ಅರ್ಜಿ ಆಹ್ವಾನ
ಶಿವಮೊಗ್ಗ: ಬ್ರಹ್ಮಾವರದ ರುಡ್ಸೆಟ್ ಸಂಸ್ಥೆ ಧರ್ಮಸ್ಥಳದ ಶ್ರೀ ಮಂಜುನಾಥೇಶ್ವರ ಎಜ್ಯುಕೇಶನಲ್ ಟ್ರಸ್ಟ್, ಸಿಂಡಿಕೇಟ್ ಮತ್ತು ಕೆನರಾ ಬ್ಯಾಂಕ್ ಆಶ್ರಯದಲ್ಲಿ ಜಿಲ್ಲೆಯ 18 ರಿಂದ 45 ವರ್ಷ ವಯೋವುತಿಯೊಳಗಿನ ವಿದ್ಯಾವಂತ ನಿರುದ್ಯೋಗಿಗಳಿಗೆ ವಿವಿಧ ವಿಷಯಗಳಲ್ಲಿ ಉಚಿತ ಸ್ವ-ಉದ್ಯೋಗ ತರಬೇತಿ ನೀಡಲು ಉದ್ದೇಶಿಸಿದ್ದು, ಆಸಕ್ತ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಮಾ.25ರಿಂದ ಏ.22 ರವರೆಗೆ ವಿವಿಧ ಕಂಪನಿಯ ಮೊಬೈಲ್ ರಿಪೇರಿ, ಏ.1ರಿಂದ ಏ.30ರ ವರೆಗೆ ವಿದ್ಯುತ್ ಚಾಲಿತ ಮೋಟಾರು ರಿವೈಂಡಿಂಗ್ ಮತ್ತು ಪಂಪ್ಸೆಟ್ ನಿರ್ವಹಣೆ, ತ್ರಿಚಕ್ರ ವಾಹನ ಸರ್ವಿಸ್, ಮೇ.17 ರಿಂದ 31ರವರೆಗೆ ಕಂಪ್ಯೂಟರ್ ಡಿಟಿಪಿ, ಮೇ 7 ರಿಂದ 27 ರವರೆಗೆ ಮಹಿಳೆಯರಿಗೆ ಸಿದ್ಧ ಉಡುಪು ತಯಾರಿಕೆ, ಜೂನ್ 3 ರಿಂದ ಜುಲೈ 17 ರವರೆಗೆ ಕಂಪ್ಯೂಟರ್ ಹಾರ್ಡ್ವೇರ್ ಮತ್ತು ನೆಟ್ವರ್ಕಿಂಗ್, ಜೂನ್ 10ರಿಂದ 15ರವರೆಗೆ ಕೋಳಿ ಸಾಕಾಣಿಕೆ, ಜೂನ್ 17 ರಿಂದ 22 ರವರೆಗೆ ಹೈನುಗಾರಿಕೆ, ಜೂನ್ 24 ರಿಂದ ಜುಲೈ 23ರವರೆಗೆ ಕಂಪ್ಯೂಟರ್ ಟ್ಯಾಲಿ, ಜುಲೈ 24 ರಿಂದ ಆಗಸ್ಟ್ 22ರವರೆಗೆ ಬ್ಯೂಟಿ ಪಾರ್ಲರ್ ಮತ್ತು ಆಗಸ್ಟ್ 2 ರಿಂದ 22ರವರೆಗೆ ಫೋಟೋಗ್ರಫಿ ಮತ್ತು ವೀಡಿಯೋಗ್ರಫಿ ತರಬೇತಿ ನೀಡಲಾಗುವುದು. ತರಬೇತಿ ಉಚಿತವಾಗಿರುತ್ತದೆ. ತರಬೇತಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಉಚಿತ ಊಟ ಮತ್ತು ವಸತಿ ವ್ಯವಸ್ಥೆ ಕಲ್ಪಿಸಲಾಗುವುದು. ಅಭ್ಯರ್ಥಿಗಳು ಸ್ವ-ಉದ್ಯೋಗ ಆರಂಭಿಸಲು ಉತ್ಸುಕರಾಗಿರಬೇಕು. ಕನ್ನಡ ಭಾಷೆ ಓದಲು ಮತ್ತು ಬರೆಯಲು ಬಲ್ಲವರಾಗಿರಬೇಕು. ಆಸಕ್ತರು ಅಗತ್ಯ ವಿವರಗಳೊಂದಿಗೆ ತಮ್ಮ ಅರ್ಜಿಯನ್ನು ನಿರ್ದೇಶಕರು, ರುಡ್ಸೆಟ್ ಸಂಸ್ಥೆ, 52ನೇ ಹೇರೂರು, ಬ್ರಹ್ಮಾವರ ಉಡುಪಿ ಜಿಲ್ಲೆ, ಇವರಿಗೆ ಕಳುಹಿಸಬೇಕು. ವಿವರಗಳಿಗಾಗಿ- 0820-2563455.
