ಶಿವಮೊಗ್ಗ

ಜಿಲ್ಲೆಯ 176 ಕ್ಷೇತ್ರಗಳಿಗೆ 1,203 ಮಂದಿ ಸ್ಪರ್ಧೆ

Published On :

ಶಿವಮೊಗ್ಗ: ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆ ಒಂದನೇ ಹಂತದ ಅಖಾಡ ಸಿದ್ಧವಾಗಿದೆ.
ಅಭ್ಯರ್ಥಿಗಳ ನಾಮ ಪತ್ರ ಸಲ್ಲಿಕೆ ಪ್ರಕ್ರಿಯೆ(ಫೆ.23) ಮುಕ್ತಾಯವಾಗಿದ್ದು, ಜಿಲ್ಲೆಯ ಎರಡು ನಗರಸಭೆ, ಒಂದು ಪುರಸಭೆ ಹಾಗೂ ನಾಲ್ಕು ಪಪಂನ 176 ವಾರ್ಡ್‌ಗಳಿಗೆ ಎಲ್ಲಾ ಪ್ರಮುಖ ಪಕ್ಷಗಳ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದಾರೆ.
ನಗರಸಭೆ ವ್ಯಾಪ್ತಿಯಲ್ಲಿ ಶಿವಮೊಗ್ಗ 35, ಭದ್ರಾವತಿ 35, ಸಾಗರ 31 ವಾರ್ಡ್‌ಗಳಿವೆ. ಶಿಕಾರಿಪುರ ಪುರಸಭೆ ವ್ಯಾಪ್ತಿಗೆ 23 ವಾರ್ಡ್, ಪಪಂ ವ್ಯಾಪ್ತಿಗೆ ತೀರ್ಥಹಳ್ಳಿಯ 15, ಶಿರಾಳಕೊಪ್ಪದ 15, ಸೊರಬದ 11, ಹೊಸನಗರದ 11 ವಾರ್ಡ್‌ಗಳು ಬರಲಿವೆ.
ಒಟ್ಟಾರೆ 176 ಕ್ಷೇತ್ರಗಳಿಗೆ ನಾಮ ಪತ್ರಸಲ್ಲಿಸಿದವರ ಸಂಖ್ಯೆ 1,203 ಆಗಿದ್ದು, ಶಿವಮೊಗ್ಗ ನಗರಸಭೆಯ 35 ವಾರ್ಡ್‌ಗಳಿಗೆ 267, ಭದ್ರಾವತಿಯ ನಗರಸಭೆ ವ್ಯಾಪ್ತಿಗೆ 35 ವಾರ್ಡ್‌ಗಳಿದ್ದು 271, ಸಾಗರ ವ್ಯಾಪ್ತಿಗೆ 31 ವಾರ್ಡ್‌ಗೆ 186, ಶಿಕಾರಿಪುರ (ಪುರಸಭೆ) 23 ವಾರ್ಡ್ 178, ಪಪಂ ತೀರ್ಥಹಳ್ಳಿ 15 ವಾರ್ಡ್ 71, ಶಿರಾಳಕೊಪ್ಪ 15 ವಾರ್ಡ್ 97, ಸೊರಬ 11 ವಾರ್ಡ್ 74, ಹೊಸನಗರ 11 ವಾರ್ಡ್ 59 ಅಭ್ಯರ್ಥಿಗಳು ನಾಮ ಪತ್ರ ಸಲ್ಲಿಸಿದ್ದಾರೆ. ಕೆಲವು ಅಭ್ಯರ್ಥಿಗಳು ಒಂದಕ್ಕಿಂತ ಹೆಚ್ಚು ನಾಮಪತ್ರ ಸಲ್ಲಿಸಿದ್ದು, ಒಟ್ಟಾರೆ 1,337 ನಾಮಪತ್ರ ಸಲ್ಲಿಕೆಯಾಗಿದೆ.
ಶಿವಮೊಗ್ಗ ನಗರಸಭೆ: ಕಾಂಗ್ರೆಸ್ 54, ಬಿಜೆಪಿಯಿಂದ 52,  ಜೆಡಿಎಸ್ 50, ಕೆಜೆಪಿ 39, ಬಿಎಸ್‌ಆರ್ 23, ಸ್ವತಂತ್ರ ಅಭ್ಯರ್ಥಿಗಳು 83, ಎನ್‌ಸಿಪಿ 1, ಜೆಡಿಯು 3, ಅಖಿಲ ಭಾರತ ಪ್ರಗತಿ ಪರ ಜನತಾದಳದಿಂದ 2, ವೆಲ್‌ಫೇರ್1, ಜನತಾಪಕ್ಷ2,  ಭಾರತೀಯ ಪ್ರಜಾ ಪಕ್ಷ 13  ಒಟ್ಟು 323.
