ಶಿವಮೊಗ್ಗ

ಅರಣ್ಯ ಭೂಮಿ ರಕ್ಷಣೆಗೆ ಡಿಸಿ ಕೊಡುಗೆ

Published On :

ಶಿವಮೊಗ್ಗ: ಜಿಲ್ಲೆಯಲ್ಲಿ ಅಳಿದುಳಿದ ಅರಣ್ಯ ಭೂಮಿಯನ್ನು ರಕ್ಷಿಸಲು ನಿರ್ಗಮಿತ ಜಿಲ್ಲಾಧಿಕಾರಿ ಎಂ.ವಿ. ವೇದಮೂರ್ತಿಯವರು ವಿಶೇಷ ಕಾಳಜಿ ವಹಿಸಿರುವ ಸಂಗತಿಯು ಅವರ ಡಿಸಿಯಾಗಿನ ಕೊನೆಯ ದಿನ ಬಹಿರಂಗವಾಗಿದೆ.
   ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ತಮ್ಮ ಒಂದು ವರ್ಷದ ಶಿವಮೊಗ್ಗ ಡಿಸಿಯಾಗಿನ ಕಾರ್ಯವನ್ನು ವಿವರಿಸಿ, ಡಿಸಿಯಾಗಿ ಮುಂದುವರಿಯುವ ಅವಕಾಶವಿದ್ದರೆ ಏನೆಲ್ಲಾ ಕೆಲಸ ಕಾರ್ಯ ಮಾಡುತ್ತಿದ್ದೆ ಎಂಬ ಕಲ್ಪನೆಯನ್ನೂ ಬಿಡಿಸಿಟ್ಟರು.
2.50 ಲಕ್ಷ ಎಕರೆ ಒತ್ತುವರಿ: ಜಿಲ್ಲೆಯಲ್ಲಿ ಅಪಾರ ಪ್ರಮಾಣದ ಕಂದಾಯ ಹಾಗೂ ಅರಣ್ಯ ಭೂಮಿ ಒತ್ತುವರಿಯಾಗಿದೆ. ಸರಿಸುಮಾರು 2.50 ಲಕ್ಷ ಎಕರೆಯಷ್ಟು ಸರ್ಕಾರಿ ಭೂಮಿ ಒತ್ತುವರಿ ಮಾಡಿಕೊಳ್ಳಲಾಗಿದೆ. ತಾವು ಜಿಲ್ಲಾಧಿಕಾರಿಯಾಗಿ ಅಧಿಕಾರ ಸ್ವೀಕರಿಸಿದ ನಂತರ ಒತ್ತುವರಿ ತೆರವಿಗೆ ಪ್ರಾಮಾಣಿಕ ಕ್ರಮಕೈಗೊಂಡಿದ್ದೇನೆ. ಒತ್ತುವರಿಯಾಗಿದ್ದ ಸುಮಾರು 1.60 ಲಕ್ಷ ಎಕರೆ ಅರಣ್ಯ ಭೂಮಿ ಗುರುತಿಸಿ ಸಮರ್ಪಕ ದಾಖಲೆ ಸೃಷ್ಟಿಸಲಾಗಿದೆ. ಲೋಕ ಅದಾಲತ್‌ನ್ಯಾಯಾಧೀಶರೂ ಸಹ ಈ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ ಎಂದು ವೇದಮೂರ್ತಿ ಹೇಳಿದರು.
ಅರಣ್ಯ ಭೂಮಿ ರಕ್ಷಣೆಗೆ ಆದ್ಯತೆ:
ಅರಣ್ಯ ಭೂಮಿಯನ್ನು ರಕ್ಷಿಸುವುದು ನಮ್ಮ ಆದ್ಯತೆಯಾಗಿತ್ತು. ತಮ್ಮ ಈ ಕ್ರಮಕ್ಕೆ ರಾಜಕೀಯ ಪಕ್ಷಗಳು, ರೈತ ಪರ ಸಂಘಟನೆಗಳು ತೀವ್ರ ವಿರೋಧ ವ್ಯಕ್ತಪಡಿಸಿದವು. ಆದರೆ, ತಾವು ಯಾವುದೇ ವಿರೋಧಕ್ಕೆ ಮಣಿಯಲಿಲ್ಲ ಎಂದರು.
  ಶಿವಮೊಗ್ಗ, ಭದ್ರಾವತಿ ಹಾಗೂ ಶಿಕಾರಿಪುರ ತಾಲೂಕಿನಲ್ಲಿ ಅಪಾರ ಪ್ರಮಾಣದ ಅರಣ್ಯ ನಾಶವಾಗಿದೆ. ಇದರಿಂದ ಈ ತಾಲೂಕುಗಳಲ್ಲಿ ವರ್ಷದಿಂದ ವರ್ಷಕ್ಕೆ ಮಳೆಯ ಪ್ರಮಾಣ ಕಡಿಮೆಯಾಗುತ್ತಿದೆ.
ಮೊದಲ ಸ್ಥಾನ: 6. ನಕ್ಸಲ್ ಪೀಡಿತ ಪ್ರದೇಶದ ಅಭಿವೃದ್ಧಿ ವಿಚಾರದಲ್ಲಿ ಶಿವಮೊಗ್ಗ ಒಂದನೇ ಸ್ಥಾನದಲ್ಲಿದೆ. ಅದೇ ರೀತಿ ಎಪಿಕ್ ಕಾರ್ಡ್ ವಿತರಣೆಯಲ್ಲೂ ಮೊದಲ ಸ್ಥಾನ, ಬಿಪಿಎಲ್ ಕಾರ್ಡ್ ವಿತರಣೆಯಲ್ಲಿ ದ್ವಿತೀಯ ಸ್ಥಾನದಲ್ಲಿದೆ. ಮರಳು ನೀತಿ ಸಮರ್ಪಕ ಅನುಷ್ಠಾನವಾಗಿದೆ ಎಂದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.