಬೆಳೆಗಾರರ ಸಂಘಟನಾ ಮುಖಂಡ ಸಾಗರದ ಬಿ.ಆರ್.ಜಯಂತ್, ರೈತ ಮುಖಂಡ ಕೆ.ಟಿ.ಗಂಗಾಧರ್ ್ಕೇಂದ್ರ ಸರ್ಕಾರದ ಕ್ರಮವನ್ನು ಖಂಡಿಸಿದರು. ಸಹ್ಯಾದ್ರಿ ಸಂಸ್ಥೆಗಳ ಅಧ್ಯಕ್ಷ, ಸಹಕಾರಿ ಎಚ್.ಎನ್. ವಿಜದೇವ್, ಕೆಳಕೆರೆ ದಿವಾಕರ್, ನಾಕುಂಜಿ ಸುಧಾಕರ್ ್ಮತ್ತಿತರರು ಉಪಸ್ಥಿತರಿದ್ದರು. ಸಹಸ್ರಾರು ಅಡಕೆ ಬೆಳೆಗಾರರು ಪ್ರತಿಭಟನಾ ಮೆರವಣಿಗೆ, ಸಭೆಯಲ್ಲಿ ಪಾಲ್ಗೊಂಡಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

