ಪ್ರೇಮಿಗಳ ದಿನಕ್ಕಾಗಿ ಉಡುಗೊರೆ ರೆಡಿ
ಶಿವಮೊಗ್ಗ: ಪ್ರೇಮಿಗಳ ಸುಪ್ತ ಹೃದಯದಲ್ಲಿ ಬೆಚ್ಚಗೆ ಕುಳಿತ ಪ್ರೇಮ ಹಕ್ಕಿಗಳು ಗರಿಗೆದರಿ ಹಾಡಿ ನಲಿಯಲು ಮುಕ್ತವಾದ ದಿನ ಪ್ರೇಮಿಗಳ ದಿನ. ಆದಿ, ಅಂತ್ಯವಿಲ್ಲದ ಅವಿರತವಾಗಿ ಭಾವನೆಗಳ ಜೊತೆಗಿನ ಆಟವೇ ಪ್ರೀತಿ ಪ್ರೇಮ...
ಒಲವಿನ ಹಾದಿಯಲ್ಲಿ ಸಾಗುವ ಉತ್ಸಾಹಿಗಳಿಗೆ ಎಲ್ಲವೂ ಸುಂದರವಾಗಿ ಕಾಣುವ ದಿನವಿದು. ಈ ಹಿನ್ನೆಲೆಯಲ್ಲಿ ಪ್ರೇಮಿಗಳ ದಿನ ಹತ್ತಿರ ಬರುತ್ತಿದ್ದಂತೆ ಮಾರುಕಟ್ಟೆಯಲ್ಲಿ ಕೆಂಪು ಗುಲಾಬಿ, ಗ್ರಿಟಿಂಗ್ಸ್ ಹಾಗೂ ಉಡುಗೊರೆಗಳಿಗೆ ಭರ್ಜರಿ ಬೇಡಿಕೆ ಬಂದಿದೆ.
ಗ್ರಿಟಿಂಗ್ಸ್, ರೇಡಿಯಂ ಕಪಲ್ಸ್, ಡಾಲ್ಗಳ ಮಾರಾಟ ಜೋರಾಗಿದ್ದು, ಮಾರುಕಟ್ಟೆಗೆ ಹೊಸ ಕಳೆ ಬಂದಿದೆ. ಪ್ರೇಮಿಗಳ ಹಬ್ಬಕ್ಕೆ ಇನ್ನೂ ಎರಡು ದಿನದ ಮುಂಚೆಯೇ ಫ್ಯಾನ್ಸಿ ಹಾಗೂ ಹೂವಿನ ಅಂಗಡಿಗಳಲ್ಲಿ ಪ್ರೇಮಿಗಳ ಗಿಫ್ಟ್ಗಳು ಮಾರಾಟ ನಡೆದಿದೆ.
ಮಾರುಕಟ್ಟಗೆ: ಸುಮಾರು 100 ಕ್ಕೂ ಹೆಚ್ಚು ಮಾದರಿಯ ವಿವಿಧ ಉಡುಗೊರೆಗಳು ಈಗ ಮಾರುಕಟ್ಟೆಯಲ್ಲಿವೆ. ಆಂಟಿ ಕಪಲ್, ಹೊಲ್ಡಿಂಗ್ ಹ್ಯಾಂಡ್ಸ್, ಓಂ ಶಾಂತಿ ಓಂ ಸಿನಿಮಾ ಸಂಗೀತಾ ಇರುವುದು ಈ ಬಾರಿಯ ವಿಶೇಷ.
ಲವ್ಲಿ ಮ್ಯಾರಿಡ್ ಕಪಲ್, ಲವ್ ಕಪ್, ಲವ್ಗೇಮ್ಸ್ ಸೇರಿದಂತೆ ಇತರೆ ವಿಶೇಷ ಮಾದರಿಯ ಉಡುಗೊರೆಗಳು ಮಾರುಕಟ್ಟಗೆ ಬಂದಿದ್ದು, ಸುಮಾರು ರು.00 ರುಪಾಯಿನಿಂದ 1 ಸಾವಿರ ರುಪಾಯಿವರೆಗಿನ ಉಡುಗೊರೆಗಳು ಮಾರುಕಟ್ಟೆಯಲ್ಲಿ ಪ್ರೇಮಿಗಳ ಕೈಸೇರಲಿವೆ.
ಗ್ರಿಟಿಂಗ್ಸ್: ಫೋರ್ ಫೋಲ್ಡಿಂಗ್ಸ್, ತ್ರೆಡ್ ಕಾರ್ಡ್, ಲೇಟರ್ ಕಾರ್ಡ್, ಕಟಿಂಗ್ ಕಾರ್ಡ್ಗಳು ಸಾಮಾನ್ಯವಾಗಿತ್ತು. ಈ ಬಾರಿ ಸುಮಾರು 50 ರಿಂದ 1,500 ಸಾವಿರ ರುಪಾಯಿವರೆಗಿನ ಗ್ರಿಟಿಂಗ್ ಕಾರ್ಡ್ಗಳು ಮಾರುಕಟ್ಟೆಗೆ ಬಂದಿವೆ. ಅಲ್ಲದೇ, ಮೊದಲೇ ಪ್ರೇಮಿಗಳು ಇದೇ ರೀತಿಯ ಕಾರ್ಡ್ ಬೇಕು ಎಂದು ಆರ್ಡ್ರ್ ಮಾಡಿದ್ದಾರೆ. ಗ್ರಿಟಿಂಗ್ಸ್ನಲ್ಲಿ ವಿಶೇಷವಾಗಿ ಪ್ರೇಮಿಗಳ ಬಗ್ಗೆಗಿನ ಕವನಗಳು, ಶುಭಾಷಯ ಪತ್ರಗಳಿಗೆ ಹೆಚ್ಚು ಬೇಡಿಕೆ ಬಂದಿದೆ.
