ಇಂದಿನಿಂದ ಕೈವಲ್ಯ ಉಪನಿಷತ್ ಉಪನ್ಯಾಸ
ಶಿವಮೊಗ್ಗ: ನಗರದ ಚಿನ್ಮಯ ಮಿಷನ್ ಡಿ.30 ರಿಂದ ಜ.5 ರವರೆಗೆ ಪ್ರತಿನಿತ್ಯ ಸಂಜೆ 6.30 ಗಂಟೆಗೆ ಕುವೆಂಪು ರಂಗಮಂದಿರದಲ್ಲಿ ಭೂಪಾಳಂ ಶಂಕರ ನಾರಾಯಣ ಸ್ಮರಣಾರ್ಥ ಶ್ರೀಸ್ವಾಮಿ ಬ್ರಹ್ಮಾನಂದ ಸರಸ್ವತಿ ಅವರಿಂದ ಕೈವಲ್ಯ ಉಪನಿಷತ್ ಕುರಿತು ಪ್ರವಚನ ಮಾಲಿಕೆ ಹಮ್ಮಿಕೊಂಡಿದೆ.
ಬದುಕಿನ ಸಾರ್ಥಕತೆಯ ಕುರಿತು ಸತ್ಪಥ ತೋರುವ ಕೈವಲ್ಯ ಉಪನಿಷತ್ತಿನ ತತ್ವಸಾರ ಪ್ರತಿಯೊಬ್ಬರ ಬದುಕಿಗೂ ಅವಶ್ಯಕವಾಗಿದೆ. ಶ್ರೇಷ್ಠ ತಪಸ್ವಿಗಳೂ, ವಾಗ್ಮಿಗಳೂ ಆಗಿರುವ ಶ್ರೀಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ, ರಾಜ್ಯ ಚಿನ್ಮಯ ಮಿಷನ್ನಿನ ಸಚೇತಕ ಶಕ್ತಿಯಾಗಿ, ಜ್ಞಾನಯಜ್ಞಗಳ ಮೂಲಕ ರಾಜ್ಯಾದ್ಯಂತ ಚಿನ್ಮಯ ಜ್ಯೋತಿ ಎನಿಸಿದ್ದಾರೆ. ಕನ್ನಡ ಭಗವದ್ಗೀತೆ ಎಂದೇ ಕರೆಯಲ್ಪಟ್ಟಿರುವ ಡಿವಿಜಿ ಅವರ ಮಂಕುತಿಮ್ಮನ ಕಗ್ಗದ ತತ್ವ ಸಾರವನ್ನು ಪ್ರತಿಯೊಬ್ಬರ ಮನೆ ಹಾಗೂ ಮನಕ್ಕೂ ಮುಟ್ಟಿಸಿದ ಕೀರ್ತಿ ಅವರದ್ದಾಗಿದೆ. ಈ ಕಾರ್ಯಕ್ರಮದಲ್ಲಿ ಸಾರ್ವಜನಿಕರು ಪಾಲ್ಗೊಳ್ಳುವಂತೆ ಚಿನ್ಮಯ ಮಿಷನ್ ಅಧ್ಯಕ್ಷ ರಮೇಶ್ ಅವಧಾನಿ ತಿಳಿಸಿದ್ದಾರೆ.
ಪ್ರಾಧಿಕಾರ ಸಭೆ
ಶಿವಮೊಗ್ಗ: ಸಾರಿಗೆ ಇಲಾಖೆಯು ಜ. 6ರಂದು ಬೆಳಗ್ಗೆ 10.30ಕ್ಕೆ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶಿವಮೊಗ್ಗ ಜಿಲ್ಲಾ ಪ್ರಾದೇಶಿಕ ಸಾರಿಗೆ ಪ್ರಾಧಿಕಾರದ ಸಭೆ ಆಯೋಜಿಸಿದೆ. ಸಭೆಯಲ್ಲಿ ಆಸಕ್ತರು ಹಾಗೂ ಸಂಬಂಧಪಟ್ಟ ಮಜಲು ವಾಹನಗಳ ಪರವಾನಗಿದಾರರು ಭಾಗವಹಿಸುವಂತೆ ಪ್ರಾದೇಶಿಕ ಸಾರಿಗೆ ಪ್ರಾಧಿಕಾರದ ಕಾರ್ಯದರ್ಶಿ ತಿಳಿಸಿದ್ದಾರೆ.
