ಶಿವಮೊಗ್ಗ

ಸ್ಟಾಫ್ ನರ್ಸ್ ಹುದ್ದೆಗೆ ಅರ್ಜಿ ಆಹ್ವಾನ

Published On :

ಶಿವಮೊಗ್ಗ: ಜಿಲ್ಲೆಯ ತಾಲೂಕು ಕೇಂದ್ರದಲ್ಲಿ ಶಾಲಾ ಆರೋಗ್ಯ ಕಾರ್ಯಕ್ರಮದಡಿ ಸಾಮಾನ್ಯ ವೈದ್ಯರು (ಎಂಬಿಬಿಎಸ್) ಹಾಗೂ ಸ್ಟಾಫ್ ನರ್ಸ್‌ನ್ನು ಗುತ್ತಿಗೆ ಆಧಾರದಲ್ಲಿ ನೇಮಕಾತಿ ಮಾಡಿಕೊಳ್ಳಲಾಗುವುದು. ಆಸಕ್ತರು ಫೆಬ್ರವರಿ 28ರ ಬೆಳಿಗ್ಗೆ 11 ಗಂಟೆಯೊಳಗಾಗಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಯವರ ಕಚೇರಿ ಸಭಾಂಗಣದಲ್ಲಿ ಮೂಲ ಅಂಕಪಟ್ಟಿ ಹಾಗೂ ಇತರೆ ದಾಖಲೆಗಳ 1ಜೊತೆ ದೃಢೀಕೃತ ನಕಲು ಪ್ರತಿಯೊಂದಿಗೆ ನೇರ ಸಂದರ್ಶನಕ್ಕೆ ಹಾಜರಾಗಲು ಸೂಚಿಸಿದೆ. ಮಾಹಿತಿಗಾಗಿ ಕಚೇರಿ ವೇಳೆಯಲ್ಲಿ ಸಂಪರ್ಕಿಸುವಂತೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ದೂ-08182 271282.
ಬಿಜೆಪಿ ಕಾರ್ಯಕರ್ತರ ಸಭೆ
ಶಿವಮೊಗ್ಗ: ನಗರದ ವಾರ್ಡ್ 5ರ ಗಾಡಿಕೊಪ್ಪ ವ್ಯಾಪ್ತಿಯ ಬಿಜೆಪಿ ಕಾರ್ಯಕರ್ತರ ಸಭೆ ಶುಕ್ರವಾರ ನಡೆಯಿತು.
ಇಲ್ಲಿನ ಶ್ರೀ ಬಸವೇಶ್ವರ ದೇವಸ್ಥಾನದಲ್ಲಿ ನಡೆದ ಕಾರ್ಯಕರ್ತರ ಸಭೆಯನ್ನುದ್ದೇಶಿ ವಾರ್ಡಿನ ಬಿಜೆಪಿ ಅಭ್ಯರ್ಥಿ, ನಗರಸಭಾ ಮಾಜಿ ಅಧ್ಯಕ್ಷ  ಎಸ್.ಎನ್.ಚನ್ನಬಸಪ್ಪ (ಚನ್ನಿ)ಮಾತನಾಡಿದರು.
ಪಕ್ಷದ ಗೆಲುವಿಗೆ ಶ್ರಮಿಸುವಂತೆ ಕರೆ ನೀಡಿದರಲ್ಲದೇ, ಬಿಜೆಪಿ ಸರ್ಕಾರದ ಆಡಳಿತ ಅವಧಿಯನ್ನು ಮುಂದಿಟ್ಟುಕೊಂಡು ಚುನಾವಣೆ ಎದುರಿಸುವಂತೆ ಕರೆ ನೀಡಿದರು. ತಮ್ಮ ನಗರಸಭಾ ಅಧ್ಯಕ್ಷ ಅವಧಿಯಲ್ಲಾದ ಕಾರ್ಯಕ್ರಮವನ್ನು ವಿವರಿಸಿದರು.
ಪಕ್ಷದ ಪ್ರಮುಖರು, ಸ್ಥಳೀಯ ನಾಯಕರು ಈ ಸಂದರ್ಭದಲ್ಲಿ ಹಾಜರಿದ್ದರು.
ಇಂದು ಕೃಷಿ ಫೌಂಡೇಶನ್ ಶಾಖೆ ಪ್ರಾರಂಭ
ತೀರ್ಥಹಳ್ಳಿ: ಬೆಂಗಳೂರಿನ ಕೃಷಿಕ್ ಸರ್ವೋದಯ ಫೌಂಡೇಶನ್ ತೀರ್ಥಹಳ್ಳಿಯಲ್ಲಿ ತನ್ನ ಶಾಖೆ ಪ್ರಾರಂಭಿಸುತ್ತಿದ್ದು,  ಈ ಸಂಸ್ಥೆಯ ಉದ್ಘಾಟನೆ ಶನಿವಾರ ತುಂಗಾ ಮಹಾವಿದ್ಯಾಲಯದ ರಜತ ಸಭಾಂಗಣದಲ್ಲಿ  ನೆರವೇರಲಿದೆ.     
 ಐಎಎಸ್, ಐಪಿಎಸ್ ಮೊದಲಾದ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತರಬೇತಿ ನೀಡುವ ಗುರಿ ಹೊಂದಿರುವ ಈ ಸಂಸ್ಥೆಯ ಉದ್ದೇಶ ತಾಲೂಕಿನ ವಿದ್ಯಾರ್ಥಿಗಳಿಗೆ ವರದಾನವಾಗಲಿದೆ. ಶಾಸಕ ಕಿಮ್ಮನೆ ರತ್ನಾಕರ್ ಶಾಖೆ ಉದ್ಘಾಟಿಸಿವರು. ತೀರ್ಥಹಳ್ಳಿ ಶಾಖೆ ಅಧ್ಯಕ್ಷ ಕೋಡ್ಲು ರಾಮಕೃಷ್ಣ ಭಾಷಣ ಮಾಡುವರು. ಕೃಷಿಕ್ ಸರ್ವೋದಯ ಫೌಂಡೇಶನ್ ಅಧ್ಯಕ್ಷ ವೈ.ಕೆ. ಪುಟ್ಟಸೋಮೇಗೌಡ  ಅಧ್ಯಕ್ಷತೆ ವಹಿಸುವರು.  ಐಎಎಸ್ ಅಧಿಕಾರಿ ಡಾ. ಶಾಲಿನಿ ರಜನೀಶ್,  ಡಿ.ಸಿ. ಶ್ರೀಧರ್, ಐಆರ್‌ಎಸ್,     ಅರುಣ್ ಚಕ್ರವರ್ತಿ, ಐಪಿಎಸ್, ಕೆ.ವಿ.ಆರ್. ಟ್ಯಾಗೂರ್,  ಬಿ.ಎಂ. ಪರಮೇಶ್ವರ್ ಐಎಫ್‌ಎಸ್ ಭಾಗವಹಿಸಲಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.