ಭದ್ರಾವತಿ: ಕಾಂಗ್ರೆಸ್ 58, ಬಿಜೆಪಿಯಿಂದ 31, ಜೆಡಿಎಸ್ 66, ಕೆಜೆಪಿ 30, ಬಿಎಸ್‌ಆರ್ 10, ಸ್ವತಂತ್ರ ಅಭ್ಯರ್ಥಿಗಳು 82, ಜೆಡಿಯು 1, ಅಖಿಲ ಭಾರತ ಪ್ರಗತಿ ಪರ ಜನತಾದಳದಿಂದ 2, ವೆಲ್‌ಫೇರ್ 2, ಡಿಎಂಕೆ 1, ಒಟ್ಟು 285.
ಸಾಗರ: ಕಾಂಗ್ರೆಸ್ 49, ಬಿಜೆಪಿಯಿಂದ 36,  ಜೆಡಿಎಸ್ 26, ಕೆಜೆಪಿ 33, ಬಿಎಸ್‌ಆರ್ 32, ಸ್ವತಂತ್ರ ಅಭ್ಯರ್ಥಿಗಳು 36,  ಒಟ್ಟು 212.
ಪುರಸಭೆ ಶಿಕಾರಿಪುರ: ಕಾಂಗ್ರೆಸ್ 51, ಬಿಜೆಪಿಯಿಂದ 23,  ಜೆಡಿಎಸ್ 17, ಕೆಜೆಪಿ 41, ಬಿಎಸ್‌ಆರ್ 14, ಸ್ವತಂತ್ರ ಅಭ್ಯರ್ಥಿಗಳು 32,  ಒಟ್ಟು 178.
ಪಪಂ: ತೀರ್ಥಹಳ್ಳಿ-
ಕಾಂಗ್ರೆಸ್ 15, ಬಿಜೆಪಿಯಿಂದ 17,  ಜೆಡಿಎಸ್ 17, ಕೆಜೆಪಿ 12, ಬಿಎಸ್‌ಆರ್ 2, ಸ್ವತಂತ್ರ ಅಭ್ಯರ್ಥಿಗಳು 43,  ಒಟ್ಟು 106.
ಶಿರಾಳಕೊಪ್ಪ: ಕಾಂಗ್ರೆಸ್ 15, ಬಿಜೆಪಿಯಿಂದ 21, ಜೆಡಿಎಸ್ 11, ಕೆಜೆಪಿ 18, ಬಿಎಸ್‌ಆರ್ 8, ಸ್ವತಂತ್ರ ಅಭ್ಯರ್ಥಿಗಳು 24, ಎನ್‌ಸಿಪಿ 1, ಒಟ್ಟು 97.
ಸೊರಬ: ಕಾಂಗ್ರೆಸ್ 12, ಬಿಜೆಪಿಯಿಂದ 12, ಜೆಡಿಎಸ್ 11, ಕೆಜೆಪಿ 11, ಬಿಎಸ್‌ಆರ್ 9, ಸ್ವತಂತ್ರ ಅಭ್ಯರ್ಥಿಗಳು 22,  ಒಟ್ಟು 77.
ಹೊಸನಗರ: ಕಾಂಗ್ರೆಸ್ 12, ಬಿಜೆಪಿಯಿಂದ 10,  ಜೆಡಿಎಸ್ 11, ಕೆಜೆಪಿ 11, ಬಿಎಸ್‌ಆರ್ 9, ಸ್ವತಂತ್ರ ಅಭ್ಯರ್ಥಿಗಳು 2, ಜೆಡಿಯು 1, ಎಸ್‌ಡಿಪಿಐ 3,  ಒಟ್ಟು 59.
ಒಟ್ಟಾರೆ ಕಾಂಗ್ರೆಸ್ 266, ಬಿಜೆಪಿ 202, ಜೆಡಿಎಸ್ 209, ಸಿಪಿಐ2, ಎನ್‌ಸಿಪಿ1, ಸ್ವತಂತ್ರ 324, ಜೆಡಿಯು 5, ಅಖಿಲಾ ಭಾರತ ಪ್ರಗತಿ ಪರ ಜನತಾದಳ 4, ವೆಲ್‌ಫೇರ್ 3, ಜನತಾಪಕ್ಷ 2, ಡಿಎಂಕೆ 1, ಭಾರತೀಯ ಪ್ರಜಾ ಪ್ರಕ್ಷ 13 ಕೆಜೆಪಿ 195, ಎಸ್‌ಡಿಪಿಐ 3 ಹಾಗೂ ಬಿಎಸ್‌ಆರ್ 107  ಒಟ್ಟು 1,337 ಅಭ್ಯರ್ಥಿಗಳು ಚುನಾವಣಾ ಕಣದಲ್ಲಿದ್ದಾರೆ.