ಅಪರಿಚಿತ ಶವ ಪತ್ತೆ
ಶಿವಮೊಗ್ಗ: ಬಸ್ ನಿಲ್ದಾಣದ ಸಮೀಪದ ಸಂತೃಪ್ತಿ ಹೋಟೆಲ್ ಮುಂಭಾಗದಲ್ಲಿ ಅನಾರೋಗ್ಯದಿಂದ ಬಳಲಿದ್ದ ಸುಮಾರು 60 ವರ್ಷ ವಯಸ್ಸಿನ ಅಪರಿಚಿತ ವ್ಯಕ್ತಿಯ ಶವ ಪತ್ತೆಯಾಗಿದೆ. ಮೃತ ವ್ಯಕ್ತಿಯು ದುಂಡುಮುಖ, ಎಣ್ಣೆಗೆಂಪು ಬಣ್ಣ, ನೆರೆ ಕೂದಲು, ಎದೆಯ ಬಲಭಾಗದಲ್ಲಿ ರಾಗಿಕಾಳು ಗಾತ್ರದ ಮಚ್ಚೆ ಇದೆ. ಮೃತನು ತುಂಬುತೋಳಿನ ಅಂಗಿ, ನೀಲಿ ಬಿಳಿ ಪಟ್ಟೆ ಪಟ್ಟೆ ಇರುವ ಟೀ ಶರ್ಟ್, ಬಿಳಿ ನೀಲಿ ಬಣ್ಣದ ಬರ್ಮುಡ ಚಡ್ಡಿ ಧರಿಸಿದ್ದಾರೆ. ಮೃತ ವ್ಯಕ್ತಿಯ ವಾರಸುದಾರರ ಬಗ್ಗೆ ಸುಳಿವು ಸಿಕ್ಕಲ್ಲಿ ಶಿವಮೊಗ್ಗ ದೊಡ್ಡಪೇಟೆ ಪೊಲೀಸ್ ಠಾಣೆಯ ಠಾಣಾಧಿಕಾರಿಯನ್ನು ಸಂಪರ್ಕಿಸಬಹುದಾಗಿದೆ.
ನಾಳೆ ಸಚಿವ ಕಿಮ್ಮನೆ ಆಗಮನ
ಭದ್ರಾವತಿ: ತಾಲೂಕು ಕಾಂಗ್ರೆಸ್ ಸಮಿತಿ ಮತ್ತು ಕಿಸಾನ್ ಹಾಗೂ ಕೃಷಿ ಕಾರ್ಮಿಕರ ವಿಭಾಗದ ವತಿಯಿಂದ ಡಿ.31ರಂದು ಪತ್ರಿಕಾ ಭವನದಲ್ಲಿ ಬೆಳಗ್ಗೆ 11 ಗಂಟೆಯಿಂದ ನಡೆಯುವ ಸಭೆಗೆ ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ಕರ್ನಾಟಕ ರಾಜ್ಯ ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ್ ಆಗಮಿಸಲಿದ್ದಾರೆ. ಮಾಜಿ ಸಚಿವ ಕುಮಾರ್ ಬಂಗಾರಪ್ಪ ಮತ್ತು ಜಿಲ್ಲಾ ಕಾಂಗ್ರೆಸ್ ಕೃಷಿ ಹಾಗೂ ಕಿಸಾನ್ ಕಾರ್ಮಿಕರ ವಿಭಾಗದ ಅಧ್ಯಕ್ಷ ನಗರದ ಮಹಾದೇವಪ್ಪ ಅವರುಗಳು ಆಗಮಿಸಲಿದ್ದು ಈ ಸಂದರ್ಭದಲ್ಲಿ ಭದ್ರಾವತಿ ತಾಲೂಕು ರೈತರು ಮತ್ತು ಕಾರ್ಮಿಕರ ಸಮಸ್ಯೆಗಳನ್ನು ಚರ್ಚಿಸಲಾಗುವುದು ಎಂದು ಭದ್ರಾವತಿ ತಾಲೂಕು ಕಾಂಗ್ರೆಸ್ ಸಮಿತಿಯ ಕಿಸಾನ್ ಮತ್ತು ಕೃಷಿ ಕಾರ್ಮಿಕರ ವಿಭಾಗದ ಅಧ್ಯಕ್ಷ ಎಚ್.ಎಸ್. ಶಂಕರರಾವ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

