ಶಿವಮೊಗ್ಗ

ಖಾಲಿ ಡಬ್ಬ ನೋಡಿ ಭಯಭೀತರಾದ ಜನತೆ

Published On :

ಸಾಗರ: ಪಟ್ಟಣದ ಎಸ್.ಎನ್. ನಗರದಲ್ಲಿ ಶುಕ್ರವಾರ ರಾತ್ರಿ ಕುರುಚಲು ಪೊದೆಯೊಂದರಲ್ಲಿ ಬಿದ್ದಿದ್ದ ಪ್ಲಾಸ್ಟಿಕ್ ಬ್ಯಾಗ್ ಸಾರ್ವಜನಿಕರ ಆತಂಕಕ್ಕೆ ಕಾರಣವಾಯಿತು. ಕೆಲವು ಯುವಕರು ಬ್ಯಾಗನ್ನು ಕಾಲಿನಿಂದ ತಳ್ಳಿದಾಗ ಅದರೊಳಗಿಂದ ಟಿಟ್ ಟಿಕ್ ಶಬ್ಧ ಕೇಳಿ ಬಂದಿದ್ದು, ಇನ್ನಷ್ಟು ಭಯ ಹುಟ್ಟಲು ಕಾರಣವಾಗಿತ್ತು.
   ಹೈದರಾಬಾದ್ ಬಾಂಬ್ ಸ್ಫೋಟದ ಬೆನ್ನಲ್ಲಿಯೇ ಪಟ್ಟಣದಲ್ಲಿ ಈ ರೀತಿಯ ವಿದ್ಯಮಾನ ನಡೆದಿರುವುದು ಭಯಕ್ಕೆ ಕಾರಣವಾಗಿತ್ತು.
   ಜೊತೆಗೆ ದೃಶ್ಯ ಮಾಧ್ಯಮಗಳು ಪದೇಪದೇ ಬಾಂಬ್ ಸ್ಫೋಟದ ದೃಶ್ಯವನ್ನು ತೆರೆಯ ಮೇಲೆ ಬಿತ್ತರಿಸುತ್ತಿರುವುದು ಹಾಗೂ ಉಗ್ರರು ಕರ್ನಾಟಕಕ್ಕೂ ನುಸುಳುವ ಸಾಧ್ಯತೆ ಇದೆ ಎಂದು ಶಂಕೆ ವ್ಯಕ್ತಪಡಿಸುತ್ತಿರುವುದು ಜನರ ಆತಂಕಕ್ಕೆ ಕಾರಣವಾಗಿತ್ತು. ಪ್ಲಾಸ್ಟಿಕ್ ಬ್ಯಾಗ್ ಕಂಡ ತಕ್ಷಣ ಹಲವು ಅನುಮಾನಗಳಿಗೆ ಕಾರಣವಾಯಿತು.
ನಗರಸಭೆ ಮಾಜಿ ಸದಸ್ಯೆ ನೇತ್ರಾವತಿ ಜಂಬಿಗೆ ಅವರ ಮನೆಯ ಪಕ್ಕದ ಖಾಲಿ ಜಾಗದಲ್ಲಿ ಕುರುಚಲು ಗಿಡದ ಪೊದೆಯ ಮಧ್ಯದಲ್ಲಿ ಬೆಳಗ್ಗೆಯಿಂದಲೆ ಬೃಹತ್ ಗಾತ್ರದ ಹೊಸದಾದ ಪ್ಲಾಸ್ಟಿಕ್ ಚೀಲವೊಂದು ಬಾಯಿ ಕಟ್ಟಿದ ಸ್ಥಿತಿಯಲ್ಲಿ ಬಿದ್ದಿತ್ತು.
   ಸಾರ್ವಜನಿಕರು ಈ ಚೀಲವನ್ನು ಆಶ್ಚರ್ಯದಿಂದಲೇ  ನೋಡುತ್ತಾ ಹೋಗುತ್ತಿದ್ದರು.
ರಾತ್ರಿ ವೇಳೆಗೆ ಪೊಲೀಸರಿಗೆ ವಿಷಯ ಮುಟ್ಟಿಸಿದ್ದು, ಪೇಟೆ ವೃತ್ತ ನಿರೀಕ್ಷಕ ಮಂಜಪ್ಪ ಸ್ಥಳಕ್ಕೆ ಆಗಮಿಸಿ ಸಾರ್ವಜನಿಕರ ಸಹಕಾರದಿಂದ ಬ್ಯಾಗ್ ಪರಿಶೀಲನೆ ಮಾಡಿದಾಗ ಅದರಲ್ಲಿ ಅನುಪಯುಕ್ತ ವಸ್ತುಗಳು, ಬಟ್ಟೆ, ಮದ್ಯದ ಖಾಲಿ ಬಾಟಲ್ ಇರುವುದು ಕಂಡು ಬಂದಿದೆ. ಪೊಲೀಸ್ ಸಿಬ್ಬಂದಿ ಮಂಜಪ್ಪ, ಕುಮಾರ್ ಹಾಜರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.