ಶಿವಮೊಗ್ಗ

ಕಾವ್ಯದಲ್ಲಿ ಸತ್ಯ ಬಿಂಬಿಸುತ್ತಿಲ್ಲ: ಪ್ರೊ. ಅಶೋಕ

Published On :

ಶಿವಮೊಗ್ಗ: ಪ್ರಸ್ತುತ ದಿನಗಳಲ್ಲಿ ಸಾಹಿತಿ ತನ್ನ ಕಾವ್ಯದಲ್ಲಿ ಸತ್ಯವನ್ನು ಬಿಂಬಿಸುತ್ತಿಲ್ಲ. ಇದರಿಂದ ಸಾಹಿತ್ಯ ಓದುಗರ ಸಂಖ್ಯೆ ಕಡಿಮೆಯಾಗುತ್ತಿದೆ. ಸಾಹಿತ್ಯ ಓದುಗರ ಸಂಖ್ಯೆ ಹೆಚ್ಚಿಸಬೇಕಾದರೆ ಸಾಹಿತ್ಯದಲ್ಲಿ ಹೆಚ್ಚಿನ ಕೃಷಿ ಬೇಕಾಗಿದೆ ಎಂದು ವಿಮರ್ಶಕ ಪ್ರೊ.ಟಿ.ಪಿ. ಅಶೋಕ ಹೇಳಿದರು.
ನಗರದ ಕರ್ನಾಟಕ ಸಂಘದಲ್ಲಿ ನೀನಾಸಂ ಪ್ರತಿಷ್ಠಾನದಿಂದ ನಡೆದ ಡಾ. ಶಿವರಾಂ ಕಾರಂತರ ಸಾಹಿತ್ಯ ಅಧ್ಯಯನ ಶಿಬಿರದಲ್ಲಿ ಮಾತನಾಡಿದ ಅವರು, ಪ್ರಸ್ತುತ ದಿನಗಳಲ್ಲಿ ಸಾಹಿತ್ಯ ಲೋಕ ಹೀನ ಸ್ಥಿತಿಗೆ ಬಂದು ತಲುಪಿದೆ. ಮತ್ತೆ ಸಾಹಿತ್ಯವನ್ನು ಉನ್ನತೀಕರಿಸಬೇಕೆಂದರೆ ಸಾಹಿತ್ಯದ ದಿಕ್ಕುಗಳನ್ನು ಬದಲಿಸಬೇಕಾಗಿದೆ. ಈ ನಿಟ್ಟಿನಲ್ಲಿ ಸಾಹಿತಿಗಳು ಕಾರ್ಯ ನಿರ್ವಹಿಸುವುದು ಅಗತ್ಯವಾಗಿದೆ ಎಂದರು.
ಶಿವರಾಂ ಕಾರಂತರ ಸಾಹಿತ್ಯಗಳು ಕನ್ನಡ ಸಾಹಿತ್ಯಲೋಕಕ್ಕೆ ಪುನರುಜ್ಜೀವನ ನೀಡಿದ ಹಾಗೂ ಕನ್ನಡ ಭಾಷಾ ಲೋಕವನ್ನು ಉತ್ತುಂಗಕ್ಕೇರಿಸಿದ ಮಾಧ್ಯಮಗಳು ಎಂದರು.
ಸೃಜನಶೀಲ ಸಾಹಿತಿಗಳ ಸಂಖ್ಯೆ ಸಾಹಿತ್ಯ ಲೋಕದಲ್ಲಿ ತೀರಾ ವಿರಳ. ಈ ನಿಟ್ಟಿನಲ್ಲಿ ಕಾರಂತರು ತಾವು ಸೃಜನಶೀಲ ಸಾಹಿತಿ ಎಂದು ಕನ್ನಡ ಸಾರಸ್ವತ ಲೋಕಕ್ಕೆ ತೋರಿಸಿಕೊಟ್ಟಿದ್ದಾರೆ. ಅವರ ಸಾಹಿತ್ಯ ಹಾಗೂ ಭಾಷಾ ಶೈಲಿ ಕನ್ನಡ ಸಾಹಿತ್ಯಕ್ಕೊಂದು ಪುನರುಜ್ಜೀವನ ನೀಡುವ ಮಾಧ್ಯಮ ಎಂದರು.
ವೇದಿಕೆಯಲ್ಲಿ ಕರ್ನಾಟಕ ಸಂಘದ ಅಧ್ಯಕ್ಷ ಎಸ್.ವಿ. ತಿಮ್ಮಯ್ಯ, ಪ್ರೊ.ಎಂ.ಎಸ್. ನಾಗರಾಜ್‌ರಾವ್ ಮತ್ತಿತರರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.