ಶಿವಮೊಗ್ಗ

ಸೇವೆ ಕಾಯಂಗೆ ಗ್ರಾಪಂ ನೌಕರರ ಆಗ್ರಹ

Published On :

ಸಾಗರ: ಸೇವೆ ಕಾಯಂ ಮಾಡಬೇಕು ಹಾಗೂ ಕನಿಷ್ಠ ರು. 10,000 ವೇತನ ನಿಗದಿಪಡಿಸಬೇಕು ಎಂದು ಗ್ರಾಮ ಪಂಚಾಯ್ತಿ ನೌಕರರ ಸಂಘದ ಸಾಗರ ಶಾಖೆ ವತಿಯಿಂದ ಎರಡು ದಿನಗಳ ಧರಣಿ ಸತ್ಯಾಗ್ರಹಕ್ಕೆ ಬುಧವಾರ ತಾಲೂಕು ಪಂಚಾಯ್ತಿ ಎದುರಿನಲ್ಲಿ ಚಾಲನೆ ನೀಡಲಾಯಿತು.
  ಧರಣಿಯಲ್ಲಿ ಸಂಘದ ತಾಲೂಕು ಅಧ್ಯಕ್ಷ ಶೇಖರಪ್ಪ ಕೋಳೂರು, ಬೆಲೆ ಏರಿಕೆಯಿಂದ ಸರ್ಕಾರ ಗ್ರಾಮ ಪಂಚಾಯ್ತಿ ನೌಕರರಿಗೆ ನೀಡುವ ವೇತನ ಒಪ್ಪೊತ್ತಿನ ಊಟಕ್ಕೆ ಸಾಲದ ಸ್ಥಿತಿ ನಿರ್ಮಾಣವಾಗಿದೆ. ಎಲ್ಲಾ ಅಗತ್ಯವಸ್ತುಗಳ ಬೆಲೆ ಏರಿದ್ದು, ನೌಕರರು ಸಂಕಷ್ಟದಲ್ಲಿ ಜೀವನ ಸಾಗಿಸುವಂತೆ ಆಗಿದೆ. ಸರ್ಕಾರ ನೌಕರರ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸುತ್ತಿಲ್ಲ ಎಂದು ದೂರಿದರು.
  ಗ್ರಾಮ ಪಂಚಾಯ್ತಿ ಸಿಬ್ಬಂದಿಗೆ 2004 ಹಾಗೂ 2008ರಲ್ಲಿ ಸೇವಾ ನಿಯಮಾವಳಿ ರಚಿಸಿದ್ದರೂ, ಅದು ಅಪೂರ್ಣವಾಗಿದೆ. ಸೇವಾ ನಿಯಮಾವಳಿಗಳು ನಗರಸಭೆ ನೌಕರರಿಗೆ ಇರುವಂತೆ ಪಂಚಾಯ್ತಿ ನೌಕರರಿಗೂ ರಚಿಸಬೇಕು ಎಂದು ಒತ್ತಾಯಿಸಿದರು.
 ಗ್ರಾಪಂ ಸಿಬ್ಬಂದಿಗೆ ನಿವೃತ್ತಿ ವೇತನ, ಗ್ರಾಚ್ಯುಯಿಟಿ ಹಾಗೂ ರಜೆಯ ನಗದು ಸಿಗುತ್ತಿಲ್ಲ. ಗ್ರಾಮೀಣ ಅಭಿವೃದ್ಧಿ  ಇಲಾಖೆ ನೌಕರರಿಗೆ ಈ ಎಲ್ಲಾ ಸೌಲಭ್ಯಗಳನ್ನು ಕಲ್ಪಿಸಬೇಕು. ನೌಕರಿಯನ್ನು ಖಾಯಂಗೊಳಿಸುವ ಜೊತೆಗೆ 2011ರ ಫೆಬ್ರವರಿಯಲ್ಲಿ ಜಾರಿಯಾದ ಕನಿಷ್ಠ ವೇತನ ಕೂಡಲೇ ಎಲ್ಲಾ ಸಿಬ್ಬಂದಿಗೆ ದೊರೆಯುವಂತೆ ಆಗಬೇಕು ಎಂದು ಆಗ್ರಹಿಸಿದರು.
 ಸಂಘದ ಕಾರ್ಯದರ್ಶಿ ರಿತೇಶ್, ಖಜಾಂಚಿ ಬಾಲಚಂದ್ರ, ಉಪಾಧ್ಯಕ್ಷ ನಾಗೇಶ್ ಭೀಮನೇರಿ, ಚನ್ನಬಸಪ್ಪ, ನಾರಾಯಣಪ್ಪ, ಶ್ರೀಧರ್, ಸುರೇಶ್ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.