ಇಂದು ಬಿಎಸ್‌ವೈ ಸಭೆ
ಸ್ಥಳೀಯ ಸಂಸ್ಥೆಯ ಚುನಾವಣೆಯನ್ನೂ ಗಂಭೀರವಾಗಿ ಪರಿಗಣಿಸಿರುವ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ನೇರವಾಗಿ ಅಖಾಡಕ್ಕಿಳಿದಿದ್ದಾರೆ.
ಮೊದಲ ಹಂತದ ಪ್ರಚಾರಕ್ಕಾಗಿ ಅವರು ಸೋಮವಾರ ಶಿವಮೊಗ್ಗಕ್ಕೆ ಆಗಮಿಸುತ್ತಿದ್ದಾರೆ. ಬೆಳಿಗ್ಗೆ 9 ಗಂಟೆಗೆ ಇಲ್ಲಿನ ಸಾಗರ ರಸ್ತೆಯಲ್ಲಿರುವ ಲಗಾನ್ ಕಲ್ಯಾಣ ಮಂದಿರದಲ್ಲಿ  ಏರ್ಪಡಿಸಿಸಿರುವ ಪಕ್ಷದ ಕಾರ್ಯಕರ್ತರ ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ.
 ನಂತರ ಬೆಳಿಗ್ಗೆ 11 ಗಂಟೆಗೆ ಶಿರಾಳಕೊಪ್ಪಕ್ಕೆ ತೆರಳಲಿದ್ದು, ಅಲ್ಲಿ ಪಕ್ಷದ ಕಾರ್ಯರ್ತರ ಸಭೆ ನಡೆಸಲಿದ್ದಾರೆ. ಮಧ್ಯಾಹ್ನ 12.30ಕ್ಕೆ ಶಕುನಹಳ್ಳಿ, ಜಡೆಯಲ್ಲಿ ಧಾರ್ಮಿಕ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ. ಮಧ್ಯಾಹ್ನ 2 ಗಂಟೆಗೆ ಸೊರಬ ಪಟ್ಟಣದಲ್ಲಿ ಕಾರ್ಯಕರ್ತರ ಸಭೆ ನಡೆಸಲಿದ್ದು,  ಸಂಜೆ 5 ಗಂಟೆಗೆ ಶಿಕಾರಪುರದಲ್ಲಿ ಕಾರ್ಯಕರ್ತರ ಸಭೆಯಲ್ಲಿ ಭಾಗವಹಿಸಲಿರುವರು ಎಂದು ಪಕ್ಷ ತಿಳಿಸಿದೆ.
---
ಮತದಾರರಿಗೆ ಆಮಿಷವೊಡ್ಡಿದವರ ಮೇಲೆ ಕ್ರಮ
ಶಿವಮೊಗ್ಗ: ಮತದಾರರಿಗೆ ಸೀರೆಯ ಆಮಿಷವೊಡ್ಡುತ್ತಿದ್ದ ಆರೋಪದ ಮೇರೆಗೆ ಮೂವರ ವಿರುದ್ಧ ಶಿವಮೊಗ್ಗ ಚುನಾವಣಾ ನೋಡಲ್ ಅಧಿಕಾರಿ ಕುಸುಮ ಅವರು ದೊಡ್ಡಪೇಟೆ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಎಸ್.ಆರ್. ರಮೇಶ್ ಸಿಂಗ್ ಬಾಬು, ಪ್ರಸನ್ನ ಹಾಗೂ ರಮೇಶ್ ಸಿಂಗ್ ವಿರುದ್ಧ ದೂರು ದಾಖಲಿಸಲಾಗಿದೆ. ನಗರಸಭೆ ಚುನಾವಣೆಯ ಹಿನ್ನೆಲೆಯಲ್ಲಿ ಈ ಮೂವರು ಸೀಗೆಹಟ್ಟಿ ವ್ಯಾಪ್ತಿಯಲ್ಲಿ ಮತದಾರರಿಗೆ ಸೀರೆಗಳನ್ನು ಹಂಚುತ್ತಿದ್ದರು.
ಈ ಕುರಿತು ಮಾಹಿತಿ ಪಡೆದ ಉಪ ವಿಭಾಗಾಧಿಕಾರಿ ಕುಸುಮ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದಾರೆ. ಸೂಕ್ತ ಮಾಹಿತಿ ಅನ್ವಯ ಅವರು ಮೂವರ ವಿರುದ್ಧ ಚುನಾವಣಾ ನೀತಿ-ಸಂಹಿತೆ ಉಲ್ಲಂಘಿಸಿದ ಆಪಾದನೆಯ ಮೇರೆಗೆ ಮತದಾರರಿಗೆ ಆಮಿಷವೊಡ್ಡಿದ ಪ್ರಕರಣದಡಿ ದೂರು ಸಲ್ಲಿಸಿದ್ದು, ಪ್ರಕರಣ ದಾಖಲಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.