ರೋಟರಿ ರಸಪ್ರಶ್ನೆ ಸ್ಪರ್ಧೆ: ಬಹುಮಾನ ವಿತರಣೆ
ಶಿವಮೊಗ್ಗ: ಹುಣಸಘಟ್ಟ ಸಾಹುಕಾರ್ ಮಲ್ಲಪ್ಪ ಗಿರಿಯಮ್ಮನವರ ಸ್ಮರಣಾರ್ಥ ರೋಟರಿ ಶಿವಮೊಗ್ಗ ಪೂರ್ವ ಮತ್ತು ಇಂಟರ್ಯಾಕ್ಟ್ ಕ್ಲಬ್, ಕೊಮ್ಮನಾಳ್ ಸರ್ಕಾರಿ ಪ್ರೌಢಶಾಲೆ ಆಶ್ರಯದಲ್ಲಿ ನಡೆದ ರೋಟರಿ ರಸಪ್ರಶ್ನೆ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.
ಅಬ್ಬಲಗೆರೆ ಸರ್ಕಾರಿ ಪ್ರೌಢಶಾಲೆ ವಿದ್ಯಾರ್ಥಿ ಎಂ.ಜಿ. ವಿನಯ, ಎಸ್. ಪೂರ್ಣಿಮಾ ಪ್ರಥಮ ಸ್ಥಾನ ಪಡೆದು ಪಾರಿತೋಷಕ, ನಗದು ಬಹುಮಾನ ತಮ್ಮದಾಗಿಸಿಕೊಂಡರು. ದ್ವಿತೀಯ ಸ್ಥಾನವನ್ನು ಪಿಳ್ಳಂಗೆರೆ ಸರ್ಕಾರಿ ಪ್ರೌಢಶಾಲೆ ವಿದ್ಯಾರ್ಥಿ ಎಸ್. ಸುಧಾ, ವಿದ್ಯಾಶ್ರೀ ಪಡೆದರೆ, ಕೊಮ್ಮನಾಳ್ನ ಸರ್ಕಾರಿ ಪ್ರೌಢಶಾಲೆ ವಿದ್ಯಾರ್ಥಿ ಬಿ.ಎನ್. ಪವನ್, ಜಿ.ಎ.ಪೂಜಾ 3ನೇ ಸ್ಥಾನಗಳಿಸಿದರು.
ಈ ವೇಳೆ ರೋಟರಿ ಅಧ್ಯಕ್ಷ ಕೆ.ಬಿ. ರವಿಶಂಕರ್, ಇಂಟರ್ಯಾಕ್ಟ್ ಕ್ಲಬ್ ಅಧ್ಯಕ್ಷ ಜಿ. ವಿಜಯ ಕುಮಾರ್, ರೋಟರಿ ಮಾಜಿ ಜಿಲ್ಲಾ ಗೌರ್ನರ್ ಎಚ್.ಎಲ್. ರವಿ. ಕಾರ್ಯದರ್ಶಿ ಎಂ.ಜಿ. ಕೇಶವಪ್ಪ, ಅಬ್ಬಲಗೆರೆ ಶಾಲೆಯ ದೈಹಿಕ ಶಿಕ್ಷಕ ನಿರಂಜನಮೂರ್ತಿ, ಸಂಚಾಲಕ ನಸರೋಜಿರಾವ್ ಮತ್ತಿತರರು ಈಸಂದರ್ಭದಲ್ಲಿ ಹಾಜರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

