ಸಾಮರಸ್ಯದ ಬದುಕಿಗೆ ಒತ್ತು ನೀಡಿ
ಹೊಸನಗರ: ಎಲ್ಲ ಧರ್ಮಗಳ ಸಾರ ಒಂದೆ. ಅದನ್ನರಿತು ಸಾಮರಸ್ಯದ ಬದುಕಿಗೆ ಒತ್ತು ನೀಡುವ ಅಗತ್ಯವಿದೆ ಎಂದು ಶಾಸಕ ಕಿಮ್ಮನೆ ರತ್ನಾಕರ್ ಅಭಿಪ್ರಾಯ ವ್ಯಕ್ತಪಡಿಸಿದರು.
ತಾಲೂಕಿನ ನಗರ ಸುಲ್ತಾನ್ ಜುಮ್ಮಾ ಮಸೀದಿ ಆವರಣದಲ್ಲಿ ಆಯೋಜಿಸಲಾಗಿದ್ದ ಮಿಲಾದ್ ಸಂಗಮ ಕಾರ್ಯಕ್ರಮ ಉದ್ಘಾಟಿಸಿ, ಎಲ್ಲಾ ಜಾತಿ, ಧರ್ಮ, ಸಂಸ್ಕೃತಿ ಬಿಂಬಿಸುವ ಭಾರತದ ವಿಶೇಷತೆಯನ್ನು ಅರ್ಥ ಮಾಡಿಕೊಂಡು ಅದರಂತೆ ವ್ಯವಹರಿಸಬೇಕಿದೆ ಎಂದರು.
ಮನುಷ್ಯ ಮನುಷ್ಯರ ನಡುವೆ, ಜಾತಿಗಳ ನಡುವೆ, ಧರ್ಮಗಳ ನಡುವೆ ವೀಷ ಬೀಜ ಬಿತ್ತುವ ಕಿಡಿಗೇಡಿಗಳ ಬಗ್ಗೆ ಸದಾ ಎಚ್ಚರದಿಂದಿರಬೇಕು. ಪರಸ್ಪರ ಸಾಮರಸ್ಯ, ಸಹಬಾಳ್ವೆಯಲ್ಲಿ ಸಿಗುವ ನೆಮ್ಮದಿಯ ಬದುಕು ನಮ್ಮದಾಗಬೇಕು. ಅಲ್ಲದೆ ಧರ್ಮಗಳಲ್ಲಿರುವ ಸಾರ ಹೊರತೆಗೆದು ಸಾಮರಸ್ಯ ಬೆಸೆಯುವ ಇಂತಹ ಕಾರ್ಯಕ್ರಮಗಳು ಹೆಚ್ಚಾಗಬೇಕು ಎಂದರು.
ಪ್ರಸಿದ್ಧ ವಾಗ್ಮಿ ಕಿಲ್ಲೂರು ಅಹಮದ್ ಷರೀಫ್ ಸಅದಿ, ತಮ್ಮ ಧರ್ಮವನ್ನು ಪ್ರೀತಿಸು, ಇತರ ಧರ್ಮವನ್ನು ಗೌರವಿಸು ಎಂಬ ಮಹಮದ್ ಪೈಗಂಬರ್ ನೀಡಿದ ಸಂದೇಶ ಇಡೀ ಲೋಕವೆ ಮೆಚ್ಚಿಕೊಂಡಿದೆ. ಮಹಿಳೆಯರ ಮೇಲೆ ಅತ್ಯಾಚಾರ ವೆಸಗುವವರನ್ನು ಗಲ್ಲಿಗೇರಿಸಬೇಕು, ಗಡಿಪಾರು ಮಾಡಬೇಕು ಎಂಬ ಘೋಷಣೆ ಈಗ ಕೇಳಿ ಬರುತ್ತಿದೆ. ಇದನ್ನು ಪೈಗಂಬರ್ ಅಂದೆ ಪ್ರತಿಪಾದಿಸಿದ್ದರು ಎಂದರು.
ದುಶ್ಚಟದಿಂದ ದೂರವಿರಿ: ಬದುಕನ್ನು ಬುಡಮೇಲು ಮಾಡುವ ವ್ಯಕ್ತಿತ್ವ ಹಾಳು ಮಾಡುವ ದುಶ್ಚಟದಿಂದ ಎಲ್ಲರು ದೂರವಿರಬೇಕು. ನಮ್ಮ ಬದುಕು, ವ್ಯಕ್ತಿತ್ವ ಇತರರಿಗೆ ಮಾದರಿಯಾಗಬೇಕು. ಅಮೇರಿಕಾ, ಪಾಕಿಸ್ತಾನ ಇತರ ದೇಶಕ್ಕಿಂತ ಭಾರತ ಸಂಸ್ಕೃತಿ ವೈಶಿಷ್ಠ್ಯಪೂರ್ಣವಾಗಿದ್ದು ಪ್ರೀತಿಸುವ, ರಕ್ಷಿಸುವ ಕೆಲಸ ಮಾಡಬೇಕಿದೆ ಎಂದರು.
ಸುಲ್ತಾನ ಜುಮ್ಮಾ ಮಸೀದಿ ಅಧ್ಯಕ್ಷ ದಾವೂದ್ ಸಾಬ್ ಅಧ್ಯಕ್ಷತೆ ವಹಿಸಿದ್ದರು.
ಧರ್ಮಗುರುಗಳಾದ ಮಜೀದ್ ಮುಸ್ಲಿಯಾರ್, ಮಜೀದ್ ಮುಸ್ಲಿಯಾರ್, ಮಹಮದ್ ಇಕ್ಬಾಲ್ ಮದನಿ, ಅಬ್ದುಲ್ ಲತೀಫ್ ಮದನಿ, ನೂರುದ್ದೀನ್ ನಈಮಿ, ಗ್ರಾಪಂ ಅಧ್ಯಕ್ಷ ಎಚ್.ವೈ. ಸತೀಶಗೌಡ, ಸದಸ್ಯ ನಾಗೇಶ್, ಹಜ್ಜುಸಾಬ್, ಮಹಮದ್, ಯಾಸೀನ್, ನೂಲಿಗ್ಗೇರಿ ಅಬ್ಬಾಸ್, ಹಾಜಿಸಾಬ್ ಸಮುದಾಯದ ಪ್ರಮುಖರು ಉಪಸ್ಥಿತರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