ಅಹವಾಲು ಸ್ವೀಕಾರ
ಶಿವಮೊಗ್ಗ: ಕರ್ನಾಟಕ ಲೋಕಾಯುಕ್ತ ಪೊಲೀಸ್ ಉಪಾಧೀಕ್ಷಕರು ಮತ್ತು ಪೊಲೀಸ್ ನಿರೀಕ್ಷಕರು ಫೆ. ಮಾಹೆಯ ನಿಗಧಿತ ದಿನಾಂಕಗಳಂದು ಜಿಲ್ಲೆಯ ಎಲ್ಲಾ ತಾಲೂಕುಗಳ ಪ್ರವಾಸಿ ಮಂದಿರಗಳಲ್ಲಿ ಹಾಜರಿದ್ದು, ಸಾರ್ವಜನಿಕರಿಂದ ಅಹವಾಲುಗಳನ್ನು ಸ್ವೀಕರಿಸಲಿದ್ದಾರೆ. ಪೊಲೀಸ್ ಉಪಾಧೀಕ್ಷ ಪಿ.ಓ. ಶಿವಕುಮಾರ್ ಹಾಗೂ ಕೆ. ಸಮೀವುಲ್ಲ, ಪೊಲೀಸ್ ಇನ್ಸ್ಪೆಕ್ಟರ್ ಫೆ. 13ರಂದು ಬೆ.10.30 ರಿಂದ 1.30 ರವರೆಗೆ ಭದ್ರಾವತಿ, ಫೆ. 14 ರಂದು ಬೆ.10.30 ರಿಂದ 1.30ರವರೆಗೆ ಸಾಗರ, ಫೆ. 14ರಂದು ಮ.3 ರಿಂದ 5.30ರವರೆಗೆ ಸೊರಬ, ಫೆ. 16ರಂದು ಬೆ.10.30 ರಿಂದ 1.30ರವರೆಗೆ ಶಿಕಾರಿಪುರದಲ್ಲಿ ಪೊಲೀಸ್ ಇನ್ಸ್ಪೆಕ್ಟರ್ ಲಕ್ಷ್ಮೀಕಾಂತ್ ಫೆ.12 ರಂದು ಬೆ.10.30 ರಿಂದ ತೀರ್ಥಹಳ್ಳಿ, ಹಾಗೂ ಮ.3 ರಿಂದ 5.30ರವರೆಗೆ ಹೊಸನಗರ ಪ್ರವಾಸಿ ಮಂದಿರದಲ್ಲಿ ಹಾಜರಿದ್ದು, ಸಾರ್ವಜನಿಕರಿಂದ ಅಹವಾಲು ಸ್ವೀಕರಿಸುವರು ಎಂದು ಕರ್ನಾಟಕ ಲೋಕಾಯುಕ್ತ ಪೊಲೀಸ್ ಉಪಾಧೀಕ್ಷಕರು ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

