ಶಿವಮೊಗ್ಗ

ಸೇವೆ ಇನ್ನರ್‌ವೀಲ್ ಧ್ಯೇಯ

Published On :

ಶಿವಮೊಗ್ಗ: ಅಗತ್ಯ ಇರುವವರನ್ನು ಗುರುತಿಸಿ ಕೈಲಾದ ಮಟ್ಟಿಗೆ ಸೇವೆ ಸಲ್ಲಿಸುವುದು ಇನ್ನರ್‌ವೀಲ್ ಸಂಸ್ಥೆಯ ಮುಖ್ಯ ಧ್ಯೇಯ ಎಂದು ಇನ್ನರ್‌ವೀಲ್ ಅಧ್ಯಕ್ಷೆ ಅನಿತಾ ರವಿಶಂಕರ್ ಹೇಳಿದರು. ಇನ್ನರ್‌ವೀಲ್ ಸಂಸ್ಥೆ ಕಾಳಿಕಾಂಬ ವೃದ್ಧ ವಿಧವೆಯವರ ವಿವಿದೋದ್ದೇಶ ಯೋಗ ಕ್ಷೇಮದ ಕೇಂದ್ರದಲ್ಲಿ ದಿ. ವಿಮಲಮ್ಮ ವಿರೂಪಾಕ್ಷ ಶೆಟ್ಟರು ಹಾಗೂ ದಿ. ಕೊಟ್ರಮ್ಮ ಸ್ಮರಣಾರ್ಥ ವೃದ್ಧ ವಿಧವೆಯರಿಗೆ ಸೀರೆ ಹಾಗೂ ಅಗತ್ಯ ವಸ್ತುಗಳನ್ನು ವಿತರಿಸಿ ಮಾತನಾಡಿದರು. ನಾವು ಮಾಡಿದ ಸೇವೆ ಸಾರ್ಥಕವಾಗಬೇಕಾದರೆ ಅಗತ್ಯ ಇರುವವರಿಗೆ ಮಾತ್ರ ಸೇವೆ ಮಾಡಬೇಕು. ತಮ್ಮ ತಂದೆ- ತಾಯಿಯವರ ಹೆಸರಿನಲ್ಲಿ ಸಾರ್ಥಕ ಸೇವೆ ಸಲ್ಲಿಸುವ ಅವಕಾಶಗಳನ್ನು ಸಂಘ ಸಂಸ್ಥೆಗಳು ಕಲ್ಪಿಸಿಕೊಡುತ್ತವೆ ಎಂದರು. ಬಿಂದು ವಿಜಯಕುಮಾರ್, ವೀಣಾ ಹರ್ಷ, ಸೌಭಾಗ್ಯ ಪ್ರಸನ್ನಕುಮಾರ್ ಮತ್ತಿತರರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.