ಗುಲಾಬಿಗೆ ಬೇಡಿಕೆ: ಅಸ್ಸಾಂ, ಮೇಘಾಲಯ, ನಾಗಾಲ್ಯಾಂಡ್ಗಳಿಂದ ರೀಟೈಲ್ ದರದಲ್ಲಿ ಬೆಂಗಳೂರಿನ ಗುಲಾಬಿ ರಫ್ತು ಸಂಸ್ಥೆಯಿಂದ ಸುಮಾರು ಸಾವಿರಾರು ಕೆಂಪು ಗುಲಾಬಿಗಳು ರಫ್ತಾಗಿದೆ. ಪ್ರೇಮಿಗಳ ದಿನದಂದು ಇನ್ನೂ ಹೆಚ್ಚು ಗುಲಾಬಿಗಳಿಗೆ ಬೇಡಿಕೆ ಹೆಚ್ಚಾಗಿದೆ. ಹೆಚ್ಚಾಗಿ ನಾಗಾಲ್ಯಾಂಡ್ ಗುಲಾಬಿ ಹೂಗಳಿಗೆ ಬೇಡಿಕೆ ಇದ್ದು, ಪ್ರತಿ ಗುಲಾಬಿ ಹೂಗಳಿಗೆ 20 ರಿಂದ ರು.0 ರುಪಾಯಿ ಆಗುವ ಸಂಭವವಿದೆ. ಸದ್ಯ ಮಾರುಕಟ್ಟೆಯಲ್ಲಿ ಒಂದು ಗುಲಾಬಿ ಹೂವಿಗೆ 15 ರುಪಾಯಿ ಇದೆ.
ಇವರೇನಂತಾರೆ: ಕಳೆದ ಬಾರಿ ಮುತಾಲಿಕ್ ಅವರ ಸಂಘಟನೆ ನೀಡಿದ ಎಚ್ಚರಿಕೆಯ ಮಾತುಗಳಿಂದ ಪ್ರೇಮಿಗಳು ಕಳೆದ ಬಾರಿ ಪ್ರೇಮಿಗಳ ದಿನಕ್ಕೆ ಹೆಚ್ಚು ಒತ್ತು ನೀಡಿ ಆಚರಿಸಿಕೊಳ್ಳಲಿಲ್ಲ. ಆದ್ದರಿಂದ ಕಳೆದ ಬಾರಿ ಗುಲಾಬಿ ಹೂಗಳು ಮಾರುಕಟ್ಟೆಯಲ್ಲೇ ಉಳಿದುಕೊಂಡವು. ಆದರೆ, ಈ ಬಾರಿ ಯಾವುದೇ ಸಮಸ್ಯೆ ಇಲ್ಲ.
ಈಗಾಗಲೇ ಗುಲಾಬಿ ಹೂವಿಗೆ ಬೇಡಿಕೆ ಹೆಚ್ಚಾಗಿದ್ದು, ಗುಲಾಬಿ ಹೂಗಳ ಬೊಕೆ ಮಾಡುವಂತೆ 20 ಜನ ಆರ್ಡರ್ ಮಾಡಿದ್ದಾರೆ ಎನ್ನುತ್ತಾರೆ ಭದ್ರಾವತಿಯ ಹೂವಿನ ವ್ಯಾಪಾರಿ ಕುಮಾರ್.
ಗ್ರಿಟಿಂಗ್ಸ್ಗಳ ಬೇಡಿಕೆ ಸಾಮಾನ್ಯವಾಗಿದೆ. ಆದರೆ, ವಿಶೇಷ ರೀತಿಯ ಗಿಫ್ಟ್ಗಳಿಗೆ ಬೇಡಿಕೆ ಹೆಚ್ಚಾಗಿದ್ದು, ರೇಡಿಯಂ ಕಪಲ್ಸ್ ಉಡುಗೊರೆಗೆ ಬಾರಿ ಬೇಡಿಕೆ ಹೆಚ್ಚಾಗಿದೆ. ಅಲ್ಲದೇ ವಿಶೇಷ ರೀತಿಯ ಗ್ರಿಟಿಂಗ್ಸ್ ಮಾಡಿಕೊಡುವಂತೆ ಈಗಾಗಲೇ ಪ್ರೇಮಿಗಳು ಆರ್ಡ್ರ್ ಮಾಡಿದ್ದಾರೆ ಎನ್ನುತ್ತಾರೆ ಸಂದೇಶ್ ಗ್ರಿಟ್ ಆಂಡ್ ಗಿಫ್ಟ್ ಸೆಂಟರ್ ಮಾಲೀಕ ಗಜೇಂದ್ರ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

