ವಾರ್ಡ್ ಸಭೆಗೆ ಬಹಿಷ್ಕಾರ
ಹೊಸನಗರ: ಅಧಿಕಾರಿಗಳ ನಿರ್ಲಕ್ಷದ ಪರಿಣಾಮ ಗ್ರಾಮಸಭೆ, ವಾರ್ಡ್‌ಸಭೆಗಳು ಅರ್ಥ ಕಳೆದುಕೊಳ್ಳುತ್ತಿವೆ ಎಂದು ಆಕ್ರೋಶ ವ್ಯಕ್ತಪಡಿಸಿದ ಗ್ರಾಮಸ್ಥರು ವಾರ್ಡಸಭೆ ಬಹಿಷ್ಕರಿಸಿದ ಘಟನೆ ತಾಲೂಕಿನ ಮಾರುತಿಪುರ ಗ್ರಾಪಂಯಲ್ಲಿ ನಡೆದಿದೆ.
ಗ್ರಾಮಗಳ ಸಮಸ್ಯೆಗಳು ಅನಾವರಣಗೊಂಡು ಪರಿಹಾರ ಕಂಡುಕೊಳ್ಳುವ ಮಹತ್ವ ಹೊಂದಿರುವ ಗ್ರಾಮಸಭೆಗಳು ಅಧಿಕಾರಿಗಳು ಗೈರಾಗುವ ಮೂಲಕ ನಿರ್ಲಕ್ಷ ತೋರುತ್ತಿದ್ದಾರೆ ಎಂದು ಗ್ರಾಪಂ ಸದಸ್ಯ ಮಹಾಬಲೇಶ್ವರ ಆರೋಪಿಸಿದರು.
ಆರೋಪ: ಗ್ರಾಮಸಭೆ, ವಾರ್ಡ್‌ಸಭೆಗಳಲ್ಲಿ ಕೈಗೊಳ್ಳುವ ನಿರ್ಣಯಗಳ ಅನುಷ್ಠಾನಕ್ಕೆ ಹಿಂದೇಟು ಹಾಕುವ ಅಧಿಕಾರಿಗಳು ಉದ್ಯೋಗಖಾತ್ರಿ ಯೋಜನೆ ಮಂಜೂರಾತಿಯಲ್ಲಿ, ಅಭಿವೃದ್ಧಿ ಕಾರ್ಯದಲ್ಲಿ ಅನಗತ್ಯ ಕಿರಿಕಿರಿ ಮಾಡುತ್ತಿದ್ದಾರೆ. ಈ ಬಗ್ಗೆ ಪ್ರಶ್ನಿಸಲು ವಾರ್ಡ್ ಸಭೆಗೆ ಬಂದರೆ ಗೈರಾಗುವ ಮೂಲಕ ಅಧಿಕಾರಿಗಳು ಪಲಾಯನ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ಕಾಟಾಚಾರಕ್ಕಾಗಿ ಗ್ರಾಮ, ವಾರ್ಡ್ ಸಭೆಗಳು ನಡೆಯುತ್ತಿದ್ದು, ಇದರಿಂದ ಯಾವುದೇ ಪ್ರಯೋಜನವಿಲ್ಲ. ಅಧಿಕಾರಿಗಳ ನಿರ್ಲಕ್ಷ ಹೀಗೆ ಮುಂದುವರೆದರೆ ತಾಪಂ ಮುಂಭಾಗ ಪ್ರತಿಭಟನೆ ನಡೆಸುವುದು ಅನಿವಾರ್ಯ. ಅದರೊಳಗೆ ಎಚ್ಚೆತ್ತುಕೊಳ್ಳಲಿ ಎಂದು ಊರಿನ ಪ್ರಮುಖ ಭಾಸ್ಕರಶೆಟ್ಟಿ ಎಚ್ಚರಿಸಿದರು.
ಪ್ರತಿಭಟನೆಯಲ್ಲಿ ಕೆ.ಎಂ. ಭಾಸ್ಕರಶೆಟ್ಟಿ, ಅನಿತಾ, ಮುಕುಂದ, ಹಿರಿಯಪ್ಪ, ಚೈತ್ರಾ, ಲೋಕೇಶ್, ವೆಂಕಟೇಶ, ಮಂಜಪ್ಪ, ರಮೇಶ, ಸುರೇಂದ್ರಷ ಭದ್ರಪ್ಪ ಪಾಲ್ಗೊಂಡಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

